ಸ್ಮೃತಿ ಮಂಧಾನಾ-ಪಲಾಶ್ ಮುಚ್ಚಲ್ ಮತ್ತೆ ಒಂದಾಗಿ ಮದುವೆಯಾಗ್ತಾರಾ: ಸಂದೇಹಕ್ಕೆ ಕಾರಣ ವೈರಲ್ ಆದ ಒಂದು ವಿಡಿಯೊ; Video

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ವಿಡಿಯೋದಲ್ಲಿ, ಸ್ಮೃತಿ ಮಂಧಾನಾ ತಂದೆ ಶ್ರೀನಿವಾಸ್ ಅವರು ಮುಂಬೈಯ ಒಂದು ರೆಸ್ಟೋರೆಂಟ್‌ನಲ್ಲಿ ಪಲಾಶ್ ಅವರ ಸಹೋದರಿ ಪಾಲಕ್ ಮುಚ್ಚಲ್ ಮತ್ತು ಅವರ ಪತಿ ಮಿಥುನ್ ಅವರನ್ನು ಭೇಟಿ ಮಾಡುತ್ತಿರುವುದು ಕಾಣಿಸಿದೆ.
Smriti Mandanna-Palash Muchchal
ಸ್ಮೃತಿ ಮಂಧಾನಾ-ಪಾಲಾಶ್ ಮುಚ್ಚಲ್
Updated on

ವೈರಲ್ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಭಾರತೀಯ ಕ್ರಿಕೆಟರ್ ಸ್ಮೃತಿ ಮಂಧಾನಾ ಮತ್ತು ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಮತ್ತೆ ಒಂದಾಗಿದಾರೆಯೇ? ಅವರು ಶೀಘ್ರದಲ್ಲೇ ಮದುವೆಯಾಗಲಿದ್ದಾರೆಯೇ? ಎಂಬ ಪ್ರಶ್ನೆಗಳು ಎಲ್ಲರಲ್ಲೂ ಮೂಡಿವೆ.

ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ವಿಡಿಯೋದಲ್ಲಿ, ಸ್ಮೃತಿ ಮಂಧಾನಾ ತಂದೆ ಶ್ರೀನಿವಾಸ್ ಅವರು ಮುಂಬೈಯ ಒಂದು ರೆಸ್ಟೋರೆಂಟ್‌ನಲ್ಲಿ ಪಲಾಶ್ ಅವರ ಸಹೋದರಿ ಪಾಲಕ್ ಮುಚ್ಚಲ್ ಮತ್ತು ಅವರ ಪತಿ ಮಿಥುನ್ ಅವರನ್ನು ಭೇಟಿ ಮಾಡುತ್ತಿರುವುದು ಕಾಣಿಸಿದೆ. ಈ ವೇಳೆ ಪಾಲಕ್ ಅವರು ಶ್ರೀನಿವಾಸ್ ಅವರ ಪಾದ ಸ್ಪರ್ಶಿಸಿ ನಮಸ್ಕರಿಸಿರುವುದು ಗಮನ ಸೆಳೆದಿದೆ.

ಈ ಭೇಟಿಯ ವಿವರಗಳು ಇನ್ನೂ ತಿಳಿದುಬಂದಿಲ್ಲದಿದ್ದರೂ, ವಿಡಿಯೋ ಎಲ್ಲರ ಗಮನ ಸೆಳೆದಿದೆ. ನೆಟ್ಟಿಗರು ಈಗ ಮಂಧಾನಾ ಮತ್ತು ಮುಚ್ಚಲ್ ಕುಟುಂಬಗಳು ಮತ್ತೆ ಒಗ್ಗಟ್ಟಾಗಲಿದ್ದಾರೆಯೇ ಎಂಬುದರ ಬಗ್ಗೆ ಚರ್ಚಿಸುತ್ತಿದ್ದಾರೆ. ಕೆಲವರು ನನಗೆ ಆಶ್ಚರ್ಯವಾಗಿದೆ, ಆದರೆ ಆಘಾತ ಅಚ್ಚರಿಯಂತೂ ಆಗಿಲ್ಲ, ಆಗಿದ್ದು ಆಗಲಿ, ಬಿಡಿ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನೂ ಕೆಲವರು ಏನು ನಡೆಯುತ್ತಿದೆ ಇಲ್ಲಿ ಎಂದು ಪ್ರಶ್ನಿಸಿದ್ದಾರೆ. ಕೆಲವರು ಈ ವಿಡಿಯೋ ಹಳೆಯದಾಗಿರಬಹುದು ಎಂದು ಕೂಡ ಹೇಳುತ್ತಿದ್ದಾರೆ. ಈ ಕುರಿತು ಎರಡೂ ಕುಟುಂಬಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

Smriti Mandanna-Palash Muchchal
ಟೀಂ ಇಂಡಿಯಾ ಬ್ಯಾಟರ್ ಸ್ಮೃತಿ ಮಂಧಾನ ಜೊತೆಗಿನ ಮದುವೆ ರದ್ದಾದ ಬಳಿಕ ಪಲಾಶ್ ಮುಚ್ಚಲ್ ಚಿತ್ರ ನಿರ್ದೇಶನಕ್ಕೆ ಮುಂದು!

ಮದುವೆ ಏಕೆ ರದ್ದಾಯಿತು?

ಪಲಾಶ್ ಮತ್ತು ಸ್ಮೃತಿ ಕಳೆದ ವರ್ಷ ನವೆಂಬರ್ 23 ರಂದು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮದುವೆಯಾಗಬೇಕಾಗಿತ್ತು. ಆದರೆ ಮದುವೆಯನ್ನು ಮೊದಲು ಅನಿರ್ದಿಷ್ಟವಾಗಿ ಮುಂದೂಡಲಾಯಿತು, ನಂತರ ಸಂಪೂರ್ಣವಾಗಿ ರದ್ದುಗೊಳಿಸಲಾಯಿತು. ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಸ್ಮೃತಿ ಮಂಧಾನಾ, ನಾನು ಖಾಸಗಿ ವ್ಯಕ್ತಿ. ನನ್ನ ಮದುವೆ ರದ್ದಾಗಿದೆ ಎಂದು ಹೇಳಲುಬಯಸುತ್ತೇನೆ ಎಂದು ಹೇಳಿ ಈ ವಿಷಯವನ್ನು ಇಲ್ಲಿ ಮುಗಿಸಲು ಮತ್ತು ಕುಟುಂಬಗಳ ಗೌಪ್ಯತೆಯನ್ನು ಗೌರವಿಸಲು ಎಲ್ಲರಿಗೂ ಮನವಿ ಮಾಡಿದ್ದರು.

ಮೋಸ ಆರೋಪಗಳು

ನಂತರ ಸ್ಮೃತಿಯ ಸ್ನೇಹಿತ ವಿಧ್ನ್ಯಾನ್ ಮಾನೆ, ಮದುವೆ ಕಾರ್ಯಕ್ರಮದಲ್ಲಿ ತಾನು ಇದ್ದೆ ಎಂದು ಹೇಳಿ ಗಂಭೀರ ಆರೋಪಗಳನ್ನು ಮಾಡಿದ್ದರು. ಪಲಾಶ್ ಮತ್ತೊಬ್ಬ ಮಹಿಳೆಯೊಂದಿಗೆ ಇದ್ದಾಗ ಸಿಕ್ಕಿಬಿದ್ದಿದ್ದು, ಇದರಿಂದ ಗಲಾಟೆ ನಡೆದಿದೆ ಎಂದು ಆರೋಪಿಸಿದ್ದರು.

ಆದರೆ ಪಲಾಶ್ ಮುಚ್ಚಲ್ ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿ, ಅವು ಸುಳ್ಳು ಮತ್ತು ನನ್ನ ತೇಜೋವಧೆಯನ್ನು ಹಾಳು ಮಾಡಲು ಮಾಡಿದ ಪ್ರಯತ್ನ ಎಂದು ಹೇಳಿ ತಮ್ಮ ವಕೀಲರ ಮೂಲಕ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು.

ಒಟ್ಟಿನಲ್ಲಿ, ಈಗ ವೈರಲ್ ಆಗಿರುವ ವಿಡಿಯೋ ಮತ್ತು ವದಂತಿಗಳ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.

Smriti Mandanna-Palash Muchchal
'ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ 6 ವರ್ಷಗಳಿಂದ ಹುಚ್ಚು ಪ್ರೀತಿಯಲ್ಲಿದ್ದರು': ನಟ ನಂದೀಶ್ ಸಂಧು

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com