

ಕೋಲ್ಕತಾ: ಐಪಿಎಲ್ ಟೂರ್ನಿಯ ಇಂದಿನ ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ ಪಂದ್ಯದಲ್ಲಿ ಗುಜರಾತ್ ತಂಡದ ಸಾಯಿ ಸುದರ್ಶನ್ ಗಾಯದ ಸಮಸ್ಯೆಯ ನಡುವೆಯೂ ಅಪರೂಪದ ದಾಖಲೆ ನಿರ್ಮಿಸಿದ್ದಾರೆ.
ಕೋಲ್ಕತಾದ ಈಡೆನ್ ಗಾರ್ಡನ್ ಮೈದಾನದಲ್ಲಿ ನಡೆದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಬ್ಯಾಟರ್ ಸಾಯಿ ಸುದರ್ಶನ್ 28 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 6 ಬೌಂಡರಿ ಸಹಿತ ಅಜೇಯ 53 ರನ್ ಗಳಿಸಿದರು. ಅಂತೆಯೇ ಟಿ20 ಕ್ರಿಕೆಟ್ ನಲ್ಲಿ 3 ಸಾವಿರ ರನ್ ಪೂರೈಸಿದ ಆಟಗಾರ ಎನಿಸಿಕೊಂಡರು.
ಇದರೊಂದಿಗೆ ಸಾಯಿ ಸುದರ್ಶನ್ ಅಪರೂಪದ ದಾಖಲೆ ನಿರ್ಮಿಸಿದ್ದು, ವೇಗವಾಗಿ 3 ಸಾವಿರ ರನ್ ಗಳಿಸಿದ ಬ್ಯಾಟರ್ ಎಂಬ ಹೊಸ ದಾಖಲೆ ನಿರ್ಮಿಸಿ ವಿಶ್ವ ಕ್ರಿಕೆಟ್‌ನಲ್ಲಿ ತಮ್ಮ ಅದ್ಭುತ ಏರಿಕೆಯನ್ನು ಮುಂದುವರಿಸಿದರು.
ಕೇವಲ 78 ಇನ್ನಿಂಗ್ಸ್ ಸಾಯಿಸುದರ್ಶನ್ ಈ ಸಾಧನೆ ಮಾಡಿದ್ದು, ಈ ಮೂಲಕ 85 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದ Shaun Marsh ಅವರ ಹಿಂದಿನ ದಾಖಲೆಯನ್ನು ಮುರಿದರು.
ಅಂತೆಯೇ ಈ ಪಟ್ಟಿಯಲ್ಲಿ ಸಾಯಿ ಸುದರ್ಶನ್ ಅವರು D'Arcy Short, Devon Conway ಮತ್ತು Chris Gayle ಅವರಂತಹ ಆಟಗಾರರಿಗಿಂತಲೂ ಮುಂದಕ್ಕೆ ಸಾಗಿದರು.
Fewest innings to 3000 runs in T20s
78 - Sai Sudharsan*
85 - Shaun Marsh
86 - D’Arcy Short
86 - Devon Conway
87 - Chris Gayle
ಗಾಯದ ನಡುವೆಯೇ ಬ್ಯಾಟಿಂಗ್
ಇನ್ನು ಕೋಲ್ಕತಾ ವಿರುದ್ಧ ಬ್ಯಾಟಿಂಗ್ ಮಾಡುವಾಗ ಸಾಯಿಸುದರ್ಶನ್ ಮೊಣಕೈಗೆ ಬಲವಾದ ಪೆಟ್ಟಾಗಿತ್ತು. ಗಾಯದ ಭೀತಿ ಎದುರಾದ ಕಾರಣ ಅವರು ಸ್ವಲ್ಪ ಸಮಯ ನಿವೃತ್ತ ಗಾಯಾಳುವಾಗಿ ಮೈದಾನ ತೊರೆದಿದ್ದರು. ಆದರೆ ಬಳಿಕ ಮತ್ತೆ ಕ್ರೀಸ್‌ಗೆ ಮರಳಿ, ಕೇವಲ 28 ಎಸೆತಗಳಲ್ಲಿ ಅಜೇಯ 53 ರನ್ ಗಳಿಸಿ ಪಂದ್ಯ ಮುಗಿಸಿದರು.
ಗುಜರಾತ್ ಟೈಟನ್ಸ್ ಪರ ಒಂದು ಟೂರ್ನಿಯಲ್ಲಿ ಅತೀ ಹೆಚ್ಚು ಬಾರಿ 50+ ಸ್ಕೋರ್
ಅಂತೆಯೇ ಇಂದು 53 ರನ್ ಗಳಿಸಿದ ಸಾಯಿ ಸುದರ್ಶನ್ ಇಂದಿನ ಅರ್ಧಶತಕದೊಂದಿಗೆ ಟೂರ್ನಿಯಲ್ಲಿನ ತಮ್ಮ ಅರ್ಧಶತಕಗಳ ಸಂಖ್ಯೆಯನ್ನು 4ಕ್ಕೆ ಏರಿಕೆ ಮಾಡಿಕೊಂಡರು. ಅಂತೆಯೇ ಗುಜರಾತ್ ಪರ ಐಪಿಎಲ್ ಟೂರ್ನಿಯೊಂದರಲ್ಲಿ ಅತೀ ಹೆಚ್ಚು ಬಾರಿ ಅರ್ಧಶತಕ ಸಿಡಿಸಿದ ಆಟಗಾರ ಎಂಬ ಕೀರ್ತಿಗೂ ಭಾಜನರಾದರು. 2022ರಲ್ಲಿ ಹಾರ್ದಿಕ್ ಪಾಂಡ್ಯ 3 ಅರ್ಧಶತಕ ಗಳಿಸಿದ್ದರು.
Most successive 50-plus scores for GT
4* - Sai Sudharsan (2026)
3 - Hardik Pandya (2022)
3 - Sai Sudharsan (2024-25)
3 - Shubman Gill (2025)
3 - Shubman Gill (2026)
ಗಿಲ್ ದಾಖಲೆ ಸರಿಗಟ್ಟಿದ ಸಾಯಿ
ಇಂದು ಅರ್ಧಶತಕ ಸಿಡಿಸಿದ ಸಾಯಿ ಸುದರ್ಶನ್ ಅತೀ ಹೆಚ್ಚು ಬಾರಿ 50ಕ್ಕೂ ಅಧಿಕ ಸ್ಕೋರ್ ಗಳಿಸಿದ ಜಂಟಿ ಮೊದಲ ಆಟಗಾರ ಎಂಬ ಕೀರ್ತಿಗೂ ಭಾಜನರಾದರು. ಸಾಯಿ ಸುದರ್ಶನ್ ಮತ್ತು ಶುಭ್ ಮನ್ ಗಿಲ್ ತಲಾ 7 ಬಾರಿ 50ಕ್ಕೂ ಅಧಿಕ ಸ್ಕೋರ್ ಕಲೆಹಾಕಿದ್ದರು.
Most 50+ scores for GT in an IPL season
7 - Shubman Gill (2023)
7 - Sai Sudharsan (2025)
7* - Sai Sudharsan (2026)
6 - Shubman Gill (2025)
Advertisement