

ಮುಂಬೈ: ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಏಕದಿನ ಪಂದ್ಯದಲ್ಲಿ ಪಾಕ್ ಮಾಜಿ ನಾಯಕ ಸಲ್ಮಾನ್ ಅಲಿ ಅಘಾ ರನೌಟ್ ವಿವಾದ ಭಾರತದ ಮಾಜಿ ಕ್ರಿಕೆಟಿಗ ಮಹಮದ್ ಕೈಫ್ ಅವರನ್ನೂ ಕೆಣಕಿದ್ದು, 'ರನ್-ಔಟ್ ಹೆಸರಿನಲ್ಲಿ ನಂಬಿಕೆ ದ್ರೋಹ' ಎಂದು ಕಿಡಿಕಾರಿದ್ದಾರೆ.
ಹೌದು.. ಢಾಕಾದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನದ ಬ್ಯಾಟ್ಸ್‌ಮನ್ ಸಲ್ಮಾನ್ ಅಲಿ ಅಘಾ ಅತ್ಯಂತ ಅಪರೂಪದ ಮತ್ತು ಅಸಾಂಪ್ರದಾಯಿಕ ರೀತಿಯಲ್ಲಿ ಔಟ್ ಆಗಿದ್ದರು.
ಪಾಕಿಸ್ತಾನದ ಇನ್ನಿಂಗ್ಸ್‌ನ 39 ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದ್ದು, ಆಟದ ನಿಯಮಗಳು ಬೌಲಿಂಗ್ ತಂಡದ ಪರವಾಗಿ ನಿರ್ಧಾರ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಅವಕಾಶ ಮಾಡಿಕೊಟ್ಟಿದ್ದರೂ, ಇಡೀ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಖಂಡಿಸಲಾಗುತ್ತಿದೆ.
ಇದೇ ವಿಚಾರವಾಗಿ ಕಿಡಿಕಾರಿರುವ ಮಾಜಿ ಕ್ರಿಕೆಟಿಗ ಮಹಮದ್ ಕೈಫ್, 'ಬಾಂಗ್ಲಾದೇಶದ ನಾಯಕ ಮಾಡಿದ ಈ ರನ್ ಔಟ್ನ್ನು ಕ್ರಿಕೆಟ್ನ ನಿಯಮಾವಳಿ ಒಪ್ಪಬಹುದು ಆದರೆ, ಆದರೆ ಒಬ್ಬ ಕ್ರಿಕೆಟಿಗ ಖಂಡಿತ ಒಪ್ಪಲಾರ, ವಿಕೆಟ್ ಪಡೆಯುವ ಯಾವುದೇ ಹತಾಶೆಗಾಗಿ ಕ್ರೀಡಾ ಮನೋಧರ್ಮವನ್ನು ಮರೆಯುವುದು ಸರಿಯಲ್ಲ ಎಂದು ಕೈಫ್ ಬರೆದುಕೊಂಡಿದ್ದಾರೆ. ಈ ಘಟನೆ ವಿಶ್ವಕಪ್ ಫೈನಲ್ನಲ್ಲಿ ಸಂಭವಿಸಿದ್ದರೂ ನಾನು ಇದನ್ನು ಖಂಡಿತವಾಗಿ ಖಂಡಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಘಟನೆ ಬಗ್ಗೆ ಮಾತನಾಡುತ್ತಾ ಕೈಫ್, ಬಾಂಗ್ಲಾದೇಶದ ಯಾವುದೋ ಒಬ್ಬ ಹೊಸ ಹುಡಗ ಮಾಡಿದ್ದಾನೆ ಎಂದರೆ, ಪಾಪ ಆಟಕ್ಕೆ ಹೊಸಬ, ಹುಮ್ಮಸ್ಸಿನಲ್ಲಿ ಮಾಡಿದ್ದಾನೆ ಎನ್ನಬಹುದಿತ್ತು, ಆದರೆ ತಂಡದ ನಾಯಕನೇ ಈ ರೀತಿ ಮಾಡಿದನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಇದು ತಂಡದ ಮನೋಬಲವನ್ನು ವಿಚಲಿತಗೊಳಿಸುವ ಸಾಧ್ಯತೆಯಿರುವ ಅಂಶವಾಗಿದ್ದು, ನ್ಯಾಯಯುತ ಆಟವಿಲ್ಲದ ಕ್ರೀಡೆ ಕ್ರೀಡೆಯಲ್ಲ ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ.
Advertisement