

ರಾಜ್ ಕೋಟ್: ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತೊಂದು ಅತ್ಯಪರೂಪದ ಸಾಧನೆ ಮಾಡಿದ್ದು, ಎಲೈಟ್ ಗ್ರೂಪ್ ನಲ್ಲಿದ್ದ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದು, ನ್ಯೂಜಿಲೆಂಡ್ ವಿರುದ್ಧ ಗರಿಷ್ಠ ಸ್ಕೋರ್ ಕಲೆಹಾಕಿರುವ ಬ್ಯಾಟರ್ ಗಳ ಪಟ್ಟಿಯಲ್ಲಿ ಕೊಹ್ಲಿ ಇದೀಗ 2ನೇ ಸ್ಥಾನಕ್ಕೇರಿದ್ದಾರೆ. ಆ ಮೂಲಕ ಕೊಹ್ಲಿ ಭಾರತದ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ರಾಜ್ ಕೋಟ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 23 ರನ್ ಗಳಿಸಿದ ವಿರಾಟ್ ಕೊಹ್ಲಿ ಆ ಮೂಲಕ ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯಗಳಲ್ಲಿ ತಮ್ಮ ರನ್ ಗಳಿಕೆಯನ್ನು 1750ರ ಗಡಿದಾಟಿಸಿದರು.
ಆ ಮೂಲಕ ನ್ಯೂಜಿಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಭಾರತದ ಮೊದಲ ಮತ್ತು ಜಾಗತಿಕ 2ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ
ಎಲೈಟ್ ಗ್ರೂಪ್ ಅಗ್ರಸ್ಥಾನದ ಮೇಲೆ ಕಣ್ಣು!
ನ್ಯೂಜಿಲೆಂಡ್ ವಿರುದ್ಧ ಅತೀ ಹೆಚ್ಚು ರನ್ ಗಳಿಸಿದ ಆಟಗಾರರ ಎಲೈಟ್ ಗ್ರೂಪ್ ನಲ್ಲಿ ಆಸ್ಟ್ರೇಲಿಯಾ ಮಾಜಿ ನಾಯಕ ರಿಕ್ಕಿಪಾಂಟಿಂಗ್ ಅಗ್ರಸ್ಥಾನದಲ್ಲಿದ್ದಾರೆ. ಅವರು 51 ಪಂದ್ಯಗಳಲ್ಲಿ 45.83 ಸರಾಸರಿಯಲ್ಲಿ 1,971 ರನ್ ಗಳಿಸಿದ್ದಾರೆ. ಇದು ನ್ಯೂಜಿಲೆಂಡ್ ವಿರುದ್ದ ಬ್ಯಾಟರ್ ಓರ್ವ ಗಳಿಸಿರುವ ಗರಿಷ್ಟ ರನ್ ಗಳಿಕೆಯಾಗಿದೆ.
ಈ ಪಟ್ಟಿಯಲ್ಲಿ ಇಷ್ಟು ದಿನ ಭಾರತದ ಸಚಿನ್ ತೆಂಡೂಲ್ಕರ್ ಇದ್ದರು. ಸಚಿನ್ ಒಟ್ಟು 42 ಪಂದ್ಯಗಳಿಂದ 46.05 ಸರಾಸರಿಯಲ್ಲಿ 1,750 ರನ್ ಕಲೆ ಹಾಕಿದ್ದರು. ಇದೀಗ ವಿರಾಟ್ ಕೊಹ್ಲಿ 1,751ಕ್ಕೂ ಅಧಿಕ ರನ್ ಕಲೆಹಾಕುವ ಮೂಲಕ ಈ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಕೊಹ್ಲಿ ಒಟ್ಟು 35 ಪಂದ್ಯಗಳಲ್ಲಿ 56.40 ಸರಾಸರಿಯಲ್ಲಿ 1,751+ ರನ್ ಗಳಿಸಿದ್ದಾರೆ.
Players With Most Runs Against New Zealand (ODIs):
Ricky Ponting (Australia): 51 Matches | 1,971 Runs | 45.83 Average
Virat Kohli (India): 35 Matches | 1,751+ Runs | 56.40 Average
Sachin Tendulkar (India): 42 Matches | 1,750 Runs | 46.05 Average
Sanath Jayasuriya (Sri Lanka): 47 Matches | 1,519 Runs | 33.75 Average
Advertisement