'ಬರ್ಬಾದ್ ಭಾನುವಾರ': ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಫ್ಲಾಪ್ ಶೋ; ಮೀಮ್ಸ್‌ಗಳ ಸುರಿಮಳೆ

ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾದ ಕಾರಣ, ಅಭಿಮಾನಿಗಳು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದರು.
Rohit Sharma - Virat Kohli
ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ
Updated on

ಭಾನುವಾರ ಪರ್ತ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಕಳಪೆ ಆರಂಭ ಕಂಡಿತು. ಕೊನೆಯದಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಾಣಿಸಿಕೊಂಡಿದ್ದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ್ದು, ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾದರು. ರೋಹಿತ್ ಶರ್ಮಾ 8 ರನ್ ಗಳಿಸಿದರೆ, ವಿರಾಟ್ ಕೊಹ್ಲಿ ಶೂನ್ಯಕ್ಕೆ ನಿರ್ಗಮಿಸಿದ್ದು, ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟು ಮಾಡಿತು. ವೇಗಿ ಜಾಶ್ ಹೇಜಲ್‌ವುಡ್ ಅವರಿಗೆ ರೋಹಿತ್, ಮಿಚೆಲ್ ಸ್ಟಾರ್ಕ್ ಅವರಿಗೆ ಕೊಹ್ಲಿ ತಮ್ಮ ವಿಕೆಟ್ ಒಪ್ಪಿಸಿದರು.

ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾದ ಕಾರಣ, ಅಭಿಮಾನಿಗಳು ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದರು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹಾಸ್ಯಮಯ ಮೀಮ್‌ಗಳನ್ನು ಹಂಚಿಕೊಂಡಿದ್ದಾರೆ.

ಕಿಂಗ್ ವಿರಾಟ್ ಕೊಹ್ಲಿಯ ಈ 8 ಬಾಲ್ ಡಕ್ ನೋಡಲು ನಾನು ನಿನ್ನೆ ರಾತ್ರಿ ನಿದ್ದೆ ಮಾಡಲಿಲ್ಲ.. ಎಂದು ಒಬ್ಬರು ಬಳಕೆದಾರರು ಬರೆದಿದ್ದರೆ, ರೋಹಿತ್ - ಕೊಹ್ಲಿ ಕಮ್‌ಬ್ಯಾಕ್‌ಗಾಗಿ ತುಂಬಾ ಸಮಯದಿಂದ ಕಾಯುತ್ತಿದ್ದೆ. ಆದರೆ, ಭಾನುವಾರ ಬರ್ಬಾದ್ ಆಯಿತು ಎಂದು ಮತ್ತೊಬ್ಬರು ಬರೆದಿದ್ದಾರೆ.

Rohit Sharma - Virat Kohli
IND vs AUS 1st ODI: 8 ರನ್ ಗಳಿಸಿದ ರೋಹಿತ್ ಶರ್ಮಾ, ಶೂನ್ಯಕ್ಕೆ ನಿರ್ಗಮಿಸಿದ ವಿರಾಟ್ ಕೊಹ್ಲಿ; ಅಭಿಮಾನಿಗಳಿಗೆ ನಿರಾಸೆ

ಮೊದಲ ಪಂದ್ಯಕ್ಕೂ ಮುನ್ನ, ಟಿ20ಐ ಮತ್ತು ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ ಕೊಹ್ಲಿ, ದೀರ್ಘ ಅಂತರವಿದ್ದರೂ ತಮ್ಮನ್ನು ತಾವು ಫಿಟ್ ಆಗಿರಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಮೊದಲ ಏಕದಿನ ಪಂದ್ಯಕ್ಕೂ ಮುನ್ನ ರವಿಶಾಸ್ತ್ರಿ ಮತ್ತು ಆಡಮ್ ಗಿಲ್‌ಕ್ರಿಸ್ಟ್ ಅವರೊಂದಿಗಿನ ಮಾತುಕತೆಯ ಸಂದರ್ಭದಲ್ಲಿ ಫಾಕ್ಸ್ ಸ್ಪೋರ್ಟ್ಸ್‌ಗೆ ಮಾತನಾಡಿದ ಭಾರತದ ಮಾಜಿ ನಾಯಕ, 'ನಿಜ ಹೇಳಬೇಕೆಂದರೆ, ಕಳೆದ 15-20 ವರ್ಷಗಳಲ್ಲಿ ನಾನು ಆಡಿರುವ ಕ್ರಿಕೆಟ್ ಪ್ರಮಾಣವನ್ನು ನೋಡಿದರೆ, ನಾನು ನಿಜವಾಗಿಯೂ ವಿಶ್ರಾಂತಿ ಪಡೆದಿಲ್ಲ. ಕಳೆದ 15 ವರ್ಷಗಳಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾನು ಅತಿ ಹೆಚ್ಚು ಪಂದ್ಯಗಳನ್ನು ಆಡಿದ್ದೇನೆ. ಐಪಿಎಲ್‌ನಲ್ಲಿ ಸಹ ಆಡಿದ್ದೇನೆ. ಆದ್ದರಿಂದ ನನಗೆ, ಇದು ತುಂಬಾ ಉಲ್ಲಾಸಕರವಾದ ಬಿಡುವಿನ ಸಮಯವಾಗಿತ್ತು' ಎಂದಿದ್ದಾರೆ.

'ನಾನು ಈಗ ಮೊದಲಿಗಿಂತ ಹೆಚ್ಚು ಫಿಟ್ ಆಗಿದ್ದೇನೆ. ನೀವು ಆಟವನ್ನು ಆಡಬಹುದು ಎಂದು ತಿಳಿದಾಗ ಮತ್ತು ಮಾನಸಿಕವಾಗಿ ಏನು ಮಾಡಬೇಕೆಂದು ತಿಳಿದಾಗ ನೀವು ತಾಜಾತನವನ್ನು ಅನುಭವಿಸಬಹುದು. ದೈಹಿಕ ಸಿದ್ಧತೆಯ ಬಗ್ಗೆ ಮಾತ್ರ ಗಮನ ಹರಿಸಬೇಕು' ಎಂದು ಅವರು ಹೇಳಿದರು.

ಕಳೆದ ವರ್ಷ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ಜಯಗಳಿಸಿದ ನಂತರ ಕೊಹ್ಲಿ ತಮ್ಮ ಟಿ20ಐ ನಿವೃತ್ತಿಯನ್ನು ಘೋಷಿಸಿದರು. ಈ ವರ್ಷದ ಆರಂಭದಲ್ಲಿ, ಅವರು ಟೆಸ್ಟ್ ಕ್ರಿಕೆಟ್‌ನಿಂದಲೂ ನಿವೃತ್ತರಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com