IPL 2026: SRH ತಂಡಕ್ಕೆ ಆಘಾತ; ಟೂರ್ನಿ ಮಧ್ಯೆ ಫ್ರಾಂಚೈಸ್ ತೊರೆದು ಆಸ್ಟ್ರೇಲಿಯಾಗೆ ತೆರಳಿದ ಪ್ಯಾಟ್ ಕಮ್ಮಿನ್ಸ್!

IPL 2026 ಟೂರ್ನಿ ಇತ್ತೀಚೆಗಷ್ಟೇ ಆರಂಭವಾಗಿದೆ. ತಂಡಗಳು ಇನ್ನೂ ತಮ್ಮ ಲಯಕ್ಕೆ ಹೊಂದಿಕೊಂಡಿಲ್ಲ, ಆದರೆ ಒಂದೆರೆಡು ತಂಡಗಳು ಈಗಾಗಲೇ ದೊಡ್ಡ ಹಿನ್ನಡೆ ಅನುಭವಿಸಿದೆ. ಸನ್‌ರೈಸರ್ಸ್ ಹೈದರಾಬಾದ್‌ನ ನಿಯಮಿತ ನಾಯಕ ಪ್ಯಾಟ್ ಕಮ್ಮಿನ್ಸ್ ಋತುವಿನ ಮಧ್ಯದಲ್ಲಿ ಫ್ರಾಂಚೈಸ್ ಅನ್ನು ತೊರೆದು ಮನೆಗೆ ಮರಳಿದ್ದಾರೆ.
IPL 2026: SRH ತಂಡಕ್ಕೆ ಆಘಾತ; ಟೂರ್ನಿ ಮಧ್ಯೆ ಫ್ರಾಂಚೈಸ್ ತೊರೆದು ಆಸ್ಟ್ರೇಲಿಯಾಗೆ ತೆರಳಿದ ಪ್ಯಾಟ್ ಕಮ್ಮಿನ್ಸ್!
Updated on

ನವದೆಹಲಿ: IPL 2026 ಟೂರ್ನಿ ಇತ್ತೀಚೆಗಷ್ಟೇ ಆರಂಭವಾಗಿದೆ. ತಂಡಗಳು ಇನ್ನೂ ತಮ್ಮ ಲಯಕ್ಕೆ ಹೊಂದಿಕೊಂಡಿಲ್ಲ, ಆದರೆ ಒಂದೆರೆಡು ತಂಡಗಳು ಈಗಾಗಲೇ ದೊಡ್ಡ ಹಿನ್ನಡೆ ಅನುಭವಿಸಿದೆ. ಸನ್‌ರೈಸರ್ಸ್ ಹೈದರಾಬಾದ್‌ನ ನಿಯಮಿತ ನಾಯಕ ಪ್ಯಾಟ್ ಕಮ್ಮಿನ್ಸ್ ಋತುವಿನ ಮಧ್ಯದಲ್ಲಿ ಫ್ರಾಂಚೈಸ್ ಅನ್ನು ತೊರೆದು ಮನೆಗೆ ಮರಳಿದ್ದಾರೆ.

ಕಮ್ಮಿನ್ಸ್ ಬೆನ್ನುನೋವಿನಿಂದ ಬಳಲುತ್ತಿದ್ದಾರೆ . ಆದ್ದರಿಂದ ಮೊದಲ ಎರಡು ಪಂದ್ಯಗಳಲ್ಲಿ ಆಡಲಿಲ್ಲ. ಪ್ಯಾಟ್ ಕಮ್ಮಿನ್ಸ್ ಬದಲಿಗೆ ಇಶಾನ್ ಕಿಶನ್ ಅವರ ಸ್ಥಾನದಲ್ಲಿ ತಂಡದ ನಾಯಕತ್ವ ವಹಿಸುತ್ತಿದ್ದಾರೆ. ಕಮ್ಮಿನ್ಸ್ ಗಾಯವು ಹೈದರಾಬಾದ್‌ಗೆ ಕಳವಳಕ್ಕೆ ಕಾರಣವಾಗಿದೆ. ಈ ಗಾಯದಿಂದಾಗಿ ಅವರು ಆಸ್ಟ್ರೇಲಿಯಾಕ್ಕೆ ತೆರಳುತ್ತಿದ್ದಾರೆ.

IPL 2026: SRH ತಂಡಕ್ಕೆ ಆಘಾತ; ಟೂರ್ನಿ ಮಧ್ಯೆ ಫ್ರಾಂಚೈಸ್ ತೊರೆದು ಆಸ್ಟ್ರೇಲಿಯಾಗೆ ತೆರಳಿದ ಪ್ಯಾಟ್ ಕಮ್ಮಿನ್ಸ್!
IPL 2026, DC vs MI: ಹಾರ್ದಿಕ್ ಪಾಂಡ್ಯ ಔಟ್, ಸೂರ್ಯಕುಮಾರ್ ಯಾದವ್‌ಗೆ ಮುಂಬೈ ನಾಯಕತ್ವ; ಡೆಲ್ಲಿ ಬೌಲಿಂಗ್ ಆಯ್ಕೆ!

ಕಮ್ಮಿನ್ಸ್ ತಮ್ಮ ಬೆನ್ನುನೋವಿನ ಸ್ಕ್ಯಾನಿಂಗ್​ಗಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುತ್ತಿದ್ದಾರೆ. ಈ ಸ್ಕ್ಯಾನ್‌ಗಳನ್ನು ಕ್ರಿಕೆಟ್ ಆಸ್ಟ್ರೇಲಿಯಾ ಮೇಲ್ವಿಚಾರಣೆ ಮಾಡುತ್ತದೆ. ಗುರುವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದ ನಂತರ ಕಮ್ಮಿನ್ಸ್ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ. ಹೈದರಾಬಾದ್ ಸ್ಕ್ಯಾನ್ ಫಲಿತಾಂಶಗಳನ್ನು ಸೂಕ್ಷ್ಮವಾಗಿ ಗಮನಿಸಲಿದೆ. ಅವರ ಗಾಯ ಗುಣಮುಖವಾಗಿ ಮುಂಬರುವ ಪಂದ್ಯಗಳಲ್ಲಿ ಆಡಲು ಸಾಧ್ಯವಾಗಲಿ ಎಂದು ತಂಡ ಪ್ರಾರ್ಥಿಸಲಿದೆ. ಕಮ್ಮಿನ್ಸ್ ಏಪ್ರಿಲ್ 17 ರಂದು ತಂಡಕ್ಕೆ ಮರಳುವ ನಿರೀಕ್ಷೆಯಿದೆ.

ಹೈದರಾಬಾದ್ ಇದುವರೆಗೆ ಎರಡು ಪಂದ್ಯಗಳನ್ನು ಆಡಿದ್ದು, ಒಂದನ್ನು ಗೆದ್ದು ಇನ್ನೊಂದನ್ನು ಸೋತಿದೆ. ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯವನ್ನು ಸೋತ್ತಿದ್ದರೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆಲುವು ಸಾಧಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com