ಜೂನಿಯರ್ ಜೊತೆ ಅಫೇರ್: ಸಂಗಾತಿ ವಿರುದ್ಧವೇ ತಿರುಗಿ ಬಿದ್ದ ಆಸಿಸ್ ಸ್ಟಾರ್ ಪ್ಲೇಯರ್, ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧವೂ ಕೆಂಡಾಮಂಡಲ

ಗಾರ್ಡ್ನರ್ ಅವರು ತನಗೆ ಮೋಸ ಮಾಡಿದ್ದಾರೆ ಎಂದು ಈ ಹಿಂದೆ ಬಹಿರಂಗವಾಗಿ ಆರೋಪಿಸಿದ್ದ ರೈಟ್, ಉಪನಾಯಕಿ ಸ್ಥಾನದಿಂದಲೂ ಗಾರ್ಡ್ನರ್ ಅವರನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದಾರೆ.
Ashleigh Gardner's Ex-Wife Reignites Controversy
ಆಸ್ಚ್ರೇಲಿಯಾ ಕ್ರಿಕೆಟ್ ತಂಡ ಆಟಗಾರ್ತಿ ಮೋನಿಕಾ ರೈಟ್
Updated on

ಸಿಡ್ನಿ: ತನ್ನ ಸಂಗಾತಿಯ ಅಕ್ರಮ ಸಂಬಂಧದ ವಿರುದ್ಧ ತಿರುಗಿ ಬಿದ್ದಿರುವ ಆಸ್ಟ್ರೇಲಿಯಾ ಸ್ಟಾರ್ ಪ್ಲೇಯರ್ ಕ್ರಿಕೆಟ್ ಆಸ್ಟ್ರೇಲಿಯಾ ವಿರುದ್ಧವೂ ಕೆಂಡಾಮಂಡಲರಾಗಿದ್ದಾರೆ.

ಹೌದು.. ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ ತಂಡದ ಉಪನಾಯಕಿ ಆಶ್ಲೀ ಗಾರ್ಡ್ನರ್ ಅವರ ಮಾಜಿ ಪತ್ನಿ ಮೋನಿಕಾ ರೈಟ್, ಕ್ರಿಕೆಟ್ ಆಸ್ಟ್ರೇಲಿಯಾ (CA) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಾರ್ಡ್ನರ್ ಅವರು ಸಹ ಆಟಗಾರ್ತಿ ಜಾರ್ಜಿಯಾ ವೋಲ್ ಅವರೊಂದಿಗೆ ಹೊಂದಿದ್ದಾರೆ ಎನ್ನಲಾದ ಸಂಬಂಧದ ಬಗ್ಗೆ ಕ್ರಿಕೆಟ್ ಮಂಡಳಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಗಾರ್ಡ್ನರ್ ಅವರು ತನಗೆ ಮೋಸ ಮಾಡಿದ್ದಾರೆ ಎಂದು ಈ ಹಿಂದೆ ಬಹಿರಂಗವಾಗಿ ಆರೋಪಿಸಿದ್ದ ರೈಟ್, ಉಪನಾಯಕಿ ಸ್ಥಾನದಿಂದಲೂ ಗಾರ್ಡ್ನರ್ ಅವರನ್ನು ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು Code Sportsಗೆ ನೀಡಿದ ಸಂದರ್ಶನದಲ್ಲಿ ರೈಟ್ ಮಾತನಾಡಿದ್ದು, “ನಿಮ್ಮ ದೇಶವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದರೆ ಹಾಗೂ ನೀವು ಮಾದರಿ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದರೆ, ಉನ್ನತ ನೈತಿಕ ಮಾನದಂಡಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯೂ ಇರುತ್ತದೆ. ಆದರೆ ಕ್ರಿಕೆಟ್ ಆಸ್ಟ್ರೇಲಿಯಾ ಈ ಬಗ್ಗೆ ಸಾರ್ವಜನಿಕವಾಗಿ ಏಕೆ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ” ಎಂದು ಹೇಳಿದ್ದಾರೆ.

Ashleigh Gardner's Ex-Wife Reignites Controversy
Cricket: ಶ್ರೀಲಂಕಾ ಟೆಸ್ಟ್ ಸರಣಿಯಿಂದ Sai Sudharsan ಔಟ್

ಜೂನಿಯರ್ ಜೊತೆ ಅಕ್ರಮ ಸಂಬಂಧ

“ಕ್ರಿಕೆಟ್ ಆಸ್ಟ್ರೇಲಿಯಾದ ಮೌನ ಎಂದರೆ ಆಶ್ಲೀ ಮತ್ತು ಜಾರ್ಜಿಯಾ ಅವರ ನಡೆಗೆ ಸಂಸ್ಥೆ ಬೆಂಬಲ ನೀಡುತ್ತಿದೆ ಎಂದರ್ಥವೇ? ಕಿರಿಯ ಸಿಬ್ಬಂದಿ ಸದಸ್ಯರೊಂದಿಗೆ, ಅದರಲ್ಲೂ ಸ್ಪಷ್ಟ ಅಧಿಕಾರದ ಅಸಮತೋಲನ ಇರುವಾಗ, ಅಫೇರ್‌ ಹೊಂದಿ ನಂತರವೂ ನಾಯಕತ್ವದ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಿಲ್ಲ” ಎಂದು ರೈಟ್ ಕಿಡಿಕಾರಿದ್ದಾರೆ.

“ನಾಯಕರು ತಂಡಕ್ಕೆ ಮಾದರಿಯಾಗಬೇಕು ಎಂದು ನಿರೀಕ್ಷಿಸಲಾಗುತ್ತದೆ. ಇಂತಹ ನಡೆ ಆ ಮಾನದಂಡದಿಂದ ಬಹಳ ದೂರವಿದೆ” ಎಂದು ಅವರು ಆರೋಪಿಸಿದ್ದಾರೆ. ಆದರೆ ರೈಟ್ ಅವರ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಈ ವಿಚಾರ “ವೈಯಕ್ತಿಕ ಮತ್ತು ಖಾಸಗಿ ವಿಷಯ” ಎಂದು ಹೇಳಿದೆ.

ಮಂಡಳಿ ಹೇಳಿದ್ದೇನು?

“ನಮ್ಮ ಸಿಬ್ಬಂದಿಯ ನಡುವಿನ ಎಲ್ಲ ಸಂಬಂಧಗಳು Respect at Work ನೀತಿಗೆ ಅನುಗುಣವಾಗಿರುವುದನ್ನು ಕ್ರಿಕೆಟ್ ಆಸ್ಟ್ರೇಲಿಯಾ ಖಚಿತಪಡಿಸುತ್ತದೆ. ನಾಯಕತ್ವದ ಜವಾಬ್ದಾರಿಗಳನ್ನು ಬೆಂಬಲಿಸಲು ಹಾಗೂ ತಂಡದ ಪ್ರಕ್ರಿಯೆಗಳ ಸಮಗ್ರತೆಯನ್ನು ಕಾಪಾಡಲು ಸೂಕ್ತ ಹಿತಾಸಕ್ತಿ ಸಂಘರ್ಷ ನಿರ್ವಹಣಾ ವ್ಯವಸ್ಥೆಗಳನ್ನು ರೂಪಿಸುವುದೂ ಇದರಲ್ಲಿ ಸೇರಿದೆ” ಎಂದು CA ಹೇಳಿದೆ.

Ashleigh Gardner's Ex-Wife Reignites Controversy
ಶ್ರೀಲಂಕಾ ಪ್ರವಾಸ: ಜೈಸ್ವಾಲ್ ಡಕೌಟ್, ಶತಕ ಸಿಡಿಸಿ ಭಾರತಕ್ಕೆ ಆಸರೆಯಾದ ಕನ್ನಡಿಗ ದೇವದತ್ ಪಡಿಕ್ಕಲ್

ಸಲಿಂಗಿ ವಿವಾಹ

Daily Mail ವರದಿ ಪ್ರಕಾರ, ರೈಟ್ ಮತ್ತು ಗಾರ್ಡ್ನರ್ 2025ರ ಏಪ್ರಿಲ್‌ನಲ್ಲಿ ವಿವಾಹವಾಗಿದ್ದರು. ಆದರೆ 2025ರ ಮಹಿಳಾ ಏಕದಿನ ವಿಶ್ವಕಪ್‌ಗಾಗಿ ಗಾರ್ಡ್ನರ್ ಭಾರತದಲ್ಲಿದ್ದ ವೇಳೆ ಅವರ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಜಾರ್ಜಿಯಾ ವೋಲ್ ಅವರೊಂದಿಗೆ ಗಾರ್ಡ್ನರ್ ಸಂಬಂಧ ಹೊಂದಿದ್ದಾರೆ ಎಂದು ರೈಟ್ ಆರೋಪಿಸಿದ್ದರು. ಬಳಿಕ ಇಬ್ಬರೂ ಪ್ರತ್ಯೇಕವಾಗಿದ್ದಾರೆ.

ಈ ವಿವಾದದ ನಡುವೆ ಗಾರ್ಡ್ನರ್ ಅವರ ಮಹಿಳಾ ಬಿಗ್ ಬ್ಯಾಷ್ ಲೀಗ್ (WBBL) ತಂಡ ಸಿಡ್ನಿ ಸಿಕ್ಸರ್ಸ್ ಅವರಿಗೆ ಬೆಂಬಲ ನೀಡಿದೆ.

“ಆಶ್ ಅವರ ವೈಯಕ್ತಿಕ ಜೀವನ ಅಥವಾ ಅಂತಹ ಯಾವುದೇ ವಿಚಾರದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ ನಾವು ಪರಸ್ಪರ ಸಂದೇಶ ಕಳುಹಿಸಿಕೊಂಡಿದ್ದೇವೆ” ಎಂದು ಸಿಕ್ಸರ್ಸ್ ತಂಡದ ಜನರಲ್ ಮ್ಯಾನೇಜರ್ ಹಾಗೂ ಮಾಜಿ ಆಸ್ಟ್ರೇಲಿಯಾ ಆಟಗಾರ್ತಿ ರಾಚೆಲ್ ಹೇನ್ಸ್ ಹೇಳಿದ್ದಾರೆ.

“ನಾನು ಅವರೊಂದಿಗೆ ಮಾತನಾಡಿ ವಿಚಾರಿಸಿದ್ದೇನೆ. ನಾವು ಅವರ ಬೆಂಬಲಕ್ಕೆ ಇದ್ದೇವೆ ಎಂಬುದು ಅವರಿಗೆ ಗೊತ್ತಿದೆ. ಅವರು ನಮ್ಮ ತಂಡದ ಅತ್ಯಂತ ಗೌರವಾನ್ವಿತ ಆಟಗಾರ್ತಿ ಹಾಗೂ ನಮಗೆ ಪ್ರಮುಖ ಆಟಗಾರ್ತಿಯಾಗಿದ್ದಾರೆ. ನಾವು ಅವರೊಂದಿಗಿದ್ದೇವೆ, ಅವರ ಬಗ್ಗೆ ಕಾಳಜಿ ಹೊಂದಿದ್ದೇವೆ ಮತ್ತು ಮುಂದೆಯೂ ಕ್ಲಬ್‌ನಲ್ಲಿ ಅವರೊಂದಿಗೆ ಮುಂದುವರಿಯಲು ಎದುರು ನೋಡುತ್ತಿದ್ದೇವೆ” ಎಂದು ಹೇನ್ಸ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com