Kohli ದಾಖಲೆ ಧೂಳಿಪಟ: T20ಯಲ್ಲಿ ಹಲವು ದಾಖಲೆ ಬರೆದ ಶ್ರೇಯಸ್ ಅಯ್ಯರ್

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಭಾರತದ ಇನ್ನಿಂಗ್ಸ್ ಪೂರ್ಣಗೊಂಡಿದ್ದು 20 ಓವರ್‌ಗಳಲ್ಲಿ 7 ವಿಕೆಟ್‌ಗೆ 189 ರನ್ ಗಳಿಸಿತು, ನಾಯಕ ಶ್ರೇಯಸ್ ಅಯ್ಯರ್ ಪ್ರಮುಖ ಪಾತ್ರ ವಹಿಸಿದರು.
shreyas iyer
ಶ್ರೇಯಸ್ ಅಯ್ಯರ್
Updated on

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಯಿತು. ಭಾರತದ ಇನ್ನಿಂಗ್ಸ್ ಪೂರ್ಣಗೊಂಡಿದ್ದು 20 ಓವರ್‌ಗಳಲ್ಲಿ 7 ವಿಕೆಟ್‌ಗೆ 189 ರನ್ ಗಳಿಸಿತು, ನಾಯಕ ಶ್ರೇಯಸ್ ಅಯ್ಯರ್ ಪ್ರಮುಖ ಪಾತ್ರ ವಹಿಸಿದರು. ಆದರೆ ಎಡಬಿಡದೆ ಸುರಿದ ಮಳೆಯಿಂದಾಗಿ ಇಂಗ್ಲೆಂಡ್ ಬ್ಯಾಟಿಂಗ್ ಮಾಡದಂತಾಯಿತು. ಕೊನೆಗೆ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು.

ನಾಯಕನಾಗಿ ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ವಿರುದ್ಧ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಅರ್ಧಶತಕ ಗಳಿಸಿದರು. ಇದು ಟೀಮ್ ಇಂಡಿಯಾ ಕುಸಿತದ ಸೋಲಿನಿಂದ ಚೇತರಿಸಿಕೊಳ್ಳಲು ಸಹಾಯ ಮಾಡಿತು. ಶ್ರೇಯಸ್ 68 ರನ್ ಗಳಿಸಿದ್ದು ಇಂಗ್ಲೆಂಡ್​ ವಿರುದ್ಧ ಆಂಗ್ಲರ ನಾಡಿನಲ್ಲಿ ಗರಿಷ್ಠ ಸ್ಕೋರ್​ಗಳಿಸಿದ ಕ್ಯಾಪ್ಟನ್ ಎಂಬ ದಾಖಲೆಯನ್ನು ಕೂಡ ತಮ್ಮ ಹೆಸರಿಗೆ ಸೇರಿಸಿಕೊಂಡರು. ಇದಕ್ಕೂ ಮುನ್ನ ಈ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. 2018ರಲ್ಲಿ ಕಾರ್ಡಿಫ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ 47 ರನ್​ಗಳಿಸಿದ್ದು ಭಾರತೀಯ ನಾಯಕನ ಶ್ರೇಷ್ಠ ಸಾಧನೆಯಾಗಿತ್ತು. ತಮ್ಮ ಇನ್ನಿಂಗ್ಸ್‌ನೊಂದಿಗೆ, ಶ್ರೇಯಸ್ ಅಯ್ಯರ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 5000 ರನ್‌ಗಳನ್ನು ಪೂರ್ಣಗೊಳಿಸಿದರು.

ರೈನಾ ಮತ್ತು ರಾಹುಲ್ ದಾಖಲೆ ಸರಿಗಟ್ಟಿದ ಶ್ರೇಯಸ್

ಟಿ20 ನಾಯಕನಾಗಿ ಮೊದಲ ಬಾರಿಗೆ ಭಾರತ ಪರ 50+ ಸ್ಕೋರ್ ಗಳಿಸಿದ ಸಾಧನೆಯನ್ನು ಶ್ರೇಯಸ್ ಮಾಡಿದ್ದಾರೆ. ಈಗ ಅವರು ಟಿ20ಐಗಳಲ್ಲಿ ಭಾರತೀಯ ನಾಯಕನಾಗಿ ಅತಿ ಹೆಚ್ಚು 50+ ಇನ್ನಿಂಗ್ಸ್‌ಗಳನ್ನು ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಸುರೇಶ್ ರೈನಾ ಮತ್ತು ಕೆಎಲ್ ರಾಹುಲ್ ಅವರೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ. ರಾಹುಲ್ ಮತ್ತು ರೈನಾ ಕೂಡ ಟಿ20ಐಗಳಲ್ಲಿ ನಾಯಕರಾಗಿ ತಲಾ ಒಮ್ಮೆ ಮಾತ್ರ 50+ ಇನ್ನಿಂಗ್ಸ್‌ಗಳನ್ನು ಗಳಿಸಿದ್ದಾರೆ. ರೋಹಿತ್ ಶರ್ಮಾ 16 ಇನ್ನಿಂಗ್ಸ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 13 ಇನ್ನಿಂಗ್ಸ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

shreyas iyer
'ಇಲ್ಲಿಗೆ ಬರುವ ಮುನ್ನವೇ ಸೂರ್ಯಕುಮಾರ್ ಯಾದವ್ ಸಾಕಷ್ಟು ಮಾಹಿತಿ ನೀಡಿದ್ದರು': ಭಾರತದ T20I ನಾಯಕ ಶ್ರೇಯಸ್ ಅಯ್ಯರ್‌

ಟಿ20ಯಲ್ಲಿ ಅತಿ ಹೆಚ್ಚು 50+ ಇನ್ನಿಂಗ್ಸ್‌ಗಳನ್ನು ಹೊಂದಿರುವ ಭಾರತೀಯ ನಾಯಕರು

16 – ರೋಹಿತ್ ಶರ್ಮಾ (62 ಇನ್ನಿಂಗ್ಸ್‌ಗಳು)

13 – ವಿರಾಟ್ ಕೊಹ್ಲಿ (46 ಇನ್ನಿಂಗ್ಸ್‌ಗಳು)

9 – ಸೂರ್ಯಕುಮಾರ್ ಯಾದವ್ (49 ಇನ್ನಿಂಗ್ಸ್‌ಗಳು)

2 – ಶುಭಮನ್ ಗಿಲ್ (5 ಇನ್ನಿಂಗ್ಸ್‌ಗಳು)

1 – ಕೆಎಲ್ ರಾಹುಲ್ (1 ಇನ್ನಿಂಗ್ಸ್)

1 – ಸುರೇಶ್ ರೈನಾ (3 ಇನ್ನಿಂಗ್ಸ್)

1 – ಶ್ರೇಯಸ್ ಅಯ್ಯರ್ (3 ಇನ್ನಿಂಗ್ಸ್)

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com