RBI ಅಸಿಸ್ಟೆಂಟ್ ಮ್ಯಾನೇಜರ್ ಕೆಲಸಕ್ಕೆ ಇಶಾನ್ ಕಿಶನ್ ಹಾಜರ್! ಕ್ರಿಕೆಟ್​​ಗೆ ಸುದೀರ್ಘ ರಜೆ; ವೇತನ ಎಷ್ಟು ಗೊತ್ತಾ?

ಹೌದು. ಸ್ಟಾರ್​​ ಕ್ರಿಕೆಟರ್ ಇಶಾನ್ ಕಿಶನ್ ಅವರು ಈಗ ತಮ್ಮ ಕೆಲಸಕ್ಕೆ ಮರಳಿದ್ದಾರೆ. ಆದರೆ ಈ ಬಾರಿ ಕ್ರಿಕೆಟ್ ಮೈದಾನಕ್ಕೆ ಆಗಮಿಸಿಲ್ಲ. ಬದಲಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಪಾಟ್ನಾ ಕಚೇರಿಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
Ishan Kishan joins Reserve Bank of India as Assistant Manager
ಇಶಾನ್ ಕಿಶನ್
Updated on

ನವದೆಹಲಿ: ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ಇಶಾನ್ ಕಿಶನ್(28) ಅವರು ಫಾರ್ಮಲ್ ಡ್ರೆಸ್​, ಐಡಿ ಧರಿಸಿ ಸರ್ಕಾರಿ ಆಫೀಸರ್ ಅವತಾರದಲ್ಲಿ ಆರ್‌ಬಿಐ(RBI) ಕಚೇರಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ಹೌದು. ಸ್ಟಾರ್​​ ಕ್ರಿಕೆಟರ್ ಇಶಾನ್ ಕಿಶನ್ ಅವರು ಈಗ ತಮ್ಮ ಕೆಲಸಕ್ಕೆ ಮರಳಿದ್ದಾರೆ. ಆದರೆ ಈ ಬಾರಿ ಕ್ರಿಕೆಟ್ ಮೈದಾನಕ್ಕೆ ಆಗಮಿಸಿಲ್ಲ. ಬದಲಾಗಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಪಾಟ್ನಾ ಕಚೇರಿಯಲ್ಲಿ ಸಹಾಯಕ ವ್ಯವಸ್ಥಾಪಕರಾಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಕ್ರೀಡಾ ಕೋಟಾದಡಿಯಲ್ಲಿ ಆರ್ ಬಿಐನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆ ಪಡೆದಿರುವ ಇಶಾನ್ ಕಿಶನ್ ಅವರು, ಶ್ರೀಲಂಕಾದಲ್ಲಿ ಆಗಸ್ಟ್ 15 ರಿಂದ ಪ್ರಾರಂಭವಾಗುವ ಎರಡು ಟೆಸ್ಟ್‌ಗಳಲ್ಲಿ ಭಾಗವಹಿಸದ ಕಿಶನ್, ಬ್ಯಾಂಕರ್ ಆಗಿ ತಮ್ಮ ಡೆಸ್ಕ್ ಕೆಲಸಕ್ಕೆ ಹಾಜರಾಗಿದ್ದಾರೆ.

Ishan Kishan joins Reserve Bank of India as Assistant Manager
'2 ವರ್ಷ ನಾನು 12ನೇ ಆಟಗಾರನಾಗಿದ್ದೆ, ಅದು ತುಂಬಾ ಕಷ್ಟವಾಗಿತ್ತು': ಟೀಂ ಇಂಡಿಯಾ ಜೊತೆಗಿನ ಪಯಣದ ಬಗ್ಗೆ ಅಜಿಂಕ್ಯ ರಹಾನೆ

ಇಶಾನ್ ಕಿಶನ್ ಅವರು ಫಾರ್ಮಲ್ ಡ್ರೆಸ್​, ಐಡಿ ಧರಿಸಿ ಆರ್ ಬಿಐನಲ್ಲಿ ಇತರ ಸಿಬ್ಬಂದಿಗಳ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿರುವ ಹಲವಾರು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ.

ಇಶಾನ್ ಕಿಶನ್ ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿ ಸಹಾಯಕ ವ್ಯವಸ್ಥಾಪಕ ಹುದ್ದೆಯನ್ನ ಹೊಂದಿದ್ದಾರೆ. ಅವರನ್ನು 2017ರಲ್ಲಿ ಕ್ರೀಡಾ ಕೋಟಾದಡಿಯಲ್ಲಿ ಈ ಹುದ್ದೆಗೆ ನೇಮಕವಾಗಿದ್ದರು. ಆ ಸಮಯದಲ್ಲಿ, ಇಶಾನ್ ಒಬ್ಬ ಉದಯೋನ್ಮುಖ ಕ್ರಿಕೆಟಿಗ ಮತ್ತು ಕೇವಲ 18ವರ್ಷ ವಯಸ್ಸಿನವರಾಗಿದ್ದರು. ಇಶಾನ್ ಡಿವೈ ಪಾಟೀಲ್ ಟ್ರೋಫಿಯಂತಹ ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಆರ್‌ಬಿಐ ಅನ್ನು ಪ್ರತಿನಿಧಿಸಿದ್ದಾರೆ. ಆದ್ದರಿಂದ, ಕ್ರಿಕೆಟ್‌ನಿಂದ ಬಿಡುವು ಸಿಕ್ಕಾಗಲೆಲ್ಲಾ ಅವರು ಆರ್‌ಬಿಐ ಕಚೇರಿಗೆ ಭೇಟಿ ನೀಡುತ್ತಾರೆ.

ಇಶಾನ್ ಕಿಶನ್ ಎಷ್ಟು ಸಂಬಳ ಪಡೆಯುತ್ತಾರೆ?

ಭಾರತೀಯ ರಿಸರ್ವ್ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಹುದ್ದೆಯೂ ಗ್ರೇಡ್ ಎ-ಲೆವೆಲ್ ಹುದ್ದೆಯಾಗಿದೆ. ಹಾಗಾಗಿ ವೇತನವು ಕೂಡ ಉತ್ತಮವಾಗಿದೆ. ಈ ಹುದ್ದೆಗೆ ಮೂಲ ವೇತನವೇ ₹45,000 ರಿಂದ ₹49,000 ವರೆಗೆ ಇರುತ್ತದೆ. ಮೂಲ ವೇತನಕ್ಕೆ ಸವಲತ್ತುಗಳು ಮತ್ತು ಭತ್ಯೆಗಳನ್ನು ಸೇರಿಸುವುದರಿಂದ ವೇತನ ₹90,000 ರಿಂದ ₹115,000 ವರೆಗೆ ಇರುತ್ತದೆ. ಕೆಲವು ಅಗತ್ಯ ಕಡಿತಗಳ ನಂತರ, ₹75,000 ರಿಂದ ₹90,000 ವರೆಗೆ ಕೈಗೆ ಸಿಗುತ್ತದೆ. ಹೀಗಾಗಿ, ಇಶಾನ್ ಕಿಶನ್ ಆರ್‌ಬಿಐನಿಂದ ತಿಂಗಳಿಗೆ ಸುಮಾರು ₹90,000 ಗಳಿಸುತ್ತಾರೆ.

ಕ್ರಿಕೆಟ್​​ಗೆ ಸುದೀರ್ಘ ರಜೆ

ಐರ್ಲೆಂಡ್, ಇಂಗ್ಲೆಂಡ್ ಮತ್ತು ಜಿಂಬಾಬ್ವೆ ಪ್ರವಾಸಗಳನ್ನು ಒಳಗೊಂಡ ಬಿಡುವಿಲ್ಲದ ವೇಳಾಪಟ್ಟಿಯ ನಂತರ, ಇಶಾನ್ ಕಿಶನ್ ಅವರು ಪ್ರಸ್ತುತ ಸುದೀರ್ಘ ವಿರಾಮ ತೆಗೆದುಕೊಳ್ಳುತ್ತಿದ್ದಾರೆ. ಶ್ರೀಲಂಕಾದಲ್ಲಿ ಟೀಮ್ ಇಂಡಿಯಾದ ಟೆಸ್ಟ್ ಸರಣಿ ಪ್ರವಾಸಕ್ಕಾಗಿ ಅವರನ್ನು ತಂಡದಲ್ಲಿ ಸೇರಿಸಿಲ್ಲ. ಪರಿಣಾಮವಾಗಿ, ಅವರು ತಮ್ಮ ಊರಿಗೆ ಮರಳಿದ್ದು, ಬಿಡುವಿರುವುದರಿಂದ ಆರ್‌ಬಿಐನಲ್ಲಿ ಕರ್ತವ್ಯಕ್ಕೆ ಹಾಜಾರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com