'ಒಬ್ಬ ವ್ಯಕ್ತಿಗೆ ಸಲ್ಲುವುದಿಲ್ಲ': ವೆಸ್ಟ್ ಇಂಡೀಸ್ ವಿರುದ್ಧ ಸಂಜು ಸ್ಯಾಮ್ಸನ್ ಅವರ ಇನಿಂಗ್ಸ್‌ ಬಗ್ಗೆ ಕಪಿಲ್ ದೇವ್ ಅಚ್ಚರಿಯ ಹೇಳಿಕೆ

ಮಾರ್ಚ್ 5 ರಂದು ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೆಣಸಲಿದೆ.
"It's for the team": Kapil Dev on Sanju Samson's match-winning knock vs West Indies in T20 WC
ಕಪಿಲ್ ದೇವ್
Updated on

ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಟಿ20 ವಿಶ್ವಕಪ್ 2026 ಸೂಪರ್ 8 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಮೆನ್ ಇನ್ ಬ್ಲೂ ತಂಡದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಅದ್ಭುತ ಅಜೇಯ ಪ್ರದರ್ಶನ ನೀಡಿದ ನಂತರ, ಭಾರತದ ಮಾಜಿ ಕ್ರಿಕೆಟಿಗ ಮತ್ತು 1983ರ ಏಕದಿನ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್, ತಂಡವಾಗಿ ಸಾಮೂಹಿಕ ಪ್ರದರ್ಶನದ ಮಹತ್ವವನ್ನು ಒತ್ತಿ ಹೇಳಿದರು. ಸ್ಯಾಮ್ಸನ್ ಅವರು 50 ಎಸೆತಗಳಲ್ಲಿ 12 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ಸಹಾಯದಿಂದ 97 ರನ್ ಗಳಿಸಿದರು. ಈ ಮೂಲಕ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧ ಐದು ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸೆಮಿಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿತು.

ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ತಂಡವು ರೋಸ್ಟನ್ ಚೇಸ್ (40), ಹೋಪ್ (32), ಶಿಮ್ರಾನ್ ಹೆಟ್ಮೇಯರ್ (27) ಹಾಗೂ ಜೇಸನ್ ಹೋಲ್ಡರ್ (37*) ಮತ್ತು ರೋವ್‌ಮನ್ ಪೊವೆಲ್ (34*) ನಡುವಿನ ಅಜೇಯ 76 ರನ್‌ಗಳ ಜೊತೆಯಾಟದ ನೆರವಿನಿಂದ 195/4 ಗಳಿಸಿತು. ಭಾರತದ ಬೌಲರ್‌ಗಳನ್ನು ಜಸ್ಪ್ರೀತ್ ಬುಮ್ರಾ ಮುನ್ನಡೆಸಿದರು. ಅವರು 36 ರನ್ ನೀಡಿ ಎರಡು ಪ್ರಮುಖ ವಿಕೆಟ್ ಕಬಳಿಸಿದರು.

ಇದಕ್ಕೆ ಉತ್ತರವಾಗಿ ಭಾರತ ಆರಂಭಿಕ ಹಿನ್ನಡೆ ಅನುಭವಿಸಿದರೂ, ಸಂಜು ಸ್ಯಾಮ್ಸನ್ ಚೇಸಿಂಗ್‌ನಲ್ಲಿ ಪ್ರಮುಖ ಪಾತ್ರ ವಹಿಸಿದರು. ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಅವರೊಂದಿಗೆ ನಿರ್ಣಾಯಕ ಜೊತೆಯಾಟವಾಡಿದರು. ಆಗ ಭಾರತವು ಐದು ವಿಕೆಟ್‌ಗಳ ಜಯ ಸಾಧಿಸಿತು.

"It's for the team": Kapil Dev on Sanju Samson's match-winning knock vs West Indies in T20 WC
'ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್‌ಗೆ ಅಭಿಷೇಕ್ ಶರ್ಮಾರನ್ನು ಕೈಬಿಡಲು ಸಿದ್ಧ; ಆದರೆ, ಒಂದೇ ಒಂದು ಷರತ್ತು ಇದೆ' ಎಂದ ರವಿ ಶಾಸ್ತ್ರಿ

ಭಾರತದ ಮೊದಲ ವೃತ್ತಿಪರ ಗಾಲ್ಫ್ ಲೀಗ್, ದಿ ಲೀಗ್ ಫೈನಲ್‌ಗೆ ಮುಂಚಿತವಾಗಿ ANI ಜೊತೆ ಮಾತನಾಡಿದ PGTI ಅಧ್ಯಕ್ಷ ಕಪಿಲ್ ದೇವ್ ಅವರನ್ನು, ಮೆನ್ ಇನ್ ಮರೂನ್ ವಿರುದ್ಧ ಸಂಜು ಸ್ಯಾಮ್ಸನ್ ಅವರ ಅತ್ಯುತ್ತಮ ಇನಿಂಗ್ಸ್ ಬಗ್ಗೆ ಕೇಳಲಾಯಿತು.

ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತದ ದಂತಕಥೆ ಕ್ರಿಕೆಟಿಗ, ಭಾರತ ತಂಡದ ಪ್ರದರ್ಶನವನ್ನು ಶ್ಲಾಘಿಸಿದರು ಮತ್ತು ವೈಯಕ್ತಿಕ ಪ್ರದರ್ಶನಕ್ಕಿಂತ ಹೆಚ್ಚಾಗಿ ತಂಡದ ಒಟ್ಟಾರೆ ಯಶಸ್ಸಿನತ್ತ ಗಮನಹರಿಸುವಂತೆ ಒತ್ತಾಯಿಸಿದರು.

'ಇದು ತಂಡಕ್ಕಾಗಿ. ತಂಡಕ್ಕೆ ಶುಭವಾಗಲಿ, ಒಬ್ಬ ವ್ಯಕ್ತಿಗೆ ಅಲ್ಲ. ಮತ್ತು ನಾನು ಭಾರತೀಯ ತಂಡಕ್ಕೆ ಶುಭ ಹಾರೈಸುತ್ತೇನೆ. ಈಗ ನಾವು ಚಾಂಪಿಯನ್‌ಶಿಪ್‌ಗೆ ಬಹಳ ಹತ್ತಿರದಲ್ಲಿದ್ದೇವೆ ಮತ್ತು ನಾನು ಅವರಿಗೆ ಶುಭ ಹಾರೈಸುತ್ತೇನೆ' ಎಂದು ಹೇಳಿದರು.

ಮಾರ್ಚ್ 5 ರಂದು ಗುರುವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸೆಣಸಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com