

ನಾಗ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲನೇ T20I ನಂತರ ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಯುವ ಬ್ಯಾಟರ್ ಅಭಿಷೇಕ್ ಶರ್ಮಾ ಅವರನ್ನು ಶ್ಲಾಘಿಸಿದ್ದಾರೆ. 25 ವರ್ಷದ ಅಭಿಷೇಕ್ 35 ಎಸೆತಗಳಲ್ಲಿ 84 ರನ್ ಗಳಿಸಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ನ್ಯೂಜಿಲೆಂಡ್ ತಂಡವನ್ನು 48 ರನ್‌ಗಳಿಂದ ಸೋಲಿಸಿದ ಭಾರತ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಸ್ವರೂಪದಲ್ಲಿ ತಮ್ಮ ಆರನೇ ಅರ್ಧಶತಕ ಪೂರ್ಣಗೊಳಿಸಲು ಅಭಿಷೇಕ್ ಕೇವಲ 22 ಎಸೆತಗಳನ್ನು ತೆಗೆದುಕೊಂಡರು. ಆಧುನಿಕ ದಿನದ ಆಟಗಾರರು ಮತ್ತು ತಮ್ಮ ಪೀಳಿಗೆಯ ಬ್ಯಾಟಿಂಗ್ ವಿಧಾನದ ನಡುವಿನ ಸಂಪೂರ್ಣ ವ್ಯತ್ಯಾಸವನ್ನು ಮಾಜಿ ಬ್ಯಾಟರ್ ಎತ್ತಿ ತೋರಿಸಿದ್ದಾರೆ.
'ನಾನು ಮೊದಲ ರನ್ ಗಳಿಸಲು ತೆಗೆದುಕೊಳ್ಳುತ್ತಿದ್ದ ಅಷ್ಟೇ ಎಸೆತಗಳಲ್ಲಿ ಅಭಿಷೇಕ್ ಶರ್ಮಾ ಅರ್ಧಶತಕ ಗಳಿಸಿದ್ದಾರೆ. ಈ ನಡುವೆ ದೊಡ್ಡ ವ್ಯತ್ಯಾಸವಿದೆ ಎಂದು ಗವಾಸ್ಕರ್ ಪಂದ್ಯದ ನಂತರ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದರು.
ಅಭಿಷೇಕ್ ಅವರ ಹೆಚ್ಚಿನ ಸ್ಟ್ರೈಕ್-ರೇಟ್‌ನಲ್ಲಿ ಹೆಚ್ಚಿನ ರನ್ ಕಲೆಹಾಕುವ ವಿಧಾನವು ಅಜಾಗರೂಕ ಆಟದ ಬದಲಿಗೆ ಅವರ ಇಂಟೆಂಟ್ ಅನ್ನು ತೋರಿಸುತ್ತದೆ ಎಂದರು.
ಪಂದ್ಯದ ನಂತರ ಮಾತನಾಡಿದ ಅಭಿಷೇಕ್ ಶರ್ಮಾ, 'ನಾವು ಮೊದಲ ದಿನದಿಂದ ಒಂದು ಯೋಜನೆಯನ್ನು ಹೊಂದಿದ್ದೇವೆ ಮತ್ತು ಅದನ್ನು ಅನುಸರಿಸುತ್ತಿದ್ದೇವೆ. ನೀವು ಎಲ್ಲ ಬಾಲ್‌ಗಳನ್ನು ಹೊಡೆಯಲು ಅಥವಾ 200ರ ಸ್ಟ್ರೈಕ್ ರೇಟ್‌ನಲ್ಲಿ ಹೊಡೆಯಲು ಬಯಸಿದರೆ, ನೀವು ಸ್ಪಷ್ಟ ಉದ್ದೇಶವನ್ನು ಹೊಂದಿರಬೇಕು ಎಂಬುದು ನನಗೆ ತಿಳಿದಿದೆ. ಎಲ್ಲ ತಂಡಗಳು ನನಗಾಗಿ ಒಂದು ಯೋಜನೆಯನ್ನು ಹೊಂದಿರುತ್ತವೆ. ಆದರೆ, ನಾನು ಉತ್ತಮವಾಗಿ ಸಿದ್ಧತೆ ಮಾಡಿಕೊಂಡಿರುತ್ತೇನೆ. ನಾನು ನನ್ನ ಮಾತನ್ನು ಕೇಳುತ್ತೇನೆ. ಈ ರೀತಿ ಆಡುವುದು ಅಪಾಯಕಾರಿ ಎಂದು ನಾನು ಭಾವಿಸುವುದಿಲ್ಲ ಮತ್ತು ಇದು ನನ್ನ ಕಂಫರ್ಟ್ ಝೋನ್ ಎಂದು ಕೂಡ ಹೇಳುವುದಿಲ್ಲ' ಎಂದರು
'ನಾನು ಇನಿಂಗ್ಸ್‌ನ ಆರಂಭದಿಂದಲೂ ದೊಡ್ಡ ಹೊಡೆತಗಳನ್ನು ಹೊಡೆಯುವುದನ್ನು ಅಭ್ಯಾಸ ಮಾಡುತ್ತೇನೆ. ಆದರೆ, ರೇಂಜ್ ಹಿಟ್ಟಿಂಗ್ ಮಾಡುವುದಿಲ್ಲ. ಚೆಂಡನ್ನು ಎಚ್ಚರಿಕೆಯಿಂದ ನೋಡುತ್ತೇನೆ ಮತ್ತು ಪರಿಸ್ಥಿತಿಗಳಿಗೆ ತಕ್ಕಂತೆ ಹೊಂದಿಕೊಳ್ಳುತ್ತೇನೆ. ಸಾಕಷ್ಟು ತಯಾರಿ ನಡೆಸುತ್ತೇನೆ. ಬೌಲರ್‌ಗಳು ಸಾಮಾನ್ಯವಾಗಿ ಎಲ್ಲಿಗೆ ಬೌಲ್ ಮಾಡುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲು ತಮ್ಮದೇ ಬ್ಯಾಟಿಂಗ್ ವಿಡಿಯೋಗಳನ್ನು ಅಧ್ಯಯನ ಮಾಡುತ್ತೇನೆ. ಇದು ನಾನು ಹೊಡೆತಗಳನ್ನು ಯೋಜಿಸಲು ಸಹಾಯ ಮಾಡುತ್ತದೆ' ಎಂದು ತಿಳಿಸಿದರು.
ಭಾರತ ಎರಡು ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡರೂ, ಅಭಿಷೇಕ್ ಉತ್ತಮ ಲಯದಲ್ಲಿ ಕಂಡುಬಂದರು. ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ (10) ಮತ್ತು ಇಶಾನ್ ಕಿಶನ್ (8), 2023ರ ಬಳಿಕ ಮೊದಲ ಬಾರಿಗೆ ತಂಡಕ್ಕೆ ಮರಳಿದ್ದಾರೆ. ನಾಯಕ ಸೂರ್ಯಕುಮಾರ್ ಯಾದವ್ 22 ಎಸೆತಗಳಲ್ಲಿ 32 ರನ್ ಗಳಿಸಿ ಅಭಿಷೇಕ್ ಅವರೊಂದಿಗೆ ಮೂರನೇ ವಿಕೆಟ್‌ಗೆ 99 ರನ್ ಕಲೆಹಾಕಿದರು.
Advertisement