IPL 2027: ಮುಂಬೈ ಇಂಡಿಯನ್ಸ್ ತಂಡದಿಂದ ಹಾರ್ದಿಕ್ ಪಾಂಡ್ಯ ಔಟ್, ಯಶಸ್ವಿ ಜೈಸ್ವಾಲ್ ಇನ್; ಸೂರ್ಯಕುಮಾರ್ ಯಾದವ್ ಭವಿಷ್ಯ ಅತಂತ್ರ

ಆಲ್ ರೌಂಡರ್ ಕಳೆದ ಮೂರು ವರ್ಷಗಳಿಂದ ತಂಡವನ್ನು ಮುನ್ನಡೆಸುತ್ತಿದ್ದಾರೆ ಮತ್ತು ಅಂದಿನಿಂದಲೂ ಮುಂಬೈ ತಂಡದ ಪ್ರದರ್ಶನ ಕಳಪೆಯಾಗಿದೆ.
Hardik pandya - Suryakumar yadav
ಹಾರ್ದಿಕ್ ಪಾಂಡ್ಯ - ಸೂರ್ಯಕುಮಾರ್ ಯಾದವ್Photo | AFP
Updated on

IPL 2026 ಮುಗಿದ ಕೆಲವೇ ವಾರಗಳ ನಂತರ, ಮುಂದಿನ ಆವೃತ್ತಿಗೆ ಫ್ರಾಂಚೈಸಿಗಳು ಈಗಾಗಲೇ ಸಿದ್ಧತೆ ಆರಂಭಿಸಿವೆ. ಕೇವಲ ಎರಡು ದಿನಗಳ ಹಿಂದೆ, ರಿಷಭ್ ಪಂತ್ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಕ್ಕೆ ತೆರಳುತ್ತಿದ್ದಾರೆ ಮತ್ತು ಕುಲದೀಪ್ ಯಾದವ್ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡಕ್ಕೆ ಬರುತ್ತಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. RevSportz ವರದಿ ಪ್ರಕಾರ, ಮುಂಬೈ ಇಂಡಿಯನ್ಸ್ (MI) ತಂಡ ಕೆಲವು ಬದಲಾವಣೆಗಳನ್ನು ಮಾಡಲು ಮುಂದಾಗಿದ್ದು, ನಾಯಕ ಹಾರ್ದಿಕ್ ಪಾಂಡ್ಯ ಹೊರಬಿದ್ದಿದ್ದಾರೆ ಎನ್ನಲಾಗಿದೆ.

ಆಲ್ ರೌಂಡರ್ ಕಳೆದ ಮೂರು ವರ್ಷಗಳಿಂದ ತಂಡವನ್ನು ಮುನ್ನಡೆಸುತ್ತಿದ್ದಾರೆ ಮತ್ತು ಅಂದಿನಿಂದಲೂ ಮುಂಬೈ ತಂಡದ ಪ್ರದರ್ಶನ ಕಳಪೆಯಾಗಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡವು ಸದ್ಯ ರಾಜಸ್ಥಾನ್ ರಾಯಲ್ಸ್ ಜೊತೆ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಹಾರ್ದಿಕ್ ಬದಲಿಗೆ ಮುಂಬೈಗೆ ರಾಜಸ್ಥಾನ್ ರಾಯಲ್ಸ್ ಓಪನರ್ ಯಶಸ್ವಿ ಜೈಸ್ವಾಲ್ ಬರಲಿದ್ದಾರೆ ಎನ್ನಲಾಗಿದೆ.

ರೋಹಿತ್ ಶರ್ಮಾ ಉತ್ತಮ ಫಾರ್ಮ್‌ನಲ್ಲಿಲ್ಲದ ಕಾರಣ ಮುಂಬೈ ತಂಡಕ್ಕೆ ಆರಂಭಿಕ ಬ್ಯಾಟ್ಸ್‌ಮನ್ ಕೊರತೆ ಇದೆ. ಹೀಗಾಗಿ, ಜೈಸ್ವಾಲ್ ತಂಡಕ್ಕೆ ಉತ್ತಮ ಆಯ್ಕೆಯಂತೆ ಕಾಣುತ್ತಿದ್ದಾರೆ. ಆದರೆ, ಇನ್ನೂ ಯಾವುದನ್ನೂ ಅಂತಿಮಗೊಳಿಸಿಲ್ಲ. ಮುಂಬೈ ತಂಡದಿಂದ ಹೊರಹಾಕಬಹುದಾದ ಮತ್ತೊಬ್ಬ ವ್ಯಕ್ತಿ ಸೂರ್ಯಕುಮಾರ್ ಯಾದವ್. ಅವರು ಬಹುಶಃ ತಮ್ಮ ವೃತ್ತಿಜೀವನದಲ್ಲಿಯೇ ಅತ್ಯಂತ ಕಳಪೆ ಕುಸಿತ ಎದುರಿಸುತ್ತಿದ್ದಾರೆ.

ಮುಂಬೈನಿಂದ ಸೂರ್ಯಕುಮಾರ್ ಯಾದವ್ ಹೊರಗೆ

ಭಾರತ ತಂಡವನ್ನು 2026ರ ಟಿ20 ವಿಶ್ವಕಪ್ ಗೆಲುವಿನತ್ತ ಮುನ್ನಡೆಸಿದ ನಂತರ, ಅವರನ್ನು ನಾಯಕತ್ವದಿಂದ ತೆಗೆದುಹಾಕಲಾಗಿದೆ ಮತ್ತು ಈಗ ಟಿ20ಐ ತಂಡದ ಭಾಗವೂ ಆಗಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ, ಐಪಿಎಲ್ 2027ರಲ್ಲಿ ಅವರು ಮುಂಬೈ ಪರ ಆಡುವುದು ಅನುಮಾನ ಎನ್ನಲಾಗಿದೆ. ಅನುಭವಿ ಆಟಗಾರ 30 ವರ್ಷದವರಾಗಿದ್ದು, ಅವರ ರನ್ ಗಳಿಸುವ ಸಾಮರ್ಥ್ಯಕ್ಕೆ ಹೊಡೆತ ಬಿದ್ದಿದೆ. ಈ ವರ್ಷ ಅವರು 13 ಪಂದ್ಯಗಳಲ್ಲಿ ಕೇವಲ 270 ರನ್ ಗಳಿಸಿದ್ದಾರೆ. ಅವರ ಸರಾಸರಿ ಕೇವಲ 20 ಆಗಿತ್ತು.

ಮುಂಬೈ ಇಂಡಿಯನ್ಸ್ ಇದೀಗ ತಿಲಕ್ ವರ್ಮಾ ಅವರನ್ನು ನಾಯಕನಾಗಿ ಮಾಡಬಹುದು. ರೋಹಿತ್ ಶರ್ಮಾ ಇನ್ನೊಂದು ಸೀಸನ್ ಆಡಿದರೂ, ಅದು ಅವರ ಕೊನೆಯ ಸೀಸನ್ ಆಗಿರಬಹುದು. ಈ ಎಲ್ಲ ನಿರ್ಧಾರಗಳನ್ನು ಮುಂದಿನ ವಾರ ನಡೆಯಲಿರುವ ಮುಂಬೈ ಇಂಡಿಯನ್ಸ್ ಪರಿಶೀಲನಾ ಸಭೆಯಲ್ಲಿ ತೆಗೆದುಕೊಳ್ಳಲಾಗುವುದು ಮತ್ತು ಅದು ಮುಗಿದ ನಂತರ, ಈ ಪ್ರತಿಯೊಂದು ವಿಷಯಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ಇರುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com