
ದೆಹಲಿ ಕ್ರಿಕೆಟ್‌ನ ಆರಂಭಿಕ ದಿನಗಳಿಂದಲೂ ವಿರಾಟ್ ಕೊಹ್ಲಿ ಜೊತೆಯಲ್ಲಿಯೇ ಆಡುತ್ತಾ ಬೆಳೆದ ಭಾರತದ ವೇಗಿ ಇಶಾಂತ್ ಶರ್ಮಾ, ತಮ್ಮ ಜೊತೆ ಬೆಳೆದವರಿಗೆ ಅವರು ಯಾವಾಗಲೂ "ಚೀಕು" ಆಗಿರುತ್ತಾರೆ ಎಂದು ಶನಿವಾರ ಹೇಳಿದ್ದಾರೆ. 17 ವರ್ಷದೊಳಗಿನವರ ಹಂತದಿಂದ ಹಿಡಿದು ಭಾರತ ತಂಡದವರೆಗೆ ಕೊಹ್ಲಿ ಜೊತೆ ಆಡಿದ್ದ ಇಶಾಂತ್, ಕೊಹ್ಲಿ ಅವರು ಹೊರಗಿನವರಿಗೆ ಮಾತ್ರ ಸೂಪರ್ ಸ್ಟಾರ್, ಬಾಲ್ಯದಿಂದ ಪರಿಚಿತವಾಗಿರುವವರಿಗೆ ಬೇರೆಯೇ ಎಂದು ಹೇಳಿದ್ದಾರೆ.
'ವಿರಾಟ್ ಕೊಹ್ಲಿ ತಾರೆ ಎಂಬುದು ಹೊರಗಿನವರಿಗೆ ಮಾತ್ರ ಎಂದು ನಾನು ಭಾವಿಸುತ್ತೇನೆ. ನಾವು U-17 ತಂಡದಲ್ಲಿ ಆಡಿದ್ದರಿಂದ ನಾನು ಅವರನ್ನು ಹಾಗೆ ನೋಡಲು ಸಾಧ್ಯವಿಲ್ಲ. ಅವರು ನನಗೆ ಬಾಲ್ಯದ ಸ್ನೇಹಿತ' ಎಂದು 105 ಟೆಸ್ಟ್‌ಗಳಲ್ಲಿ 434 ವಿಕೆಟ್‌ಗಳನ್ನು ಕಬಳಿಸಿರುವ ಇಶಾಂತ್, ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಗುಜರಾತ್ ಟೈಟಾನ್ಸ್ ಪಂದ್ಯದ ಮುನ್ನಾದಿನ ಸ್ಟಾರ್ ಸ್ಪೋರ್ಟ್ಸ್ ಪ್ರೆಸ್ ರೂಮ್‌ನಲ್ಲಿ ಹೇಳಿದರು.
36 ವರ್ಷ ವಯಸ್ಸಿನ ಇಶಾಂತ್, ಅಂಡರ್ 19 ತಂಡದಲ್ಲಿರುವಾಗ ಒಂದೇ ಕೊಠಡಿಯಲ್ಲಿದ್ದದ್ದು, ಊಟ ಮಾಡಿದ್ದು ಮತ್ತು ಪ್ರಯಾಣ ಭತ್ಯೆಯನ್ನು ಉಳಿಸಿದ್ದು ಸೇರಿದಂತೆ ವಿರಾಟ್ ಕೊಹ್ಲಿ ಬಗೆಗಿನ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
'ನಾವು ಅಂಡರ್ 19 ತಂಡಕ್ಕಾಗಿ ಆಡುವಾಗ, ನಮ್ಮ ಬಳಿ ಎಷ್ಟು ಹಣವಿದೆ ಎಂದು ಎಣಿಸುತ್ತಿದ್ದೆವು. ನಾವು ಒಟ್ಟಾಗಿ ಊಟ ಮಾಡುತ್ತಿದ್ದೆವು. ನಾವು ಅಂಡರ್ 19 ತಂಡಕ್ಕಾಗಿ ಆಡಲು ಹೋಗುವಾಗ, ನಮ್ಮ ಟಿಎಗಳನ್ನು ಉಳಿಸಿ ನಮ್ಮೊಂದಿಗೆ ತೆಗೆದುಕೊಂಡು ಹೋಗುತ್ತಿದ್ದೆವು. ವಿರಾಟ್ ಕೊಹ್ಲಿ ಎಲ್ಲರಿಗೂ ವಿಭಿನ್ನ ಮತ್ತು ನನಗೂ ಅವರು ವಿಭಿನ್ನ. ಕೊಹ್ಲಿಯ ಸ್ಟಾರ್‌ಡಮ್ ಹೊರತಾಗಿಯೂ ತಮ್ಮ ಬಾಂಧವ್ಯ ಸಹೋದರತ್ವದಿಂದ ಕೂಡಿದೆ' ಎಂದು ಹೇಳಿದರು.
'ನಿಮ್ಮ ಸಹೋದರ ಅಷ್ಟೊಂದು ಎತ್ತರಕ್ಕೆ ತಲುಪಿದ್ದಾನೆಂದು ಊಹಿಸಿಕೊಳ್ಳಿ. ಎಲ್ಲರೂ ಅವನು ಶ್ರೇಷ್ಠ ಎಂದು ಭಾವಿಸುತ್ತಿದ್ದಾರೆ. ಆದರೆ ದಿನದ ಕೊನೆಯಲ್ಲಿ, ಅವನು ಒಬ್ಬ ಮನುಷ್ಯ ಎಂದು ನೀವು ನೋಡುತ್ತೀರಿ. ದಿನದ ಕೊನೆಯಲ್ಲಿ, ನೀವು ಅವನೊಂದಿಗೆ ಸಾಕಷ್ಟು ಸಮಯ ಕಳೆದಿದ್ದೀರಿ. ನೀವು ಅವನನ್ನು ಒಳಗೆ ಮತ್ತು ಹೊರಗೆ ತಿಳಿದಿದ್ದೀರಿ. ಅವನು ಎಲ್ಲಿಂದ ಬಂದಿದ್ದಾನೆ, ಅವನು ಹೇಗಿದ್ದಾನೆ ಮತ್ತು ಅವನು ಯಾವ ರೀತಿ ಇಲ್ಲ ಎಂದು ನಿಮಗೆ ತಿಳಿದಿದೆ' ಇತ್ತೀಚಿನ ಐಪಿಎಲ್ ಪಂದ್ಯಕ್ಕೂ ಮುನ್ನ ಇಬ್ಬರೂ ಮೈದಾನದಲ್ಲಿ ಅಪ್ಪಿಕೊಳ್ಳುತ್ತಿರುವುದು ಕಂಡುಬಂದಿತು. ಆ ಕ್ಷಣದ ಫೋಟೊಗಳು ವೈರಲ್ ಆದವು.
'ನಾವು ಭೇಟಿಯಾದಾಗ, ನಾವು ಎಷ್ಟು ಟೆಸ್ಟ್ ಪಂದ್ಯಗಳನ್ನು ಆಡಿದ್ದೇವೆ ಎಂಬುದರ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ. ನಾವು ಕ್ರಿಕೆಟ್ ಕುರಿತಾದ ವಿಚಾರಗಳ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ. ನಾವು ತಮಾಷೆ ಮಾಡುತ್ತಾ ಜೋಕ್‌ಗಳ ಬಗ್ಗೆ ಮಾತನಾಡುತ್ತೇವೆ. ಇದು ನಡೆಯುತ್ತಿದೆ, ಅದು ನಡೆಯುತ್ತಿದೆ, ಇದನ್ನು ನೋಡಿ, ಅದನ್ನು ನೋಡಿ ಎಂದು ತಮಾಷೆಯಾಗಿ ಮಾತನಾಡಿಕೊಳ್ಳುತ್ತೇವೆ' ಎಂದು ಅವರು ಹೇಳಿದರು.
'ಅವರು ವಿರಾಟ್ ಕೊಹ್ಲಿ ಎಂದು ನನಗೆ ಎಂದಿಗೂ ಅನಿಸಿಲ್ಲ. ನಮಗೆ ಅವರು ಚೀಕು. ನಾವು ಯಾವಾಗಲೂ ಅವರನ್ನು ಹೀಗೆಯೇ ನೋಡಿದ್ದೇವೆ. ಅವರು ನನ್ನನ್ನು ಹೀಗೆಯೇ ನೋಡಿದ್ದಾರೆ. ನಾವು ಒಟ್ಟಿಗೆ ಮಲಗುತ್ತಿದ್ದೆವು ಮತ್ತು ಒಂದೇ ಕೊಠಡಿಯಲ್ಲಿದ್ದೆವು' ಎಂದರು.
ಇಬ್ಬರೂ ಆಟಗಾರರು 2000ರ ದಶಕದ ಉತ್ತರಾರ್ಧದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ವಿರಾಟ್ ಕೊಹ್ಲಿಗಿಂತ ಸ್ವಲ್ಪ ಮೊದಲು ಇಶಾಂತ್ ಶರ್ಮಾ ರಾಷ್ಟ್ರೀಯ ತಂಡಕ್ಕೆ ಪ್ರವೇಶಿಸಿದರು. ಭಾರತ ತಂಡಕ್ಕೆ ಆಯ್ಕೆ ಕುರಿತು ಕೊಹ್ಲಿ ತಮಗೆ ಹೇಳಿದ್ದ ಕ್ಷಣವನ್ನು ನೆನಪಿಸಿಕೊಂಡರು.
ಇಶಾಂತ್ ಶರ್ಮಾ ಭಾರತ ತಂಡಕ್ಕೆ ಪದಾರ್ಪಣೆ ಮಾಡುವ ಹಂತದಲ್ಲಿದ್ದಾಗ ವಿರಾಟ್ ಕೊಹ್ಲಿ ನನ್ನನ್ನು ಒದ್ದು, ರಾಷ್ಟ್ರೀಯ ತಂಡಕ್ಕೆ ನಿನ್ನ ಹೆಸರನ್ನು ಘೋಷಿಸಲಾಗಿದೆ ಎಂದು ಉತ್ಸಾಹದಿಂದ ಹೇಳಿದ್ದರು. 'ನೀನು ನಿಜವಾಗಿಯೂ ಭಾರತಕ್ಕಾಗಿ ಆಡುತ್ತೀಯಾ?' ಎಂದು ಕೇಳಿದ್ದರು. ಆಗ ನಾನು, ಸೋದರ, 'ನನಗೆ ನಿದ್ರೆ ಮಾಡಲು ಬಿಡು' ಎಂದಿದ್ದೆ ಎಂದರು.
Advertisement