IPL 2026: B***s Of Steel" ರವಿಶಾಸ್ತ್ರಿ ಹೇಳಿಕೆ ಕುರಿತು ನೆಟ್ಟಿಗರಿಂದ ತೀವ್ರ ಚರ್ಚೆ!

ರಿಯಾನ್ ಪರಾಗ್ ನೇತೃತ್ವದ ಬ್ಯಾಕ್-ಟು-ಬ್ಯಾಕ್ ಗೆಲುವುಗಳನ್ನು ಪಡೆದುಕೊಳ್ಳುತ್ತಿದೆ. ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ 210 ರನ್ ಗಳಿಸಿದ ರಾಜಸ್ಥಾನ ರಾಯಲ್ಸ್ ಆರು ರನ್‌ಗಳಿಂದ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿತು.
Ravi Shastri
ರವಿಶಾಸ್ತ್ರಿ
Updated on

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ IPL ಪಂದ್ಯದಲ್ಲಿ ಕೊನೆಯ ಥ್ರಿಲ್ಲರ್ ಓವರ್ ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿದ ರಾಜಸ್ಥಾನ ರಾಯಲ್ಸ್ ತಂಡವನ್ನು ರವಿಶಾಸ್ತ್ರಿ ಹಾಡಿ ಹೊಗಳಿದ್ದಾರೆ.

ರಿಯಾನ್ ಪರಾಗ್ ನೇತೃತ್ವದ ಬ್ಯಾಕ್-ಟು-ಬ್ಯಾಕ್ ಗೆಲುವುಗಳನ್ನು ಪಡೆದುಕೊಳ್ಳುತ್ತಿದೆ. ನಿನ್ನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿ 210 ರನ್ ಗಳಿಸಿದ ರಾಜಸ್ಥಾನ ರಾಯಲ್ಸ್ ಆರು ರನ್‌ಗಳಿಂದ ಗುಜರಾತ್ ಟೈಟನ್ಸ್ ತಂಡವನ್ನು ಸೋಲಿಸಿತು.

ಅಂತಿಮ ಎರಡು ಓವರ್‌ಗಳಲ್ಲಿ GT ಗೆ ಕೇವಲ 15 ರನ್‌ಗಳು ಬೇಕಾಗಿದ್ದಾಗ RR ಅಪಾರ ಒತ್ತಡದಲ್ಲಿತ್ತು. ಆದಾಗ್ಯೂ, ನಾಯಕ ಪರಾಗ್ ಮತ್ತು ಉಪನಾಯಕ ಧ್ರುವ್ ಜುರೆಲ್ ಅವರು 19 ನೇ ಓವರ್‌ ಮಾಡಲು ಜೋಫ್ರಾ ಆರ್ಚರ್‌ಗೆ ಕೊಟ್ಟರು. ಆರಂಭದಲ್ಲಿ ತುಷಾರ್ ದೇಶಪಾಂಡೆ 19 ನೇ ಓವರ್ ಮತ್ತು ಆರ್ಚರಿ 20ನೇ ಓವರ್ ಮಾಡಿಸುವ ಪ್ಲಾನ್ ಮಾಡಲಾಗಿತ್ತು. ಆದರೆ, ಜುರೆಲ್‌ ಜೊತೆಗೆ ಮಿಡ್-ಪಿಚ್ ಚಾಟ್ ನಂತರ ಪರಾಗ್ ಕೊನೆಯ ನಿಮಿಷದಲ್ಲಿ ಬೌಲರ್ ಬದಲಾಯಿಸಿದರು.

Ravi Shastri
IPL 2026: ಅಹಮದಾಬಾದ್ ಮೈದಾನದಲ್ಲಿ RR ವಿರುದ್ಧ ಅತ್ಯಧಿಕ ರನ್ ಚೇಸ್‌ನಲ್ಲಿ ಕೊನೆಯ ಓವರ್‌ನಲ್ಲಿ ಸೋತ Gujarat Titans

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ರವಿಶಾಸ್ತ್ರಿ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಪರಾಗ್ ಅವರ ನಾಯಕತ್ವವನ್ನು ಶ್ಲಾಘಿಸಿದ್ದಾರೆ. RR ಕ್ಯಾಪ್ಟನ್ "b***s ಆಫ್ ಸ್ಟೀಲ್" ಅನ್ನು ಹೊಂದಿದ್ದಾರೆ ಮುಕ್ತಕಂಠದಿಂದ ಹೊಗಳಿದ್ದಾರೆ.

ಹೌದು. ಐಪಿಎಲ್ ಇತಿಹಾಸದ ಅತ್ಯುತ್ತಮ ಪಂದ್ಯಗಳಲ್ಲಿ ಇದು ಒಂದಾಗಿದೆ. ಇದನ್ನು ಆರ್ಚವ್ ಮಾಡಿದರು. ಪರಾಗ್ ರಿಯಾನ್ ನೀವು "b***s. ಮುಂದೆ ವಿಶೇಷವಾಗಿ ನಾಯಕತ್ವದ ಪಾತ್ರದಲ್ಲಿ. ದೊಡ್ಡ ಭವಿಷ್ಯವನ್ನು ಹೊಂದಿದ್ದೀರಿ. ಉತ್ತಮವಾಗಿ ಆಡಿದರು! IPL ಜಿಂದಾಬಾದ್! @rajasthanroyals #GTvsRR #IPL2026 ಎಂದು ರವಿಶಾಸ್ತ್ರಿ ಪೋಸ್ಟ್ ಮಾಡಿದ್ದಾರೆ.

ರವಿಶಾಸ್ತ್ರಿ ಮಾಡಿರುವ ಈ ಟ್ವೀಟ್ ಕುರಿತು ನೆಟ್ಟಿಗರು ವ್ಯಾಪಕ ಚರ್ಚೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com