IPL 2026: ದಿನಕ್ಕೆ ಎಷ್ಟು ಲೀಟರ್ ಹಾಲು ಕುಡಿತೀಯಾ? Ravi Shastri ಪ್ರಶ್ನೆಗೆ ವೈಭವ್ ಸೂರ್ಯವಂಶಿ ಕೊಟ್ಟ ಉತ್ತರಕ್ಕೆ ನಗೆಗಡಲಲ್ಲಿ ತೇಲಿದ ಪ್ರೇಕ್ಷಕರು!

ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ನಾಯಕ ಶುಭ್ ಮನ್ ಗಿಲ್ ಹಾಗೂ ಸಾಯಿ ಸುದರ್ಶನ್ ಈ ಮೊತ್ತವನ್ನು ಮೀರಲು ವಿಫಲವಾದ ಕಾರಣ, ಸೂರ್ಯವಂಶಿ ಆರೆಂಜ್ ಕ್ಯಾಪ್‌ನ್ನು ತಮ್ಮದಾಗಿಸಿಕೊಂಡರು.
Ravi Shastri Asks Vaibhav Sooryavanshi
ವೈಭವ್ ಸೂರ್ಯವಂಶಿ ಮತ್ತು ರವಿಶಾಸ್ತ್ರಿ
Updated on

ಅಹ್ಮದಾಬಾದ್: ರಾಜಸ್ಥಾನ್ ರಾಯಲ್ಸ್‌ನ ಯುವ ಬ್ಯಾಟಿಂಗ್ ಸೆನ್ಸೇಷವ್ ವೈಭವ್ ಸೂರ್ಯವಂಶಿ (Vaibhav Sooryavanshi) ಭಾನುವಾರ ಅಹ್ಮದಾಬಾದ್‌ನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ನಡುವಿನ ಐಪಿಎಲ್ 2026ರ ಫೈನಲ್ ಪಂದ್ಯದ ಬಳಿಕ ಮತ್ತೊಮ್ಮೆ ಎಲ್ಲರ ಗಮನ ಸೆಳೆದರು.

ಈ ಐಪಿಎಲ್ ಸೀಸನ್ ನಲ್ಲಿ ಬರೊಬ್ಬರಿ 776 ರನ್‌ಗಳನ್ನು ಸಿಡಿಸಿದ 15 ವರ್ಷದ ವೈಭವ್, ಒಂದಲ್ಲ, ಎರಡಲ್ಲ, ಬರೋಬ್ಬರಿ ಐದು ವೈಯಕ್ತಿಕ ಪ್ರಶಸ್ತಿಗಳನ್ನು ಗೆದ್ದು ಬ್ಯಾಟ್‌ನೊಂದಿಗೆ ತಮ್ಮ ಪ್ರಾಬಲ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಸೂರ್ಯವಂಶಿ ಅವರು 'ಮೊಸ್ಟ್ ವ್ಯಾಲ್ಯುಯಬಲ್ ಪ್ಲೇಯರ್ (MVP), ಆರೆಂಜ್ ಕ್ಯಾಪ್, ಸೂಪರ್ ಸ್ಟ್ರೈಕರ್ ಆಫ್ ದಿ ಸೀಸನ್, ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್ ಹಾಗೂ ಮೋಸ್ಟ್ ಸಿಕ್ಸಸ್' ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

ಪ್ರಶಸ್ತಿಗಳನ್ನು ಸ್ವೀಕರಿಸಿದ ಬಳಿಕ, ಭಾರತದ ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಅವರು ಸೂರ್ಯವಂಶಿಯನ್ನು ವೇದಿಕೆಗೆ ಆಹ್ವಾನಿಸಿ ಸ್ವಲ್ಪ ಹೊತ್ತು ಮಾತುಕತೆ ನಡೆಸಿದರು. ಈ ವೇಳೆ ಈ ಇಬ್ಬರು ನಡೆಸಿದ ಸಂಭಾಷಣೆ ಪ್ರೇಕ್ಷಕರಲ್ಲಿ ನಗು ತರಿಸಿತು.

Ravi Shastri Asks Vaibhav Sooryavanshi
IPL 2026: 'ಇಂದಿನ ಕ್ರಿಕೆಟ್‌ನ ಬೇಡಿಕೆ ಹಾಗಾಗಿದೆ'; 15 ವರ್ಷದ ವೈಭವ್ ಸೂರ್ಯವಂಶಿ ಬಗ್ಗೆ Virat Kohli ಅಚ್ಚರಿ ಮಾತುಗಳು!

ಸೂರ್ಯವಂಶಿಯ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಗೆ ಮಾರುಹೋಗಿದ್ದ ರವಿ ಶಾಸ್ತ್ರಿ, ಕೇವಲ 15 ವರ್ಷದ ವಯಸ್ಸಿನಲ್ಲೇ ಅವರು ಚೆಂಡನ್ನು ಅಷ್ಟು ಅದ್ಭುತವಾಗಿ ಟೈಮ್ ಮಾಡುವ ಶಕ್ತಿ ಎಲ್ಲಿಂದ ಬರುತ್ತದೆ ಎಂದು ಕುತೂಹಲ ವ್ಯಕ್ತಪಡಿಸಿದರು. ಈ ವೇಳೆ ನೀನು ಪ್ರತಿದಿನ ಎಷ್ಟು ಹಾಲು ಕುಡಿಯುತ್ತೀಯ? ಎಂದು ಶಾಸ್ತ್ರಿ ಪ್ರಶ್ನಿಸಿದರು.

ಇದಕ್ಕೆ ನಗುತ್ತಲೇ ಉತ್ತರಿಸಿದ ವೈಭವ್, ನಾನು ಈಗ ಹಾಲು ಕುಡಿಯುವುದೇ ಇಲ್ಲ ಎಂದು ಹೇಳಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು.

ಇದೀಗ ವೈಭವ್ ಸೂರ್ಯವಂಶಿ ಐಪಿಎಲ್ ಇತಿಹಾಸದಲ್ಲೇ ಅತಿ ಕಿರಿಯ ವಯಸ್ಸಿನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. (ಕೇವಲ 15 ವರ್ಷ 65 ದಿನಗಳು) ಈ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ಅವರು ದಾಖಲೆ ನಿರ್ಮಿಸಿದ್ದಾರೆ. ಈ ಹಿಂದೆ ಈ ದಾಖಲೆ ಗುಜರಾತ್ ಟೈಟನ್ಸ್‌ನ ಸಾಯಿ ಸುದರ್ಶನ್ ಹೆಸರಿನಲ್ಲಿತ್ತು. ಸುದರ್ಶನ್ ಕಳೆದ ವರ್ಷ 23 ವರ್ಷ 231 ದಿನಗಳ ವಯಸ್ಸಿನಲ್ಲಿ ಆರೆಂಜ್ ಕ್ಯಾಪ್ ಗೆದ್ದಿದ್ದರು.

Ravi Shastri Asks Vaibhav Sooryavanshi
IPL 2026: ಬರೊಬ್ಬರಿ 5 ಪ್ರಶಸ್ತಿ, ಅದರಿಂದ Vaibhav Sooryavanshi ಗಳಿಸಿದ ಹಣ ಎಷ್ಟು ಕೋಟಿ ಗೊತ್ತಾ?

ಐಪಿಎಲ್ 2026ರಲ್ಲಿ ವೈಭವ್ 16 ಇನ್ನಿಂಗ್ಸ್‌ಗಳಲ್ಲಿ ಒಟ್ಟು 776 ರನ್‌ಗಳನ್ನು ಕಲೆಹಾಕಿದ್ದಾರೆ. ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ನಾಯಕ ಶುಭ್ ಮನ್ ಗಿಲ್ ಹಾಗೂ ಅವರ ಆರಂಭಿಕ ಜೊತೆಯಾಟಗಾರ ಸಾಯಿಸುದರ್ಶನ್ ಈ ಮೊತ್ತವನ್ನು ಮೀರಲು ವಿಫಲವಾದ ಕಾರಣ, ಸೂರ್ಯವಂಶಿ ಆರೆಂಜ್ ಕ್ಯಾಪ್‌ನ್ನು ತಮ್ಮದಾಗಿಸಿಕೊಂಡರು.

ಈ ಋತುವಿನಲ್ಲಿ ಸೂರ್ಯವಂಶಿಯ ಸಿಕ್ಸರ್ ಮಳೆ ಟೂರ್ನಿಯ ಪ್ರಮುಖ ಆಕರ್ಷಣೆಯಾಗಿ ಪರಿಣಮಿಸಿತು. ಅವರು ಇಡೀ ಋತುವಿನಲ್ಲಿ ಒಟ್ಟು 72 ಸಿಕ್ಸರ್‌ಗಳನ್ನು ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದರು. ಈ ಮೂಲಕ ಐಪಿಎಲ್‌ನಲ್ಲಿ ಒಂದೇ ಋತುವಿನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಈ ಹಿಂದೆ ಕ್ರಿಸ್ ಗೇಯ್ಲ್ 59 ಸಿಕ್ಸರ್‌ಗಳ ದಾಖಲೆಯನ್ನು ಹೊಂದಿದ್ದರು. ವೈಭವ್ ಆ ದಾಖಲೆಯನ್ನು ಧೂಳಿಪಟ ಮಾಡಿ, ಐಪಿಎಲ್‌ನಲ್ಲಿ ಪವರ್ ಹಿಟ್ಟಿಂಗ್‌ಗೆ ಹೊಸ ಮಾನದಂಡವನ್ನು ಸ್ಥಾಪಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com