ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಶುಭಮನ್ ಗಿಲ್ ಸ್ಪಷ್ಟ ಉತ್ತರ

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಒಂಬತ್ತು ವಿಕೆಟ್‌ಗಳ ಭರ್ಜರಿ ಗೆಲುವಿನಲ್ಲಿ ಕೊಹ್ಲಿ ಮತ್ತು ರೋಹಿತ್ ಕ್ರಮವಾಗಿ ಅಜೇಯ 74 ಮತ್ತು 121 ರನ್‌ಗಳೊಂದಿಗೆ ಸರಣಿಯನ್ನು ಅಮೋಘವಾಗಿ ಮುಗಿಸಿದರು.
Rohit Sharma - Virat Kohli - Shubman Gill
ರೋಹಿತ್ ಶರ್ಮಾ - ವಿರಾಟ್ ಕೊಹ್ಲಿ - ಶುಭಮನ್ ಗಿಲ್
Updated on

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇದೀಗ ಒಂದೇ ಮಾದರಿಯಲ್ಲಿ ಆಡುತ್ತಿರುವುದರಿಂದ ಅವರಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಆದರೆ, ಇಬ್ಬರು ವೈಟ್ ಬಾಲ್ ದಂತಕಥೆಗಳು ಹೇಗೆ ಲಯದಲ್ಲಿ ಉಳಿಯುತ್ತಾರೆ ಎಂಬುದರ ಕುರಿತು ದಕ್ಷಿಣ ಆಫ್ರಿಕಾ ಏಕದಿನ ಸರಣಿ ಮುಗಿದ ನಂತರ ನಿರ್ಧರಿಸಲಾಗುವುದು ಎಂದು ನಾಯಕ ಶುಭಮನ್ ಗಿಲ್ ಶನಿವಾರ ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಒಂಬತ್ತು ವಿಕೆಟ್‌ಗಳ ಭರ್ಜರಿ ಗೆಲುವಿನಲ್ಲಿ ಕೊಹ್ಲಿ ಮತ್ತು ರೋಹಿತ್ ಕ್ರಮವಾಗಿ ಅಜೇಯ 74 ಮತ್ತು 121 ರನ್‌ಗಳೊಂದಿಗೆ ಏಕದಿನ ಸರಣಿಯನ್ನು ಅಮೋಘವಾಗಿ ಮುಗಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧದ ಮುಂದಿನ ಸರಣಿ ಮತ್ತು ನ್ಯೂಜಿಲೆಂಡ್ ನಡುವಿನ ಸರಣಿಗೂ ಮುನ್ನ ಇನ್ನೂ ಏಳು ವಾರಗಳ ಕಾಲಾವಕಾಶ ಇದ್ದು, ಈ ಬಗ್ಗೆ ಉಭಯ ಆಟಗಾರರೊಂದಿಗೆ ಚರ್ಚೆ ನಡೆಸಿದ್ದೀರಾ ಎಂದು ಕೇಳಿದಾಗ, ಗಿಲ್ ಹೀಗೆ ಉತ್ತರಿಸಿದರು.

'ನಾವು ಇನ್ನೂ ಅದರ ಬಗ್ಗೆ ಮಾತನಾಡಿಲ್ಲ. ಆದರೆ, ದಕ್ಷಿಣ ಆಫ್ರಿಕಾ (ODI) ಸರಣಿ ಮುಗಿದ ನಂತರ (ಡಿಸೆಂಬರ್ 6 ರಂದು), ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಿಂತ (ಜನವರಿ 11, 2026) ಮುನ್ನ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಂತರವಿರುತ್ತದೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ಆಟಗಾರರನ್ನು ಸಂಪರ್ಕದಲ್ಲಿಡುವುದು ಹೇಗೆ ಎಂದು ನಾವು ನೋಡುತ್ತೇವೆ. ಈ ಬಗ್ಗೆ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ನಾನು ಭಾವಿಸುತ್ತೇನೆ' ಎಂದು ಗಿಲ್ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಆದಾಗ್ಯೂ, ಈ ಆವೃತ್ತಿಯಲ್ಲಿ ಕೇವಲ ಆರು ಏಕದಿನ ಪಂದ್ಯಗಳು (ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಮತ್ತು ನ್ಯೂಜಿಲೆಂಡ್ ವಿರುದ್ಧ ಮೂರು) ಮಾತ್ರ ಉಳಿದಿರುವುದರಿಂದ, ಆಟದ ಸಮಯವು ಒಂದು ಸಮಸ್ಯೆಯಾಗಿದೆ.

Rohit Sharma - Virat Kohli - Shubman Gill
3rd ODI: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್; ಕ್ರಿಕೆಟ್ ಇತಿಹಾಸದ ಹಲವು ದಾಖಲೆ ಪತನ

ರೋಹಿತ್ ಮತ್ತು ಕೊಹ್ಲಿ ಮುಂದೆ ಮುಂದಿನ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯ ನವೆಂಬರ್ 30, ಡಿಸೆಂಬರ್ 3 ಮತ್ತು 6 ರಂದು ಮತ್ತು ಜನವರಿ 11 ರಿಂದ ನ್ಯೂಜಿಲೆಂಡ್ ವಿರುದ್ಧದ ಏಕದಿನ ಪಂದ್ಯಗಳು ಇವೆ.

ಆದಾಗ್ಯೂ, ಡಿಸೆಂಬರ್ 24 ರಿಂದ, ವಿಜಯ್ ಹಜಾರೆ ಟ್ರೋಫಿ (ರಾಷ್ಟ್ರೀಯ ಏಕದಿನ ಪಂದ್ಯಗಳು) ಪ್ರಾರಂಭವಾಗಲಿದ್ದು, ಈ ಇಬ್ಬರು ತಮ್ಮ ತಂಡಗಳ ಪರವಾಗಿ ಕೆಲವು ಪಂದ್ಯಗಳನ್ನು ಆಡುವ ನಿರೀಕ್ಷೆಯಿದೆ.

'ಅವರು ಕಳೆದ 15 ವರ್ಷಗಳಿಂದ ಇದನ್ನು ಮಾಡುತ್ತಿದ್ದಾರೆ. ಅವರು ಈ ರೀತಿ ಆಡುವುದನ್ನು ಮತ್ತು ತಂಡವನ್ನು ಅಜೇಯವಾಗಿ ಗೆಲ್ಲುವುದನ್ನು ನೋಡುವುದು ನಿಜವಾಗಿಯೂ ಒಂದು ಆನಂದ. ಒಬ್ಬ ಆಟಗಾರನಾಗಿ, ಇಬ್ಬರು ಆಧುನಿಕ ಕಾಲದ ಶ್ರೇಷ್ಠ ಆಟಗಾರರು ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದರ ಬಗ್ಗೆ ಯಾವುದೇ ಸಂದೇಹವಿರಲಿಲ್ಲ' ಎಂದು ಗಿಲ್ ಹೇಳಿದರು.

'ನಾಯಕನಾಗಿ, ನೀವು ಹೊರಗೆ ಕುಳಿತು ಪಂದ್ಯವನ್ನು ವೀಕ್ಷಿಸುವಾಗ, ತಂಡದ ಇಬ್ಬರು ಹಿರಿಯ ಆಟಗಾರರು ಆಡುತ್ತಿರುವುದು ಮತ್ತು ಅವರು ತಂಡವನ್ನು ಮುನ್ನಡೆಸುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಈ ಜೋಡಿಯನ್ನು ನೋಡುತ್ತಾ ಬೆಳೆದ ಯುವಕನಿಗೆ ಈ ಜೋಡಿಯು ಚೆಂಡನ್ನು ಬ್ಯಾಟ್‌ನ ಮಧ್ಯಭಾಗದಲ್ಲಿ ಹೊಡೆಯುವುದನ್ನು ಕೇಳುವುದು ಒಂದು ಅನುಭವ' ಎಂದರು.

'ನಾನು ಹೇಳಿದಂತೆ, ಅವರಿಬ್ಬರನ್ನೂ ನೋಡುವುದು ಒಂದು ಸಂತೋಷ, ವಿಶೇಷವಾಗಿ ಅವರು ಹಾಗೆ ಬ್ಯಾಟಿಂಗ್ ಮಾಡುವಾಗ ಮತ್ತು ಚೆಂಡು ಅವರ ಬ್ಯಾಟ್‌ಗಳಿಂದ ಹಾರಿಹೋಗುವುದನ್ನು ನೋಡುವುದು ಮತ್ತು ಅವರ ಬ್ಯಾಟ್‌ನಿಂದ ಬರುವ ಶಬ್ದವನ್ನು ಕೇಳುವುದು, ಅವರಿಬ್ಬರೂ ಎಷ್ಟು ಒಳ್ಳೆಯ ಆಟಗಾರರು ಎಂಬುದನ್ನು ಹೇಳುತ್ತದೆ. ತಂಡದ ಸಭೆಗಳಲ್ಲಿ ಯಾವಾಗಲೂ ಚರ್ಚಿಸಲ್ಪಡುವ ವಿಷಯಗಳನ್ನು ಅವರು ಹೇಗೆ ಕಾರ್ಯಗತಗೊಳಿಸಿದರು ಎಂಬುದರ ಕುರಿತು ಗಿಲ್ ಮಾತನಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com