IPL 2026: RRಗೆ ಸುಲಭದ ತುತ್ತಾದ LSG, ರಿಷಬ್ ಪಂತ್ ಪಡೆಗೆ ಸತತ 4ನೇ ಸೋಲು

ಇಂದು ಲಖನೌನ ಏಕಾನ ಕ್ರೀಡಾಂಗಣದಲ್ಲಿ ನಡೆದ ರಾಜಸ್ತಾನ ರಾಯಲ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ 40 ರನ್ ಗಳ ಹೀನಾಯ ಸೋಲುಕಂಡಿದೆ.
Rajasthan Royals Hand LSG 4th Consecutive Defeat
ಪಂತ್ ಪಡೆಗೆ ಮತ್ತೊಂದು ಸೋಲು
Updated on

ಲಖನೌ: ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋತಿದ್ದು, ಆ ಮೂಲಕ ಟೂರ್ನಿಯಲ್ಲಿ ಸತತ ನಾಲ್ಕನೇ ಸೋಲು ಕಂಡಿದೆ.

ಇಂದು ಲಖನೌನ ಏಕಾನ ಕ್ರೀಡಾಂಗಣದಲ್ಲಿ ನಡೆದ ರಾಜಸ್ತಾನ ರಾಯಲ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ 40 ರನ್ ಗಳ ಹೀನಾಯ ಸೋಲುಕಂಡಿದೆ. ರಾಜಸ್ತಾನ ನೀಡಿದ 160 ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಲಕ್ನೋಗೆ ಬ್ಯಾಟಿಂಗ್ ವೈಫಲ್ಯ ಕೈಕೊಟ್ಟಿತು. ಹೀಗಾಗಿ ಪಂತ್ ಪಡೆ 18 ಓವರ್ ನಲ್ಲೇ ಕೇವಲ 119 ರನ್ ಗಳಿಸಿ ಆಲೌಟ್ ಆಯಿತು.

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಲಕ್ನೋ ತಂಡದ ನಾಯಕ ರಿಷಬ್ ಪಂತ್ ರಾಜಸ್ತಾನವನ್ನು 159 ರನ್ ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ರಾಜಸ್ತಾನದ ಸ್ಫೋಟಕ ಬ್ಯಾಟರ್ ಗಳಾದ ವೈಭವ್ ಸೂರ್ಯವಂಶಿ ಮತ್ತು ಯಶಸ್ವಿ ಜೈಸ್ವಾಲ್ ರನ್ನು ಬೇಗನೆ ಪೆವಿಲಿಯನ್ ಗೆ ಅಟ್ಟುವ ಮೂಲಕ ಲಕ್ನೋ ಮೇಲುಗೈ ಸಾಧಿಸಿತು.

Rajasthan Royals Hand LSG 4th Consecutive Defeat
ತಲೆಗೆ ಬಡಿದ ಚೆಂಡು, ಕೆಳಗೆ ಬಿದ್ದ ಹೆಲ್ಮೆಟ್ ಒದ್ದು ಬ್ಯಾಟರ್ ಆಕ್ರೋಶ; ಪಂದ್ಯವೇ ರದ್ದು..; ಕಾರಣ ಅಪಾಯಕಾರಿ ಪಿಚ್! Video

ಆದರೆ ಮಧ್ಯಮ ಕ್ರಮಾಂಕದಲ್ಲಿ ರವೀಂದ್ರ ಜಡೇಜಾ ಅಜೇಯ 43ರನ್, ನಾಯಕ ರಿಯಾನ್ ಪರಾಗ್ 20, ಹೇಟ್ಮೆಯರ್ 22, ಫೆರೀರಾ 20 ಮತ್ತು ಶುಭಂ ದುಬೆ 19 ರನ್ ಗಳಿಸಿ ರಾಜಸ್ತಾನದ ಮೊತ್ತ 150ರ ಗಡಿದಾಟುವಂತೆ ನೋಡಿಕೊಂಡರು.

ಬಳಿಕ ಈ ಸವಾಲಿನ ಗುರಿ ಬೆನ್ನು ಹತ್ತಿದ ಲಕ್ನೋ ತಂಡ ಆರಂಭದಿಂದಲೇ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಆರಂಭಿಕ ಆಟಗಾರ ಮಿಚ್ ಮಾರ್ಶ್ 55, ನಿಕೋಲಸ್ ಪೂರನ್ 22 ಮತ್ತು ಹಿಮ್ಮತ್ ಸಿಂಗ್ 15 ರನ್ ಗಳಿಸಿದ್ದು ಬಿಟ್ಟರೆ ಲಕ್ನೋ ಪರ ಉಳಿದಾವ ಬ್ಯಾಟರ್ ಕೂಡ ಎರಡಂಕಿ ಮೊತ್ತ ದಾಟಲೇ ಇಲ್ಲ.

ಪ್ರಮುಖವಾಗಿ ನಾಲ್ಕು ಬ್ಯಾಟರ್ ಗಳು ಶೂನ್ಯ ಸುತ್ತಿದ್ದು ತಂಡಕ್ಕೆ ಮಾರಕವಾಗಿ ಪರಿಣಮಿಸಿತು. ಅಂತಿಮವಾಗಿ ಲಕ್ನೋ ತಂಡ 18 ಓವರ್ ನಲ್ಲಿ 119 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 40 ರನ್ ಗಳ ಅಂತರದಲ್ಲಿ ರಾಜಸ್ತಾನ ಎದುರು ಮಂಡಿಯೂರಿತು.

ಇತ್ತ ರಾಜಸ್ತಾನ ಪರ ಜೋಫ್ರಾ ಆರ್ಚರ್ 3, ಬರ್ಗರ್ ಮತ್ತು ಬ್ರಿಜೇಶ್ ಶರ್ಮಾ ತಲಾ 2, ರವೀಂದ್ರ ಜಡೇಜಾ ಮತ್ತು ರವಿ ಬಿಷ್ಣೋಯ್ ತಲಾ 1 ವಿಕೆಟ್ ಪಡೆದರು.

ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಉತ್ತಮ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com