
ನವದೆಹಲಿ: ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳಲ್ಲೂ ಪ್ರಾಬಲ್ಯ ಸಾಧಿಸಿ ಗಮನಾರ್ಹ ವಿಜಯ ದಾಖಲಿಸಿರುವ ಟೀಮ್ ಇಂಢಿಯಾಗೆ ಬಿಸಿಸಿಐ ಗಿಫ್ಟ್ ಘೋಷಣೆ ಮಾಡಿದೆ.
ಏಷ್ಯಾ ಕಪ್ ಗೆದ್ದ ಭಾರತ ತಂಡದ ಆಟಗಾರರು ಹಾಗೂ ಸಹಾಯ ಸಿಬ್ಬಂದಿಗೆ ಬಿಸಿಸಿಐ ಬರೋಬ್ಬರಿ ರೂ.21 ಕೋಟಿ ನಗದು ಬಹುಮಾನ ಘೋಷಿಸಿದೆ. ಇದು ಏಷ್ಯಾಕಪ್ ಆಯೋಜಕರಾದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ನಿಂದ ಚಾಂಪಿಯನ್ ತಂಡಕ್ಕೆ ಸಿಗುವ ಮೊತ್ತಕ್ಕಿಂತ ಶೇ.10ಪಟ್ಟು ಹೆಚ್ಚಾಗಿದೆ.
ಟೂರ್ನಿ ಬಹುಮಾನ ಮೊತ್ತವಾಗಿ ಭಾರತಕ್ಕೆ 2.3 ಕೋಟಿ ಲಭಿಸಿತ್ತು. ರನ್ನರ್ ಅಪ್ ಪಾಕಿಸ್ತಾನಕ್ಕೆ ಏಷ್ಯಾ ಕ್ರಿಕೆಟ್ ಮಂಡಳಿಯಿಂದ 1.3 ಕೋಟಿ ರೂ. ಬಹುಮಾನ ದೊರೆಯಿತು. ಅಭಿಷೇಕ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ಈ ಬಹುಮಾನವು ತಂಡದ ಮನೋಸ್ಥೈರ್ಯವನ್ನು ಹೆಚ್ಚಿಸುವುದಲ್ಲದೆ, ಭವಿಷ್ಯದಲ್ಲಿ ಯುವ ಆಟಗಾರರು ಇನ್ನಷ್ಟು ಉತ್ತಮ ಪ್ರದರ್ಶನ ನೀಡಲು ಸ್ಫೂರ್ತಿ ನೀಡುತ್ತದೆ. ಇದೀಗ ಬಿಸಿಸಿಐ ನಡೆಗೆ ಕ್ರಿಕೆಟ್ ಅಭಿಮಾನಿಗಳಿಂದ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ.
Advertisement