

ಮಾಜಿ ಕ್ರಿಕೆಟಿಗ ಮುನಾಫ್ ಪಟೇಲ್, ಅನುಭವಿ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ 'ಭಾರತಕ್ಕೆ ಮೊದಲು' ಎಂಬ ಮನೋಭಾವವನ್ನು ಶ್ಲಾಘಿಸಿದ್ದಾರೆ. ಟೆಸ್ಟ್ ಮತ್ತು ಟಿ20ಐ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರೂ, ಕೊಹ್ಲಿ ಮತ್ತು ರೋಹಿತ್ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಲು ಬದ್ಧರಾಗಿದ್ದಾರೆ. ಮುಂದಿನ ವರ್ಷ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಮುಂಚಿತವಾಗಿ ತಮ್ಮ ಫಿಟ್‌ನೆಸ್ ಕಾಪಾಡಿಕೊಳ್ಳಲು ಈ ಜೋಡಿ ಕಳೆದ ವರ್ಷ ವಿಜಯ್ ಹಜಾರೆ ಟ್ರೋಫಿಯಲ್ಲಿಯೂ ಭಾಗವಹಿಸಿದ್ದರು.
ಇತ್ತೀಚಿನ ಸಂವಾದವೊಂದರಲ್ಲಿ, 2011ರಲ್ಲಿ ಭಾರತದ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದ ಮುನಾಫ್, ಭಾರತಕ್ಕಾಗಿ ಆಡುವುದು ಅವರ ಪ್ರಮುಖ ಆದ್ಯತೆಯಾಗಿ ಉಳಿದಿದೆ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನತ್ತ ಗಮನಹರಿಸಲು ಅವರು ಬೇಕಿದ್ದರೆ ಐಪಿಎಲ್ ಅನ್ನು ಸಹ ತ್ಯಜಿಸಬಹುದು ಎಂದರು.
'ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ದೇಶಕ್ಕೆ ಮೊದಲ ಸ್ಥಾನ ನೀಡುವುದನ್ನು ನಾನು ಯಾವಾಗಲೂ ನೋಡಿದ್ದೇನೆ. ಅವರು ತೋರಿಸುವ ಆದ್ಯತೆಯು ಬೇರೆಯದೇ ಮಟ್ಟದಲ್ಲಿರುತ್ತದೆ. ಅಗತ್ಯವಿದ್ದರೆ ಅವರು ದೇಶಕ್ಕಾಗಿ ಐಪಿಎಲ್ ಅನ್ನು ತೊರೆಯಬಹುದು. ಆದರೆ, ಅವರು ಎಂದಿಗೂ ಭಾರತ ತಂಡವನ್ನು ತೊರೆಯುವುದಿಲ್ಲ. ಅದು ನೀವು ಯಾವಾಗಲೂ ನೋಡುವ ವಿಷಯ' ಎಂದು ಮುನಾಫ್ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದರು.
ಐಪಿಎಲ್ 2026ರಲ್ಲಿ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ (MI) ಪರ ಆಡುತ್ತಿದ್ದಾರೆ.
ಬುಧವಾರ ಆರ್‌ಸಿಬಿ ಪರ ಕೊಹ್ಲಿ ಗರಿಷ್ಠ ಸ್ಕೋರರ್ ಗಳಿಸಿದರು. ಹಾಲಿ ಚಾಂಪಿಯನ್‌ಗಳು ಬೆಂಗಳೂರಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ನೀಡಿದ 147 ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತು.
ಎಲ್‌ಎಸ್‌ಜಿ ತಂಡದ ಇನಿಂಗ್ಸ್‌ನಲ್ಲಿ ಗಾಯದ ಸಮಸ್ಯೆಯಿಂದಾಗಿ ಮೈದಾನದಿಂದ ಹೊರಗುಳಿದಿದ್ದ ಕೊಹ್ಲಿ, ಆರ್‌ಸಿಬಿ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದರು. 34 ಎಸೆತಗಳಲ್ಲಿ 49 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಮಾಲೀಕರಾದರು.
ಇತ್ತ ರೋಹಿತ್ ಶರ್ಮಾ ಕೂಡ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ವಿರುದ್ಧದ ಮುಂಬೈ ಇಂಡಿಯನ್ಸ್ ಪಂದ್ಯದ ಸಮಯದಲ್ಲಿ ಗಾಯಗೊಂಡು ರಿಟೈರ್ಡ್ ಹರ್ಟ್ ಆದರು.
ರೋಹಿತ್ 13 ಎಸೆತಗಳಲ್ಲಿ 19 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾಗ ಗಾಯಗೊಂಡು ರಿಟೈರ್ಡ್ ಹರ್ಟ್ ಆದರು. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 18 ರನ್‌ಗಳಿಂದ ಸೋತಿತು ಮತ್ತು ಈ ಆವೃತ್ತಿಯಲ್ಲಿ ಸತತ ಮೂರನೇ ಸೋಲು ಕಂಡಿತು.
Advertisement