
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನವೆಂಬರ್ ಅಂತ್ಯದ ವೇಳೆಗೆ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್ 2026) ಗಾಗಿ ಮೆಗಾ ಹರಾಜನ್ನು ನಡೆಸಲಿದೆ ಎಂದು ವರದಿಯಾಗಿದೆ. ಎರಡು ವರ್ಷಗಳ ಹಿಂದೆ ಪ್ರಾರಂಭವಾದ ಲೀಗ್‌ನಲ್ಲಿ ಇದುವರೆಗೆ ಮೆಗಾ ಹರಾಜು ನಡೆದಿಲ್ಲ. ವರದಿಗಳ ಪ್ರಕಾರ, ಮೆಗಾ ಹರಾಜನ್ನು ನಡೆಸುವ ಯೋಜನೆಯ ಬಗ್ಗೆ ಫ್ರಾಂಚೈಸಿಗಳಿಗೆ ಮಂಡಳಿಯು ಅನೌಪಚಾರಿಕವಾಗಿ ತಿಳಿಸಿದೆ.
ಇಎಸ್‌ಪಿಎನ್‌ಕ್ರಿಕ್‌ಇನ್ಫೋ ಪ್ರಕಾರ, ಮುಂಬೈ ಇಂಡಿಯನ್ಸ್ (MI), ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಡೆಲ್ಲಿ ಕ್ಯಾಪಿಟಲ್ಸ್ (DC), ಯುಪಿ ವಾರಿಯರ್ಸ್ (UPW), ಗುಜರಾತ್ ಜೈಂಟ್ಸ್ ಫ್ರಾಂಚೈಸಿಗಳು ರಿಟೆನ್ಶನ್ ಸಂಖ್ಯೆ, ರೈಟ್ ಟು ಮ್ಯಾಚ್ (ಆರ್‌ಟಿಎಂ), ಹರಾಜು ಪರ್ಸ್ ಮತ್ತು ಇತರ ವಿವರಗಳ ಕುರಿತು ಬಿಸಿಸಿಐನಿಂದ ಮಾಹಿತಿಗಾಗಿ ಕಾಯುತ್ತಿವೆ. ಈ ನಿರ್ಧಾರಗಳನ್ನು ಡಬ್ಲ್ಯುಪಿಎಲ್ ಸಮಿತಿ ಸಭೆಯಲ್ಲಿ ಅಂತಿಮಗೊಳಿಸಲಾಗುವುದು ಎಂದು ವರದಿ ಹೇಳುತ್ತದೆ. ಡಬ್ಲ್ಯುಪಿಎಲ್‌ನ ಮೂರನೇ ಆವೃತ್ತಿಯು ಜನವರಿ-ಫೆಬ್ರುವರಿ 2026 ರಲ್ಲಿ ನಡೆಯುವ ನಿರೀಕ್ಷೆಯಿದೆ. ಆದರೂ, ದಿನಾಂಕಗಳನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ.
ಉದ್ಘಾಟನಾ ಚಾಂಪಿಯನ್ ಆರ್‌ಸಿಬಿ, ಹಾಲಿ ಚಾಂಪಿಯನ್ ಎಂಐ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಈ ಮೆಗಾ ಹರಾಜನ್ನು ವಿರೋಧಿಸಿವೆ ಎಂದು ವರದಿಯಾಗಿದೆ. ಡಬ್ಲ್ಯುಪಿಎಲ್ ಈಗಷ್ಟೇ ಬೆಳೆಯುತ್ತಿರುವ ಸಮಯದಲ್ಲಿ ಮೂರು ವರ್ಷಗಳ ಕಾಲ ಒಗ್ಗೂಡಿದ ತಂಡವನ್ನು ಕಿತ್ತುಹಾಕುವುದು ಸರಿಯಲ್ಲದಿರಬಹುದು ಎಂದು ಮೂರೂ ತಂಡಗಳು ಭಾವಿಸಿವೆ. ಮತ್ತೊಂದೆಡೆ, ಗುಜರಾತ್ ಜೈಂಟ್ಸ್ ಮತ್ತು ಯುಪಿ ವಾರಿಯರ್ಸ್ ತಮ್ಮ ತಂಡಗಳನ್ನು ನವೀಕರಿಸಲು ಮತ್ತು ಮೆಗಾ ಹರಾಜನ್ನು ನಡೆಸುವ ಕಲ್ಪನೆಯನ್ನು ಬೆಂಬಲಿಸಲು ಉತ್ಸುಕವಾಗಿವೆ.
WPL ನ ಅಧಿಕಾರಿಯೊಬ್ಬರು, ಐದು ತಂಡಗಳು ಬಲಿಷ್ಠವಾಗಿರುವುದು ಮುಖ್ಯ. ಏಕೆಂದರೆ, ಅಸಮತೋಲನವು WPL ಬ್ರ್ಯಾಂಡ್ ಮೇಲೆ ಪರಿಣಾಮ ಬೀರಬಹುದು. ತಂಡಗಳು ತಮ್ಮ ಕೋರ್ ಅನ್ನು ಉಳಿಸಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ಅಧಿಕಾರಿ ಹೇಳಿದ್ದಾರೆ. WPL ತಂಡಗಳು ಐದು ರಿಟೆನ್ಷನ್‌ಗಳನ್ನು ಮಾಡಲು ಅವಕಾಶ ನೀಡುವ ಸಾಧ್ಯತೆಯಿದೆ.
ಉದ್ಘಾಟನಾ WPL ಹರಾಜಿನಲ್ಲಿ (2023) ಖರೀದಿಸಲಾದ RCB ನಾಯಕಿ ಸ್ಮೃತಿ ಮಂಧಾನ, 3.2 ಕೋಟಿ ರೂ.ಗಳಿಗೆ ಬಿಕರಿಯಾಗುವ ಮೂಲಕ ಅತ್ಯಂತ ದುಬಾರಿ ಆಟಗಾರ್ತಿಯಾಗಿ ಉಳಿದಿದ್ದಾರೆ.
Advertisement