ಎಂಎಸ್ ಧೋನಿಯಂತೆ 'ಕ್ಯಾಪ್ಟನ್ ಕೂಲ್' ಆಗುವ ಆಸೆ ಇದೆ: ಪಾಕ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಫಾತಿಮಾ ಸನಾ

ಸೆಪ್ಟೆಂಬರ್ 30 ರಂದು ಆರಂಭವಾಗಲಿರುವ ಮಹಿಳಾ ವಿಶ್ವಕಪ್ ಅನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿದ್ದು, ಬಿಸಿಸಿಐ ಮತ್ತು ಪಿಸಿಬಿ ನಡುವೆ ನಡೆದ ಒಪ್ಪಂದದ ಪ್ರಕಾರ ಪಾಕಿಸ್ತಾನ ತನ್ನ ಎಲ್ಲ ಪಂದ್ಯಗಳನ್ನು ದ್ವೀಪರಾಷ್ಟ್ರದಲ್ಲಿ ಆಡಲಿದೆ.
Fatima Sana
ಫಾತಿಮಾ ಸನಾ
Updated on

ನವದೆಹಲಿ: ಈ ತಿಂಗಳ ಕೊನೆಯಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ಗೆ ತಮ್ಮ ತಂಡವನ್ನು ಮುನ್ನಡೆಸಲು ಸಿದ್ಧತೆ ನಡೆಸುತ್ತಿರುವ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಫಾತಿಮಾ ಸನಾ, ಭಾರತದ ವಿಶ್ವಕಪ್ ವಿಜೇತ ನಾಯಕ ಎಂಎಸ್ ಧೋನಿ ಅವರಂತೆ 'ಕ್ಯಾಪ್ಟನ್ ಕೂಲ್' ಆಗುವ ಆಕಾಂಕ್ಷೆಯನ್ನು ಹೊಂದಿದ್ದಾರೆ.

ಸೆಪ್ಟೆಂಬರ್ 30 ರಂದು ಆರಂಭವಾಗಲಿರುವ ಮಹಿಳಾ ವಿಶ್ವಕಪ್ ಅನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿದ್ದು, ಬಿಸಿಸಿಐ ಮತ್ತು ಪಿಸಿಬಿ ನಡುವೆ ನಡೆದ ಒಪ್ಪಂದದ ಪ್ರಕಾರ ಪಾಕಿಸ್ತಾನ ತನ್ನ ಎಲ್ಲ ಪಂದ್ಯಗಳನ್ನು ದ್ವೀಪರಾಷ್ಟ್ರದಲ್ಲಿ ಆಡಲಿದೆ.

ಏಪ್ರಿಲ್‌ನಲ್ಲಿ ನಡೆದ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದ್ದ ಪಾಕಿಸ್ತಾನ, ಅಕ್ಟೋಬರ್ 2 ರಂದು ಕೊಲಂಬೊದಲ್ಲಿ ಬಾಂಗ್ಲಾದೇಶ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

'ವಿಶ್ವಕಪ್‌ನಂತಹ ದೊಡ್ಡ ಪಂದ್ಯಾವಳಿಯಲ್ಲಿ ನಾಯಕತ್ವ ವಹಿಸಿಕೊಳ್ಳುವಾಗ ಆರಂಭದಲ್ಲಿ ಸ್ವಲ್ಪ ಆತಂಕಕ್ಕೊಳಗಾಗುವುದು ಸಹಜ. ಆದರೆ, ನಾಯಕಿಯಾಗಿ ನಾನು ಮಹೇಂದ್ರ ಸಿಂಗ್ ಧೋನಿಯಿಂದ ಸ್ಫೂರ್ತಿ ಪಡೆಯುತ್ತೇನೆ' ಎಂದು ವಿಶ್ವಕಪ್‌ಗೆ ಮುನ್ನ ಸುದ್ದಿಸಂಸ್ಥೆ ಪಿಟಿಐ ಭಾಷಾಗೆ ನೀಡಿದ ಸಂದರ್ಶನದಲ್ಲಿ ಫಾತಿಮಾ ಹೇಳಿದರು.

Fatima Sana
ಕ್ಯಾಪ್ಟನ್ ಕೂಲ್ ಧೋನಿ ತಾಳ್ಮೆ ಕಳೆದುಕೊಂಡಿದ್ದರು, ನನ್ನನ್ನು ನಿಂದಿಸಿದರು: CSK ಮಾಜಿ ಆಟಗಾರ ಮೋಹಿತ್ ಶರ್ಮಾ

'ನಾನು ಟೀಂ ಇಂಡಿಯಾ ಮತ್ತು ಸಿಎಸ್‌ಕೆ ನಾಯಕನಾಗಿ ಅವರ ಪಂದ್ಯಗಳನ್ನು ನೋಡಿದ್ದೇನೆ. ಅವರು ಮೈದಾನದಲ್ಲಿನ ನಿರ್ಧಾರ ತೆಗೆದುಕೊಳ್ಳುವ ವಿಧಾನ, ಶಾಂತತೆ ಮತ್ತು ಅವರು ತಮ್ಮ ಆಟಗಾರರನ್ನು ಬೆಂಬಲಿಸುವ ರೀತಿಯನ್ನು ನೋಡಿದಾಗ, ಅದರಿಂದ ಕಲಿಯಲು ಬಹಳಷ್ಟು ಇದೆ. ನಾನು ನಾಯಕತ್ವವನ್ನು ಪಡೆದಾಗ, ನಾನು ಧೋನಿಯಂತೆ ಆಗಬೇಕು ಎಂದು ಭಾವಿಸಿದೆ. ನಾನು ಅವರ ಸಂದರ್ಶನಗಳನ್ನು ಸಹ ನೋಡಿದೆ ಮತ್ತು ಬಹಳಷ್ಟು ಕಲಿತಿದ್ದೇನೆ' ಎಂದು ಅವರು ಹೇಳಿದರು.

ಧೋನಿ 2020ರ ಆಗಸ್ಟ್ 15 ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಆದರೆ, ಫಾತಿಮಾ 2019ರ ಮೇ 6 ರಂದು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯಕ್ಕೆ ಪದಾರ್ಪಣೆ ಮಾಡಿದರು.

34 ಏಕದಿನ ಪಂದ್ಯಗಳಲ್ಲಿ 397 ರನ್ ಗಳಿಸಿ 45 ವಿಕೆಟ್ ಪಡೆದಿರುವ ಆಲ್‌ರೌಂಡರ್ ಫಾತಿಮಾ, ಈ ಬಾರಿ ತಮ್ಮ ಪ್ರದರ್ಶನವು ದೇಶದಲ್ಲಿ ಮಹಿಳಾ ಕ್ರಿಕೆಟ್‌ನ ಭವಿಷ್ಯವನ್ನು ನಿರ್ಧರಿಸುವುದರಿಂದ ಆ ನಂಬಿಕೆಯನ್ನು ಮುರಿಯುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com