ನಿಜಕ್ಕೂ ನಮ್ಮದು F…Good Team: ಲೈವ್​ನಲ್ಲೇ 'ಅಶ್ಲೀಲ ಪದ' ಬಳಸಿದ ರಿಷಭ್ ಪಂತ್, ವ್ಯಾಪಕ ಟೀಕೆ, Video!

2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್ ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ತಂಡದ ನಾಯಕ ರಿಷಭ್ ಪಂತ್‌ಗೆ ದುಃಸ್ವಪ್ನವಾಗಿದೆ ಎಂದು ಸಾಬೀತಾಗಿದೆ. ರಾಜಸ್ಥಾನ ರಾಯಲ್ಸ್ (RR) ವಿರುದ್ಧದ ಹೀನಾಯ ಸೋಲಿನ ನಂತರ, ಲಖನೌ ತಂಡವು ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದೆ.
ನಿಜಕ್ಕೂ ನಮ್ಮದು F…Good Team: ಲೈವ್​ನಲ್ಲೇ 'ಅಶ್ಲೀಲ ಪದ' ಬಳಸಿದ ರಿಷಭ್ ಪಂತ್, ವ್ಯಾಪಕ ಟೀಕೆ, Video!
Updated on

2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಸೀಸನ್ ಲಕ್ನೋ ಸೂಪರ್ ಜೈಂಟ್ಸ್ (LSG) ಮತ್ತು ತಂಡದ ನಾಯಕ ರಿಷಭ್ ಪಂತ್‌ಗೆ ದುಃಸ್ವಪ್ನವಾಗಿದೆ ಎಂದು ಸಾಬೀತಾಗಿದೆ. ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ (RR) ವಿರುದ್ಧದ ಹೀನಾಯ ಸೋಲಿನ ನಂತರ, ಲಖನೌ ತಂಡವು ಪ್ಲೇಆಫ್ ರೇಸ್‌ನಿಂದ ಹೊರಬಿದ್ದಿದ್ದು ಮಾತ್ರವಲ್ಲದೆ ಪಾಯಿಂಟ್‌ಗಳ ಪಟ್ಟಿಯಲ್ಲಿಯೂ ಕೆಳಮಟ್ಟಕ್ಕೆ ಕುಸಿದಿದೆ. ಇದು 13 ಪಂದ್ಯಗಳಲ್ಲಿ ಲಖನೌದ 9ನೇ ಸೋಲು. ಈ ಅವಮಾನಕರ ಸೋಲು ಮತ್ತು ಹೆಚ್ಚುತ್ತಿರುವ ಒತ್ತಡದ ನಡುವೆ, ನಾಯಕ ರಿಷಭ್ ಪಂತ್ ಆಕ್ರೋಶಗೊಂಡಿದ್ದು ಲೈವ್ ನಲ್ಲೇ ಅಶ್ಲೀಲ ಪದ ಬಳಸಿದ್ದು ಇದರ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ಪ್ರಶಸ್ತಿ ಪ್ರದಾನ ಸಮಯದಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ತಂಡದ ಅಂತಿಮ ಅಧಿಕೃತ ಪಂದ್ಯದ ಬಗ್ಗೆ ಪ್ರಶ್ನಿಸಿದಾಗ ಪಂತ್ ಕೋಪಕೊಂಡರು. ಒಂದು ತಂಡವಾಗಿ, ನಮ್ಮ ಪ್ರಸ್ತುತ ಪರಿಸ್ಥಿತಿ ಏನೇ ಇರಲಿ, ನಾವು ಹೆಮ್ಮೆಪಡುತ್ತೇವೆ. ನಿಮಗೆ ಗೊತ್ತಾ, ನಾವು ಹೊಂದಿರುವ ತಂಡದೊಂದಿಗೆ, ನಾವು ಇದನ್ನು ಗೆಲ್ಲಬಹುದು ಎಂದು ನಮಗೆ ತಿಳಿದಿದೆ. ಎಲ್ಲದರ ಹೊರತಾಗಿಯೂ, ನಾವು ತಂಡವಾಗಿ ಮತ್ತು ವೈಯಕ್ತಿಕವಾಗಿ ತುಂಬಾ ಆತ್ಮವಿಶ್ವಾಸ ಹೊಂದಿದ್ದೇವೆ. ವಿಷಯಗಳು ನಾವು ಅಂದುಕೊಂಡಂತೆ ನಡೆದಿಲ್ಲ ಆ ಕಾರಣಕ್ಕಾಗಿ ನಾವು ಕೆಟ್ಟ ತಂಡವಾಗುವುದಿಲ್ಲ. ನಾವು ನಿಜಕ್ಕೂ ನಮ್ದು ಉತ್ತಮ F…G ತಂಡ ಎಂದಿದ್ದಾರೆ.

ನಿಜಕ್ಕೂ ನಮ್ಮದು F…Good Team: ಲೈವ್​ನಲ್ಲೇ 'ಅಶ್ಲೀಲ ಪದ' ಬಳಸಿದ ರಿಷಭ್ ಪಂತ್, ವ್ಯಾಪಕ ಟೀಕೆ, Video!
CSK ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ 'ವಿಸಿಲ್ ಪೋಡು' ಸಂಭ್ರಮಾಚರಣೆ; ಇಶಾನ್ ಕಿಶನ್ ಬೆಂಬಲಕ್ಕೆ ನಿಂತ ಆರ್ ಅಶ್ವಿನ್!

ನೇರ ಪ್ರಸಾರದಲ್ಲೇ ರಿಷಭ್ ಪಂತ್ ಅಸಭ್ಯ ಪದ ಬಳಸಿದ್ದನ್ನು ಕೇಳಿ ನಿರೂಪಕ ಇಯಾನ್ ಬಿಷಪ್ ಕೆಲಕಾಲ ಸ್ತಬ್ಧರಾದರು. ತಕ್ಷಣವೇ ಅವರು ಸಂದರ್ಶನವನ್ನು ಅಲ್ಲಿಗೆ ಕೊನೆಗೊಳಿಸಿದರು. ರಿಷಭ್ ಪಂತ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಲಕ್ನೋ ಸೂಪರ್ ಜೈಂಟ್ಸ್​ ತಂಡದ ನಾಯಕನ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧ ಲಕ್ನೋ ತಂಡದ ಬ್ಯಾಟ್ಸ್‌ಮನ್‌ಗಳು 220 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿದರು, ಆದರೆ ಜೈಪುರದ ಸಮತಟ್ಟಾದ ಪಿಚ್‌ನಲ್ಲಿ ಬೌಲರ್‌ಗಳು ಸಂಪೂರ್ಣ ಮೊತ್ತವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಾಜಸ್ಥಾನದ ಯುವ ಆರಂಭಿಕರಾದ ವೈಭವ್ ಸೂರ್ಯವಂಶಿ (38 ಎಸೆತಗಳಲ್ಲಿ 93) ಮತ್ತು ಯಶಸ್ವಿ ಜೈಸ್ವಾಲ್ (23 ಎಸೆತಗಳಲ್ಲಿ 43) ಲಕ್ನೋ ಬೌಲರ್‌ಗಳನ್ನು ಛಿದ್ರಗೊಳಿಸಿದರು. ಒಟ್ಟಾಗಿ, ಅವರು ಕೇವಲ 39 ಎಸೆತಗಳಲ್ಲಿ 75 ರನ್ ಗಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com