ಮಹಿಳಾ ಟಿ-20 ವಿಶ್ವಕಪ್ ನಿಂದ ಭಾರತ ತಂಡ ನಿರ್ಗಮನ: ಹರ್ಮನ್‌ಪ್ರೀತ್ ಕೌರ್ ಬಿಗ್ ಸ್ಟೇಟ್​ಮೆಂಟ್!

ಆಸ್ಟ್ರೇಲಿಯಾದ ಬೌಲರ್‌ಗಳು ಯೋಜನಾಬದ್ಧ ಅತ್ಯುತ್ತಮ ಬೌಲಿಂಗ್ ಮಾಡಿದರು. ನಾವು ಹೆಚ್ಚು ವಿಕೆಟ್‌ಗಳನ್ನು ಕಳೆದುಕೊಳ್ಳಲಿಲ್ಲ, ಆದರೆ ಅವರನ್ನುಒತ್ತಡಕ್ಕೆ ಒಳಪಡಿಸುವಷ್ಟು ಸ್ಕೋರ್ ಮಾಡುವಲ್ಲಿ ಸಾಧ್ಯವಾಗಲಿಲ್ಲ ಎಂದು ಹರ್ಮನ್ ಪ್ರೀತ್ ಕೌರ್ ಹೇಳಿದರು.
Harmanpreet Kaur
ಹರ್ಮನ್‌ಪ್ರೀತ್ ಕೌರ್
Updated on

ಲಂಡನ್: ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯಿಂದ ಭಾರತ ತಂಡ ನಿರ್ಗಮಿಸಿದೆ. ಲಾರ್ಡ್ಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಗ್ರೂಪ್-1ರ ಕೊನೆಯ ನಿರ್ಣಾಯಕ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನು ಆರು ವಿಕೆಟ್ ಗಳಿಂದ ಮಣಿಸಿ, ಸೆಮಿಫೈನಲ್ ಪ್ರವೇಶಿಸಿತು.

ಪಂದ್ಯದ ನಂತರ ಮಾತನಾಡಿದ ಹರ್ಮನ್‌ಪ್ರೀತ್, ನಿರೀಕ್ಷಿಸಿದ ಸ್ಕೋರ್ ತಲುಪುವಲ್ಲಿ ಭಾರತ ತಂಡ ವಿಫಲವಾಯಿತು ಎಂಬುದನ್ನು ಒಪ್ಪಿಕೊಂಡರು. ಪೈಪೋಟಿ ನೀಡಬಲ್ಲ ರನ್ ನೀಡಿದ್ದೇವೆ ಅಂದುಕೊಂಡಿದ್ದೆ. ಆದರೆ ನಮಗೆ ಇನ್ನೂ 10-15 ರನ್‌ಗಳ ಕೊರತೆಯಿದೆ ಎಂಬುದು ನಾನು ಬ್ಯಾಟಿಂಗ್ ಮಾಡುವಾಗ ಗೊತ್ತಾಯಿತು. ಅಂತಿಮ ಓವರ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳು ಉತ್ತಮವಾಗಿ ಆಡಿದರು. ಆದರೆ ಇನ್ನೂ ದೊಡ್ಡ ಇನ್ಸಿಂಗ್ಸ್ ಕಟ್ಟುವಲ್ಲಿ ಸಾಧ್ಯವಾಗಲಿಲ್ಲ ಎಂದರು.

ಆಸ್ಟ್ರೇಲಿಯಾದ ಬೌಲರ್‌ಗಳು ಯೋಜನಾಬದ್ಧ ಅತ್ಯುತ್ತಮ ಬೌಲಿಂಗ್ ಮಾಡಿದರು. ನಾವು ಹೆಚ್ಚು ವಿಕೆಟ್‌ಗಳನ್ನು ಕಳೆದುಕೊಳ್ಳಲಿಲ್ಲ, ಆದರೆ ಅವರನ್ನುಒತ್ತಡಕ್ಕೆ ಒಳಪಡಿಸುವಷ್ಟು ಸ್ಕೋರ್ ಮಾಡುವಲ್ಲಿ ಸಾಧ್ಯವಾಗಲಿಲ್ಲ. ಬಲಿಷ್ಠ ಎದುರಾಳಿಗಳ ವಿರುದ್ಧ ಅತ್ಯುತ್ತಮ ಆಟ ಆಡುವಲ್ಲಿ ವಿಫಲವಾದೇವು ಎಂದು ಅವರು ಹೇಳಿಕೊಂಡರು.

Harmanpreet Kaur
Women's T20 World Cup 2026: ಹರ್ಮನ್ ಪ್ರೀತ್ ಕೌರ್ ಐತಿಹಾಸಿಕ ಸಾಧನೆ; Mithali Raj ದಾಖಲೆ ಧ್ವಂಸ

ವಿಶ್ವದ ಅಗ್ರ ತಂಡಗಳನ್ನು ಎದುರಿಸುವಾಗ ಅತ್ಯುತ್ತಮ ಆಟ ಆಡಲು ನಮ್ಮಿಂದ ಸಾಧ್ಯವಾಗಲಿಲ್ಲ. ಪಂದ್ಯಾವಳಿಯ ಆರಂಭದಲ್ಲಿ ಕ್ಯಾಚ್‌ಗಳನ್ನು ಕೈಬಿಟ್ಟಿದ್ದು ದುಬಾರಿಯಾಯಿತು. ನಮ್ಮಿಂದ ನಾವು ನಿರೀಕ್ಷಿಸುವ ಮಟ್ಟದಲ್ಲಿ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಮುಂಬರುವ ಪಂದ್ಯಗಳಲ್ಲಿ ಪ್ರದರ್ಶನದ ಮೇಲೆ ಪರಿಣಾಮ ಬೀರುವ ಪುನರಾವರ್ತಿತ ಸಮಸ್ಯೆಗಳನ್ನು ತಂಡವು ಪರಿಹರಿಸಿಕೊಳ್ಳಬೇಕು ಎಂದರು.

"ಒಂದು ತಂಡವಾಗಿ ಹಲವಾರು ಕ್ಷೇತ್ರಗಳಲ್ಲಿ ಸುಧಾರಿಸಬೇಕಾಗಿದೆ. ಬಲಿಷ್ಠ ಎದುರಾಳಿಗಳ ವಿರುದ್ಧ ನಮಗೆ ಉತ್ತಮ ಯೋಜನೆಗಳು ಬೇಕಾಗುತ್ತವೆ. ಆಗಾಗ್ಗೆ ನಾವು ಗೆಲುವಿನ ಹತ್ತಿರದಲ್ಲಿದ್ದರೂ ಸೋಲುತ್ತಿದ್ದೇವೆ. ಅಗತ್ಯ ರನ್ ಗಳಿಸಲು ಹೆಣಗಾಡುತ್ತಿದ್ದೇವೆ. ಮುಂದಿನ ಪಂದ್ಯಗಳಲ್ಲಿ ಇವೆಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com