

ಚೆನ್ನೈ ಸೂಪರ್ ಕಿಂಗ್ಸ್ (CEO) ಸಿಇಒ ಕಾಸಿ ವಿಶ್ವನಾಥನ್ ಅವರು ಐಪಿಎಲ್ 2026ಕ್ಕೂ ಮುನ್ನ ಎಂಎಸ್ ಧೋನಿ ನಿವೃತ್ತಿ ಹೊಂದುವುದಿಲ್ಲ ಎಂದು ಮತ್ತೊಮ್ಮೆ ದೃಢಪಡಿಸಿದ್ದಾರೆ. ಐಪಿಎಲ್‌ನಲ್ಲಿ ಭಾರತದ ಮಾಜಿ ನಾಯಕನ ಭವಿಷ್ಯದ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಡಿವೆ. ವಿಶೇಷವಾಗಿ ಐಪಿಎಲ್ 2025ರಲ್ಲಿ ಕಳಪೆ ಪ್ರದರ್ಶನ ನೀಡಿದ ನಂತರ ವದಂತಿಗಳು ಹೆಚ್ಚಾಗಿದ್ದವು. ಈ ವರ್ಷದ ಆರಂಭದಲ್ಲಿ ಧೋನಿ ತಮ್ಮ ಭವಿಷ್ಯದ ಬಗ್ಗೆ ನಿರ್ಧರಿಸಲು ಸಾಕಷ್ಟು ಸಮಯವಿದೆ ಎಂದು ಸ್ಪಷ್ಟವಾಗಿ ಹೇಳಿದ್ದರು. ಇದೀಗ ಸಿಎಸ್‌ಕೆ ಧೋನಿ ನಿಜವಾಗಿಯೂ ತಂಡದಲ್ಲಿರುತ್ತಾರೆ ಮತ್ತು ಮುಂದಿನ ಆವೃತ್ತಿಯ ಭಾಗವಾಗಿರುತ್ತಾರೆ ಎಂದು ದೃಢಪಡಿಸಿದೆ.
ಪ್ರೊವೋಕ್ ಲೈಫ್‌ಸ್ಟೈಲ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ, ಬಾಲಕನೊಬ್ಬ ಧೋನಿ ಶೀಘ್ರದಲ್ಲೇ ನಿವೃತ್ತರಾಗುತ್ತಾರೆಯೇ ಎಂದು ಸಿಎಸ್‌ಕೆ ಸಿಇಒ ಅನ್ನು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥನ್, ಧೋನಿ ಸದ್ಯಕ್ಕೆ ನಿವೃತ್ತರಾಗುವುದಿಲ್ಲ. ಆದರೆ, ಸಿಎಸ್‌ಕೆ ಮಾಜಿ ನಾಯಕನನ್ನೇ ನೀವು ಯಾವಾಗ ನಿವೃತ್ತರಾಗುತ್ತೀರಿ ಎಂದು ಕೇಳಬೇಕು ಎಂದು ಹೇಳಿದ್ದಾರೆ.
'ನಾವು ಗೆಲ್ಲಲು ಯೋಜಿಸುತ್ತಿದ್ದೇವೆ. ಆದರೆ ಅದು ನಮಗೆ ಸಾಧ್ಯವಾಗುತ್ತದೆಯೇ ಎಂಬುದು ನಮಗೆ ತಿಳಿದಿಲ್ಲ. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಇಲ್ಲ, ಧೋನಿ ನಿವೃತ್ತರಾಗುವುದಿಲ್ಲ. ನಾನು ಅವರನ್ನು (ಯಾವಾಗ ನಿವೃತ್ತರಾಗುತ್ತಾರೆ) ಕೇಳಿ ನಿಮಗೆ ಉತ್ತರಿಸುತ್ತೇನೆ' ಎಂದು ಸಿಎಸ್‌ಕೆ ಸಿಇಒ ಹೇಳಿದರು.
'ನಾನು ಕಳೆದ ಕೆಲವು ವರ್ಷಗಳಿಂದ ಆಡುತ್ತಿರುವ ಕ್ರಿಕೆಟ್ ಅನ್ನು ಆನಂದಿಸಲು ಬಯಸುತ್ತೇನೆ. ವೃತ್ತಿಪರ ಕ್ರೀಡೆಯಂತೆ ಕ್ರಿಕೆಟ್ ಆಡುವಾಗ, ಅದನ್ನು ಆಟದಂತೆ ಆನಂದಿಸುವುದು ಕಷ್ಟವಾಗುತ್ತದೆ. ನಾನು ಬಯಸುವುದು ಅದನ್ನೇ. ಅದು ಸುಲಭವಲ್ಲ. ಭಾವನೆಗಳು ಬರುತ್ತಲೇ ಇರುತ್ತವೆ, ಬದ್ಧತೆಗಳು ಇರುತ್ತವೆ. ಮುಂದಿನ ಕೆಲವು ವರ್ಷಗಳ ಕಾಲ ನಾನು ಆಟವನ್ನು ಆನಂದಿಸಲು ಬಯಸುತ್ತೇನೆ' ಎಂದು ಧೋನಿ ಈ ವರ್ಷದ ಆರಂಭದಲ್ಲಿ ಹೇಳಿದರು.
2020ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಧೋನಿ, ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡುವುದನ್ನು ಮುಂದುವರೆಸಿದ್ದಾರೆ. ಆದಾಗ್ಯೂ, ಪ್ರತಿ ವರ್ಷ ಕಳೆದಂತೆ ಅವರ ಪ್ರದರ್ಶನ ಕಡಿಮೆಯಾಗುತ್ತಿದೆ. ಅವರು ತಮ್ಮ ಸ್ಥಾನವನ್ನು ಕೆಳಗಿಳಿಸಬೇಕಾಯಿತು. ಅನೇಕರಿಗೆ, IPL 2025ರ ಆವೃತ್ತಿಯಲ್ಲಿ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬರುವುದನ್ನು ನೋಡುವುದು ಕಷ್ಟವಾಗಿತ್ತು.
Advertisement