

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಗದಿಯಾಗಿರುವ ಐಪಿಎಲ್ ಪಂದ್ಯಗಳ ಟಿಕೆಟ್ ಬುಕ್ಕಿಂಗ್ ನೆಪದಲ್ಲಿ ನಕಲಿ ವೆಬ್‌ಸೈಟ್‌ಗಳ ಮೂಲಕ ಜನರನ್ನು ವಂಚಿಸಲಾಗಿದ್ದು ಈ ಸಂಬಂಧ ಪೊಲೀಸರು ಸೈಬರ್ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಏಪ್ರಿಲ್ 5ರಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ RCB ಪಂದ್ಯ ಸೇರಿದಂತೆ ಮುಂಬರುವ ಪಂದ್ಯಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ವಂಚಕರು ಇದನ್ನೇ ದುರುಪಯೋಗ ಮಾಡಿಕೊಂಡು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಅಧಿಕೃತ ಟಿಕೆಟ್ ವೇದಿಕೆಯನ್ನು ಅನುಕರಿಸುವ ವೆಬ್‌ಸೈಟ್ ಅನ್ನು ರಚಿಸಿದ್ದಾರೆ ಎಂದು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಎಂ ನಾರಾಯಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಆರ್‌ಸಿಬಿ ಪಂದ್ಯಗಳು ಏಪ್ರಿಲ್ 5, 15, 18 ಮತ್ತು 24ರಂದು ನಡೆಯಲಿದೆ. ಹೀಗಾಗಿ ಟಿಕೆಟ್ ಗಾಗಿ ಬೇಡಿಕೆಯೂ ಹೆಚ್ಚಾಗುತ್ತಿದ್ದು ವಂಚಿಸಲೆಂದೆ ನಕಲಿ ವೆಬ್‌ಸೈಟ್ ಅನ್ನು ರಚಿಸಲಾಗಿದೆ. ಪ್ರೇಕ್ಷಕರಿಂದ ಹಣ ಸಂಗ್ರಹಿಸಿದ ನಂತರ, ಲಿಂಕ್ ಅನ್ನು ತಕ್ಷಣವೇ ನಿಷ್ಕ್ರಿಯಗೊಳಿಸಲಾಗುತ್ತಿದೆ ಎಂದರು. ಆನ್‌ಲೈನ್‌ನಲ್ಲಿ ಹುಡುಕುವ ಬಳಕೆದಾರರನ್ನು ಆಕರ್ಷಿಸಲು ವಂಚನೆಕರು ಎಂ ಚಿನ್ನಸ್ವಾಮಿ ಸ್ಟೇಡಿಯಂ ಬೆಂಗಳೂರು, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಐಪಿಎಲ್ 2026 ಟಿಕೆಟ್‌ಗಳು ಮಾರಾಟದಲ್ಲಿವೆ ಎಂಬಂತಹ ವೆಬ್ ಸೈಟ್ ಗಳನ್ನು ಪ್ರದರ್ಶಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಮೊದಲಿಗೆ ಸಂತ್ರಸ್ತರಿಂದ ಪಾವತಿ ಗೇಟ್‌ವೇಗಳು, ಆಯ್ದ ಆಸನಗಳು ಮತ್ತು ವಹಿವಾಟು ಪೂರ್ಣಗೊಂಡ ನಂತರ ಲಿಂಕ್ ನಿಷ್ಕ್ರಿಯಗೊಳಿಸಲಾಗುತ್ತಿದೆ ಎಂದು ಆರೋಪಿ ವಂಚನೆಗೊಳಗಾಗಿರುವುದಾಗಿ ಮೂವರು ಗ್ರಾಹಕರು ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಬೆನ್ನಲ್ಲೇ ಪೊಲೀಸರು ಕಾರ್ಯಪ್ರೌವೃತ್ತರಾಗಿದ್ದಾರೆ. ಪ್ರಾಥಮಿಕ ತನಿಖೆಗಳು ಈ ಖಾತೆಗಳ ಮೂಲಕ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆದಿರಬಹುದು ಎಂದು ಸೂಚಿಸುತ್ತಿವೆ. ಮೂವರು ದೂರುದಾರರು ಕ್ರಮವಾಗಿ 7,196, 11,991 ಮತ್ತು 7,497 ರೂಪಾಯಿ ವಂಚನೆಯಾಗಿರುವುದಾಗಿ ವರದಿ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾವು ಖಾತೆ ವಿವರಗಳನ್ನು ಪ್ರವೇಶಿಸಿದ ನಂತರ, ವಹಿವಾಟಿನ ಪೂರ್ಣ ಪ್ರಮಾಣ ನಮಗೆ ತಿಳಿಯುತ್ತದೆ. ಪ್ರಾಥಮಿಕವಾಗಿ, ದೊಡ್ಡ ಮೊತ್ತದಲ್ಲಿ ಹಣವನ್ನು ವಂಚಿಸಲಾಗಿದೆ ಎಂದು ನಾರಾಯಣ ಹೇಳಿದರು. ಅಲ್ಲದೆ ಪಂದ್ಯಗಳ ಟಿಕೆಟ್‌ಗಳು ಈಗಾಗಲೇ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾರಾಟವಾಗಿವೆ ಎಂದು ಡಿಸಿಪಿ ಎಚ್ಚರಿಕೆ ನೀಡಿದರು. ಸಾರ್ವಜನಿಕರು ಅಧಿಕೃತ ಆರ್‌ಸಿಬಿ ವೆಬ್‌ಸೈಟ್ ಅನ್ನು ಪರಿಶೀಲಿಸಬೇಕು. ಕುತೂಹಲದಿಂದ ಬಂಪರ್ ಟಿಕೆಟ್ ಮಾರಾಟ ಎಂದು ಹೇಳಿಕೊಳ್ಳುವ ವೆಬ್‌ಸೈಟ್‌ಗಳ ಮೇಲೆ ಕ್ಲಿಕ್ ಮಾಡುವುದನ್ನು ತಪ್ಪಿಸಬೇಕು ಎಂದು ಒತ್ತಾಯಿಸಿದರು.
Advertisement