ಐಪಿಎಲ್ ಮೆಗಾ ಟ್ರೇಡಿಂಗ್; ರಿಷಭ್ ಪಂತ್‌ಗೆ ಎಚ್ಚರಿಕೆ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ, ಕುಲದೀಪ್ ಯಾದವ್‌ಗೆ ಭಾವನಾತ್ಮಕ ವಿದಾಯ!

ಈ ಕ್ರಮಕ್ಕೆ ಪ್ರತಿಕ್ರಿಯಿಸಿದ ಪಾರ್ಥ್ ಜಿಂದಾಲ್, ಫ್ರಾಂಚೈಸಿಗೆ ಕುಲದೀಪ್ ನೀಡಿದ ಕೊಡುಗೆಯನ್ನು ಗೌರವಿಸಿ, ಸ್ಪಿನ್ನರ್ ತಮ್ಮ ಹೊಸ ತಂಡದೊಂದಿಗೆ ಉತ್ತಮ ಪ್ರದರ್ಶನ ನೀಡುವುದನ್ನು ಮುಂದುವರಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Rishabh Pant and DC co-owner Parth Jindal
ರಿಷಭ್ ಪಂತ್ - ಪಾರ್ಥ್ ಜಿಂದಾಲ್
Updated on

2027ರ ಆವೃತ್ತಿಗೆ ಮುನ್ನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಟ್ರೇಡಿಂಗ್ ದೃಢವಾದ ನಂತರ ಡೆಲ್ಲಿ ಕ್ಯಾಪಿಟಲ್ಸ್ ಸಹ-ಮಾಲೀಕ ಪಾರ್ಥ್ ಜಿಂದಾಲ್ ಅವರು ಕುಲದೀಪ್ ಯಾದವ್ ಅವರಿಗೆ ಭಾವನಾತ್ಮಕ ವಿದಾಯ ಹೇಳಿದರು. ವಿಕೆಟ್ ಕೀಪರ್-ಬ್ಯಾಟರ್ ಪಂತ್ ಅವರು ತಮ್ಮ ಐಪಿಎಲ್ ವೃತ್ತಿಜೀವನದ ಮೊದಲ ಒಂಬತ್ತು ಸೀಸನ್‌ಗಳನ್ನು ಕಳೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸ್‌ಗೆ ಮರಳಲಿದ್ದಾರೆ. ಆದರೆ, ಸ್ಪಿನ್ನರ್ ಕುಲದೀಪ್ ಯಾದವ್ ಡಿಸಿ ಜೊತೆ ಐದು ಯಶಸ್ವಿ ಆವೃತ್ತಿಗಳ ನಂತರ ಲಕ್ನೋ ಸೂಪರ್ ಜೈಂಟ್ಸ್‌ಗೆ ಹೋಗುತ್ತಿದ್ದಾರೆ.

ಈ ಕ್ರಮಕ್ಕೆ ಪ್ರತಿಕ್ರಿಯಿಸಿದ ಪಾರ್ಥ್ ಜಿಂದಾಲ್, ಫ್ರಾಂಚೈಸಿಗೆ ಕುಲದೀಪ್ ನೀಡಿದ ಕೊಡುಗೆಯನ್ನು ಗೌರವಿಸಿ, ಸ್ಪಿನ್ನರ್ ತಮ್ಮ ಹೊಸ ತಂಡದೊಂದಿಗೆ ಉತ್ತಮ ಪ್ರದರ್ಶನ ನೀಡುವುದನ್ನು ಮುಂದುವರಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'ಪ್ರಿಯ ಕುಲದೀಪ್, ಕಳೆದ ಐದು ವರ್ಷಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ನೀವು ಸಲ್ಲಿಸಿದ ಸೇವೆಗೆ ಧನ್ಯವಾದಗಳು. ನೀವು ನಮ್ಮ ತಂಡದ ಪ್ರಮುಖ ಭಾಗವಾಗಿದ್ದೀರಿ ಮತ್ತು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೀವಿ. ಎಲ್ಲವೂ ಚೆನ್ನಾಗಿ ನಡೆಯಲಿ, ನೀವು ಚಾಂಪಿಯನ್ ಆಟಗಾರ ಮತ್ತು ನೀವು ನಿಮ್ಮ ತವರು ನೆಲದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತೀರಿ ಎಂದು ನನಗೆ ಖಚಿತವಾಗಿದೆ' ಎಂದು ಜಿಂದಾಲ್ ಸಾಮಾಜಿಕ ಮಾಧ್ಯಮದಲ್ಲಿ ಬರೆದಿದ್ದಾರೆ.

65 ಪಂದ್ಯಗಳಲ್ಲಿ 72 ವಿಕೆಟ್‌ಗಳನ್ನು ಕಬಳಿಸಿ ತಂಡದ ಅತ್ಯಂತ ವಿಶ್ವಾಸಾರ್ಹ ಪಂದ್ಯ ವಿಜೇತರಲ್ಲಿ ಒಬ್ಬರಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡ ನಂತರ ಕುಲದೀಪ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆದಿದ್ದಾರೆ.

ಪಾರ್ಥ್ ಅವರು ಪಂತ್ ಅವರನ್ನು ಕೂಡ ಡೆಲ್ಲಿ ಕ್ಯಾಪಿಟಲ್ಸ್ ಸೆಟಪ್‌ಗೆ ಸ್ವಾಗತಿಸಿದ್ದಾರೆ ಮತ್ತು ವಿಕೆಟ್ ಕೀಪರ್-ಬ್ಯಾಟರ್ ಪರಿಚಿತ ವಾತಾವರಣದಲ್ಲಿ ತಮ್ಮ ಅತ್ಯುತ್ತಮ ಫಾರ್ಮ್ ಅನ್ನು ಕಂಡುಕೊಳ್ಳುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದರು.

Rishabh Pant and DC co-owner Parth Jindal
RCB ವಿರುದ್ಧ ಅವಮಾನಕರ ಸೋಲು; ದೊಡ್ಡ ಸಂದೇಶ ರವಾನಿಸಿದ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ ಪಾರ್ಥ್ ಜಿಂದಾಲ್!

'ರಿಷಭ್ - ಕಿರಣ್ ಮತ್ತು ನಾನು ಇಬ್ಬರೂ ನಿಮ್ಮನ್ನು ಡಿಸಿಗೆ ಮರಳಿ ಪಡೆದಿದ್ದಕ್ಕೆ ಸಂತೋಷಪಡುತ್ತೇವೆ. ದೆಹಲಿಯಲ್ಲಿ ನಿಮ್ಮ ಅತ್ಯುತ್ತಮ ಫಾರ್ಮ್ ಅನ್ನು ನೀವು ಕಂಡುಕೊಳ್ಳಬಹುದು ಎಂದು ಭಾವಿಸುತ್ತೇನೆ' ಎಂದು ಅವರು ಹೇಳಿದರು.

ವಿಕೆಟ್ ಕೀಪರ್-ಬ್ಯಾಟರ್ 2016 ರಿಂದ 2024 ರವರೆಗೆ ಡೆಲ್ಲಿ ಕ್ಯಾಪಿಟಲ್ಸ್ ಅನ್ನು ಪ್ರತಿನಿಧಿಸಿದರು. ಫ್ರಾಂಚೈಸಿಗಾಗಿ ದಾಖಲೆಯ 111 ಪಂದ್ಯಗಳನ್ನು ಆಡಿದರು ಮತ್ತು ನಾಲ್ಕು ಆವೃತ್ತಿಗಳಲ್ಲಿ 43 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದರು.

ಪಂತ್ ಐಪಿಎಲ್ 2025ಕ್ಕಿಂತ ಮೊದಲು ಲಕ್ನೋ ಸೂಪರ್ ಜೈಂಟ್ಸ್‌ಗೆ ದಾಖಲೆಯ ₹27 ಕೋಟಿ ಶುಲ್ಕಕ್ಕೆ ತೆರಳಿದ್ದರು. ಪಂತ್ ನಾಯಕತ್ವದಲ್ಲಿ ಎಲ್‌ಎಸ್‌ಜಿ ಐಪಿಎಲ್ 2025 ರಲ್ಲಿ ಅಂಕಪಟ್ಟಿಯಲ್ಲಿ ಏಳನೇ ಸ್ಥಾನ ಮತ್ತು ಐಪಿಎಲ್ 2026ರಲ್ಲಿ ಟೇಬಲ್‌ನ ಕೊನೆಯ ಸ್ಥಾನಕ್ಕೆ ಇಳಿಯಿತು.

ಪಂತ್ ₹15 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮತ್ತೆ ಸೇರಿಕೊಳ್ಳಲಿದ್ದಾರೆ ಎಂದು ಐಪಿಎಲ್ ದೃಢಪಡಿಸಿದೆ. ಆದರೆ, ಕುಲದೀಪ್ ಈಗಿರುವ ₹13.5 ಕೋಟಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಸ್ಥಳಾಂತರಗೊಳ್ಳಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com