IPL 2026: ಕೊನೆಗೂ ಚೆಪಾಕ್ ಮೈದಾನದಲ್ಲಿ ಕಾಣಿಸಿಕೊಂಡ ಧೋನಿ! ಅಭಿಮಾನಿಗಳೊಂದಿಗೆ ಸೆಲ್ಫಿ, ವಿದಾಯನಾ?

ಧೋನಿ ಇನ್ನೂ ತಮ್ಮ ಭವಿಷ್ಯದ ಬಗ್ಗೆ ಯಾವುದೇ ಹೇಳಿಕೆ ನೀಡದಿದ್ದರೂ, ಐಪಿಎಲ್ 2026 ರ ಸೀಸನ್ ಅವರ ಕೊನೆಯದಾಗಬಹುದು ಎಂಬ ಊಹಾಪೋಹಗಳಿವೆ.
MS Dhoni
ಮಹೇಂದ್ರ ಸಿಂಗ್ ಧೋನಿ
Updated on

ಚೆನ್ನೈ: ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ವೇಳೆ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಂಡರು. ಚೆನ್ನೈ ಸೂಪರ್ ಕಿಂಗ್ಸ್‌ ಗೆ ಇದು ಕೊನೆಯ ತವರು ಪಂದ್ಯವಾಗಿತ್ತು.

ಸುರೈಶ್ ರೈನಾ ಜೊತೆಗೆ ಕಾಣಿಸಿಕೊಂಡ ಧೋನಿ, ಕ್ರೀಡಾಂಗಣದ ಸುತ್ತಲೂ ಒಂದು ಸುತ್ತು ಹಾಕಿ ಅಭಿಮಾನಿಗಳೊಂದಿಗೆ ಸೆಲ್ಫಿ ತೆಗೆದುಕೊಂಡರು. ಧೋನಿ ಅವರ ಐಪಿಎಲ್ ವೃತ್ತಿ ಜೀವನದ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಆದರೆ ಸೋಮವಾರ, ಧೋನಿ ಆಟಗಾರರೊಂದಿಗೆ ಮಾತುಕತೆ ನಡೆಸುವಾಗ ಶಾಂತವಾಗಿ ಕಾಣುತ್ತಿದ್ದರು. ಸನ್‌ರೈಸರ್ಸ್ ಹೈದರಾಬಾದ್ ಆಟಗಾರರು ಸಹ ಭಾರತದ ದಿಗ್ಗಜ ಆಟಗಾರನಿಗೆ ಗೌರವ ನೀಡಿದರು.

ಧೋನಿ ಇನ್ನೂ ತಮ್ಮ ಭವಿಷ್ಯದ ಬಗ್ಗೆ ಯಾವುದೇ ಹೇಳಿಕೆ ನೀಡದಿದ್ದರೂ, ಐಪಿಎಲ್ 2026 ರ ಸೀಸನ್ ಅವರ ಕೊನೆಯದಾಗಬಹುದು ಎಂಬ ಊಹಾಪೋಹಗಳಿವೆ.

ಸಂಜು ಸ್ಯಾಮ್ಸನ್ ವಿಕೆಟ್ ಕೀಪರ್ ಆಗಿರುವುದರಿಂದ ಮತ್ತು ಫ್ರಾಂಚೈಸಿ ಯುವ ಆಟಗಾರರ ಸುತ್ತ ಹೊಸ ತಂಡ ಕಟ್ಟಲು ಎದುರು ನೋಡುತ್ತಿರುವುದರಿಂದ, ಮುಂದಿನ ಐಪಿಎಲ್ ನಲ್ಲಿ ಧೋನಿ ಬಹುತೇಕ ಮರಳುವ ಸಾಧ್ಯತೆ ಇದ್ದಂತಿಲ್ಲ. ಸನ್‌ರೈಸರ್ಸ್ ವಿರುದ್ಧದ ಪಂದ್ಯದ ನಂತರ ಅವರು ನಡೆದುಕೊಂಡ ರೀತಿ ಇದೇ ಅವರ ಕೊನೆಯ ಪಂದ್ಯ ಎನಿಸುತ್ತಿದೆ.

ಸೋಮವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಇಶಾನ್ ಕಿಶನ್ ಐದು ವಿಕೆಟ್‌ಗಳ ಜಯ ಸಾಧಿಸಿದ ನಂತರ ಸನ್‌ರೈಸರ್ಸ್ ಹೈದರಾಬಾದ್ ಇಂಡಿಯನ್ ಪ್ರೀಮಿಯರ್ ಲೀಗ್ ಪ್ಲೇಆಫ್‌ಗೆ ಅರ್ಹತೆ ಪಡೆಯಿತು. ಹೈದರಾಬಾದ್‌ನ ಈ ಗೆಲುವಿನಿಂದಾಗಿ ಗುಜರಾತ್ ಟೈಟಾನ್ಸ್ ನಾಲ್ಕು ತಂಡಗಳ ಪ್ಲೇಆಫ್‌ನಲ್ಲಿ ಸ್ಥಾನ ಪಡೆದುಕೊಂಡಿತು.

MS Dhoni
IPL 2026: ಸನ್ ರೈಸರ್ಸ್ ವಿರುದ್ಧ ಗೆದ್ದ ಬಳಿಕ 'ವಿಸಿಲ್ ಪೋಡು' ಮೂಲಕ CSK ಅಭಿಮಾನಿಗಳನ್ನು ಕೆಣಕಿದ ಇಶಾನ್ ಕಿಶನ್! Video

ಹಾಲಿ ಚಾಂಪಿಯನ್ ಮತ್ತು ಲೀಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈಗಾಗಲೇ ಅರ್ಹತೆ ಗಳಿಸಿದೆ, ಅಂದರೆ ನಾಕೌಟ್‌ನಲ್ಲಿ ಕೇವಲ ಒಂದು ಸ್ಥಾನ ಮಾತ್ರ ಬಾಕಿ ಉಳಿದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com