'ಬಕ್ವಾಸ್, ಜಸ್ಪ್ರೀತ್ ಬುಮ್ರಾರನ್ನು ಇದೇ ರೀತಿ ನಡೆಸಿಕೊಳ್ಳುತ್ತೀರಾ?': ಇದು ಮೊಹಮ್ಮದ್ ಶಮಿಗೆ ತೋರುವ 'ಅಗೌರವ' ಎಂದ ಮಾಜಿ ಆಟಗಾರ

ಸದ್ಯ, ಮೊಹಮ್ಮದ್ ಶಮಿ ಇಂಡಿಯನ್ ಪ್ರೀಮಿಯರ್ ಲೀಗ್ 2026ರಲ್ಲಿ ಆಡುತ್ತಿದ್ದಾರೆ. ಆಡಿರುವ 12 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು 8.81ರ ಎಕಾನಮಿ ರೇಟ್ ಕಾಯ್ದುಕೊಂಡಿದ್ದಾರೆ.
Mohammed Shami
ಮೊಹಮ್ಮದ್ ಶಮಿ
Updated on

ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಶಮಿ ಕೊನೆಯ ಬಾರಿಗೆ 2025ರ ಮಾರ್ಚ್‌ನಲ್ಲಿ ಭಾರತದ ಪರ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. 2023ರ ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರೂ ಕೂಡ ಶಮಿಗೆ ಸ್ಥಿರ ಅವಕಾಶಗಳು ಸಿಗಲಿಲ್ಲ. ಗಾಯಗಳಿಂದಾಗಿ ಅವರು ತೊಂದರೆಗೆ ಒಳಗಾದರು. ಜೂನ್‌ನಲ್ಲಿ ನಡೆಯಲಿರುವ ಭಾರತ vs ಅಫ್ಘಾನಿಸ್ತಾನ ಸರಣಿಗೆ ಶಮಿ ಅವರನ್ನು ಆಯ್ಕೆ ಮಾಡಿಲ್ಲ. ವೇಗಿ ಮೊಹಮ್ಮದ್ ಶಮಿ ಅವರ ಪ್ರಸ್ತುತ ದೈಹಿಕ ಸ್ಥಿತಿ ದೀರ್ಘ ಸ್ವರೂಪಗಳಿಗೆ ಸೂಕ್ತವಲ್ಲ ಎಂದು ಪರಿಗಣಿಸಲಾಗಿರುವುದರಿಂದ ಅವರು ಅಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಮತ್ತು ಏಕದಿನ ತಂಡಗಳ ಆಯ್ಕೆಗೆ ಚರ್ಚೆಯ ಭಾಗವಾಗಿರಲಿಲ್ಲ ಎಂದು ಬಿಸಿಸಿಐ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಸ್ಪಷ್ಟಪಡಿಸಿದ್ದಾರೆ.

ಆಯ್ಕೆದಾರರಿಗೆ ಲಭ್ಯವಿರುವ ಮಾಹಿತಿ ಪ್ರಕಾರ, ಈ ಆವೃತ್ತಿಯಲ್ಲಿ ಶಮಿ ದೇಶೀಯ ಕ್ರಿಕೆಟ್‌ನಲ್ಲಿ ಭಾಗವಹಿಸುತ್ತಿದ್ದರೂ, ಸದ್ಯ ಟಿ20 ಕ್ರಿಕೆಟ್ ಅನ್ನು ಮನಸ್ಸಿನಲ್ಲಿಟ್ಟುಕೊಂಡು ಸಿದ್ಧರಾಗುತ್ತಿದ್ದಾರೆ. ಹೀಗಾಗಿಯೇ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ ಎಂದು ಅವರು ಹೇಳಿದರು.

ಅವರು ಕೊನೆಯ ಬಾರಿಗೆ ಮಾರ್ಚ್ 2025 ರಲ್ಲಿ ಭಾರತ ಪರ ಏಕದಿನ ಪಂದ್ಯ ಆಡಿದ್ದರು. ಸದ್ಯ, ಮೊಹಮ್ಮದ್ ಶಮಿ ಇಂಡಿಯನ್ ಪ್ರೀಮಿಯರ್ ಲೀಗ್ 2026ರಲ್ಲಿ ಆಡುತ್ತಿದ್ದಾರೆ. ಆಡಿರುವ 12 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ ಮತ್ತು 8.81ರ ಎಕಾನಮಿ ರೇಟ್ ಕಾಯ್ದುಕೊಂಡಿದ್ದಾರೆ.

ಶಮಿಯನ್ನು ಆಯ್ಕೆ ಮಾಡದಿರುವ ಹಿಂದಿನ ತರ್ಕ 'ಅಸಂಬದ್ಧ' ಎಂದು ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಹೇಳಿದ್ದಾರೆ.

Mohammed Shami
67 ವಿಕೆಟ್‌ ಪಡೆದಿದ್ದರೂ ಕಡೆಗಣನೆ: ಅಜಿತ್ ಅಗರ್ಕರ್‌ಗೆ 'ನಿವೃತ್ತಿ ಸಂದೇಶ' ಕಳುಹಿಸಿದ ಮೊಹಮ್ಮದ್ ಶಮಿ?

'ಯೇ ತೋ ಬಕ್ವಾಸ್ ಹೈ. ಇಡೀ ಆವೃತ್ತಿಯಲ್ಲಿ ಉತ್ತಮ ಪ್ರದರ್ಶನ ನೀಡಿದ, 40 ವಿಕೆಟ್‌ಗಳನ್ನು ಪಡೆದ ಆಟಗಾರ - ಅವರು ಇನ್ನೇನು ಮಾಡಲು ಸಾಧ್ಯ? ನಾವು ಮೊಹಮ್ಮದ್ ಶಮಿ ಬಗ್ಗೆ ಮಾತನಾಡುತ್ತಿದ್ದೇವೆ. ಬೇರೆ ಯಾವುದೇ ಆಟಗಾರನ ಬಗ್ಗೆ ಅಲ್ಲ. ನಮ್ಮನ್ನು ಹಲವು ಪಂದ್ಯಗಳಲ್ಲಿ ಗೆಲ್ಲಿಸಿದ ಆಟಗಾರ. ಅವರು ನಮ್ಮನ್ನು 2023ರ ವಿಶ್ವಕಪ್ ಫೈನಲ್‌ಗೆ ಕರೆದೊಯ್ದರು. ಇದು ಮೊಹಮ್ಮದ್ ಶಮಿಗೆ ತೋರುವ ಅಗೌರವ. ನೀವು ಅವರಿಗೆ ದೇಶೀಯ ಕ್ರಿಕೆಟ್ ಆಡಲು, ಫಿಟ್ನೆಸ್ ಸಾಬೀತುಪಡಿಸಲು ಹೇಳುತ್ತೀರಿ. ಈ ವ್ಯಕ್ತಿ ಪ್ರದರ್ಶನ ನೀಡಿದ ನಂತರ ಅವರು ಟಿ20ಗೆ ಮಾತ್ರ ಫಿಟ್ ಎಂದು ನೀವು ಹೇಳುತ್ತೀರಿ. ಅವರನ್ನು ಆಯ್ಕೆ ಮಾಡದಿರುವುದು ಕೇವಲ ಒಂದು ನೆಪ. ನೀವು ಅವರನ್ನು ಪರಿಗಣಿಸದಿದ್ದರೆ ಸ್ಪಷ್ಟವಾಗಿರಿ. 'ನಾವು ಅವರನ್ನು ಕಡೆಗಣಿಸಿದ್ದೇವೆ' ಎಂದು ಹೇಳಿ. ಅದು ನ್ಯಾಯಯುತ ಹೇಳಿಕೆಯಾಗಿರುತ್ತದೆ. ಅವರು ಬಂಗಾಳವನ್ನು ಏಕಾಂಗಿಯಾಗಿ ರಣಜಿ ಟ್ರೋಫಿ ಸೆಮಿಫೈನಲ್‌ಗೆ ಮುನ್ನಡೆಸಿದರು. ಬೌಲಿಂಗ್ ಉತ್ತಮವಾಗಿತ್ತು' ಎಂದು ಜಾಫರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

'ಉದಾಹರಣೆಗೆ, ಬುಮ್ರಾ ಗಾಯಗೊಂಡು ಮತ್ತೆ ಬಂದರೆ ಏನಾಗುತ್ತದೆ? ನೀವು ಅವರನ್ನು ಅದೇ ರೀತಿ ನಡೆಸಿಕೊಳ್ಳುತ್ತೀರಾ? ಮೊಹಮ್ಮದ್ ಶಮಿ ಕೂಡ ಅದೇ ಸ್ಥಾನದಲ್ಲಿದ್ದಾರೆ. ಯಾವುದೇ ಅಂತರರಾಷ್ಟ್ರೀಯ ಬ್ಯಾಟ್ಸ್‌ಮನ್‌ನನ್ನು ಕೇಳಿ, ಅವರು ಅವರನ್ನು ಉನ್ನತ ಸ್ಥಾನದಲ್ಲಿರಿಸುತ್ತಾರೆ. ಇದು ಅವರು ಭಾರತಕ್ಕೆ ಒದಗಿಸಿದ ಸೇವೆಗೆ ತೋರಿಸುವ ಅಗೌರವ' ಎಂದು ಜಾಫರ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com