BCCI ಹೊಸ ನಿರ್ಧಾರದಿಂದ ಜಸ್ಪ್ರೀತ್ ಬುಮ್ರಾಗೆ ₹2 ಕೋಟಿ ನಷ್ಟ: ಟೀಂ ಇಂಡಿಯಾದ ಸ್ಟಾರ್ ಬೌಲರ್‌ಗೆ ಪರಿಹಾರವೇನು?

ಕೊಹ್ಲಿ, ರೋಹಿತ್ ಮತ್ತು ಜಡೇಜಾ ಒಂದು ಅಥವಾ ಎರಡು ಸ್ವರೂಪಗಳಿಂದ ನಿವೃತ್ತರಾಗಿರುವುದರಿಂದ ಅವರಿಗೆ ಹಿಂಬಡ್ತಿ ನೀಡುವುದರಲ್ಲಿ ಅರ್ಥವಿದೆ. ಆದರೆ, ಬುಮ್ರಾ ಎಲ್ಲ ಸ್ವರೂಪಗಳಲ್ಲಿ ಆಡುತ್ತಿದ್ದಾರೆ.
Jasprit Bumrah
ಜಸ್ಪ್ರೀತ್ ಬುಮ್ರಾ
Updated on

ಫೆಬ್ರುವರಿಯಲ್ಲಿ ಬಿಸಿಸಿಐ, 2025-26ನೇ ಆವೃತ್ತಿಗಾಗಿ (ಅಕ್ಟೋಬರ್ 1, 2025 ರಿಂದ ಸೆಪ್ಟೆಂಬರ್ 30, 2026 ರವರೆಗೆ) ಟೀಂ ಇಂಡಿಯಾ ಹಿರಿಯ ಪುರುಷರು ಮತ್ತು ಹಿರಿಯ ಮಹಿಳೆಯರಿಗಾಗಿ ಹೊಸ ವಾರ್ಷಿಕ ಆಟಗಾರರ ಒಪ್ಪಂದಗಳನ್ನು ಬಿಡುಗಡೆ ಮಾಡಿತು. ಮೂವತ್ತು ಹಿರಿಯ ಪುರುಷ ಕ್ರಿಕೆಟಿಗರಿಗೆ ಸೆಂಟ್ರಲ್ ಒಪ್ಪಂದಗಳನ್ನು ನೀಡಲಾಯಿತು. ಇದರೊಂದಿಗೆ, ಬಿಸಿಸಿಐ ಮೊದಲಿದ್ದ ಎ+ ಗ್ರೇಡ್ ಅನ್ನು ರದ್ದುಗೊಳಿಸಿತು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಇತ್ತೀಚಿನ ನಿರ್ಧಾರದ ಪ್ರಕಾರ, ಟೆಸ್ಟ್ ಮತ್ತು ಏಕದಿನ ನಾಯಕ ಶುಭಮನ್ ಗಿಲ್, ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ ಅವರನ್ನು ಮಾತ್ರ ಉನ್ನತ ಶ್ರೇಣಿಯಾದ ಎ ಗ್ರೇಡ್‌ನಲ್ಲಿ ಇರಿಸಲಾಗಿದೆ.

2024-25ರ ಬಿಸಿಸಿಐ ಒಪ್ಪಂದಗಳ ಪ್ರಕಾರ, ಗ್ರೇಡ್ ಎ ಆಟಗಾರರಿಗೆ ವಾರ್ಷಿಕ ₹5 ಕೋಟಿ, ಗ್ರೇಡ್ ಬಿ ಆಟಗಾರರಿಗೆ ₹3 ಕೋಟಿ ಮತ್ತು ಗ್ರೇಡ್ ಸಿ ಆಟಗಾರರಿಗೆ ₹1 ಕೋಟಿ ನೀಡಲಾಗುತ್ತದೆ. ಇದಕ್ಕೂ ಮೊದಲು, ಗ್ರೇಡ್ ಎ+ ಆಟಗಾರರಿಗೆ (ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ) ₹7 ಕೋಟಿ ಪಡೆಯುತ್ತಿದ್ದರು. 2025-26ರ ಪಾವತಿ ರಚನೆಯು ಭಿನ್ನವಾಗಿರುವುದೇ ಅಥವಾ ಇಲ್ಲವೇ ಎಂಬುದನ್ನು ಬಿಸಿಸಿಐ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ.

ಕೊಹ್ಲಿ, ರೋಹಿತ್ ಮತ್ತು ಜಡೇಜಾ ಒಂದು ಅಥವಾ ಎರಡು ಸ್ವರೂಪಗಳಿಂದ ನಿವೃತ್ತರಾಗಿರುವುದರಿಂದ ಅವರಿಗೆ ಹಿಂಬಡ್ತಿ ನೀಡುವುದರಲ್ಲಿ ಅರ್ಥವಿದೆ. ಆದರೆ, ಬುಮ್ರಾ ಎಲ್ಲ ಸ್ವರೂಪಗಳಲ್ಲಿ ಆಡುತ್ತಿದ್ದಾರೆ ಮತ್ತು ಅವರ ಹಿಂಬಡ್ತಿಯಿಂದಾಗಿ ಅವರು ವಾರ್ಷಿಕವಾಗಿ ₹2 ಕೋಟಿ ಕಳೆದುಕೊಳ್ಳುತ್ತಾರೆ.

ಇದೀಗ, ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಬುಮ್ರಾಗೆ ಹೇಗೆ ಪರಿಹಾರ ನೀಡಬಹುದು ಎಂಬುದನ್ನು BCCI 'ಪರಿಶೀಲಿಸುವ' ಸಾಧ್ಯತೆಯಿದೆ.

Jasprit Bumrah
A+ ಗೆ ಕೊಕ್; ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಹಿಂಬಡ್ತಿ: BCCI ಆಟಗಾರರ ವಾರ್ಷಿಕ ಒಪ್ಪಂದ ಘೋಷಣೆ!

'ಬುಮ್ರಾ ಅವರಿಗೆ ಹೇಗೆ ಪರಿಹಾರ ನೀಡಬಹುದು ಎಂದು ಮಂಡಳಿ ಲೆಕ್ಕಾಚಾರ ಹಾಕುತ್ತಿದೆ. ಅವರ ಶುಲ್ಕವನ್ನು ₹7 ಕೋಟಿಯಿಂದ ₹5 ಕೋಟಿಗೆ ಇಳಿಸುವುದು ಅನ್ಯಾಯವಾಗುತ್ತದೆ ಎಂಬುದರಲ್ಲಿ ಅರ್ಥವಿದೆ. ಉತ್ತಮ ಪ್ರದರ್ಶನ ನೀಡುವ ಆಟಗಾರರಾಗಿದ್ದರೂ, ಕೆಲವು ಆಟಗಾರರನ್ನು ಕೆಳಮಟಕ್ಕೆ ಇಳಿಸಲಾಗಿದೆ. ಒಪ್ಪಂದಗಳ ಮೌಲ್ಯಮಾಪನದಲ್ಲಿ ಪರಿಷ್ಕರಣೆ ಆಗಬಹುದು' ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಗ್ರೇಡ್ ಸಿಯಲ್ಲಿ ಸ್ಥಾನ ಪಡೆದಿರುವ ಅಕ್ಷರ್ ಪಟೇಲ್ ಅವರ ಒಪ್ಪಂದವನ್ನು ಸಹ ಮರುಪರಿಶೀಲಿಸುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ. ಕೆಎಲ್ ರಾಹುಲ್, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ ಮತ್ತು ರಿಷಭ್ ಪಂತ್ ಅವರಂತಹ ಆಟಗಾರರನ್ನು ಸಹ ಗ್ರೇಡ್ ಎನಿಂದ ಗ್ರೇಡ್ ಬಿಗೆ ಇಳಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com