IPL 2026: KKR ಗೆ ತವರಿನಲ್ಲಿ ಭಾರಿ ಸೋಲು; ಗೆದ್ದರೂ ಟೂರ್ನಿಗೆ ಡೆಲ್ಲಿ ವಿದಾಯ!

ಇನ್ನು ಡೆಲ್ಲಿ ತಂಡದ ವಿರುದ್ಧ ಸೋತ ಕೆಕೆಆರ್ ಸಹ ಟೂರ್ನಿಯಿಂದ ಹೊರಬಿದ್ದಿದೆ. ಕೆಕೆಆರ್ ತಂಡದ ವಿರುದ್ಧ ಡೆಲ್ಲಿ ತಂಡ 40 ರನ್ ಗಳ ಜಯ ಗಳಿಸಿತು.
Delhi- KKR team
ಡೆಲ್ಲಿ-ಕೆಕೆಆರ್ ತಂಡonline desk
Updated on

ಕೋಲ್ಕತ್ತಾ: ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ IPL ಟೂರ್ನಿಯ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಡೆಲ್ಲಿ ಕೋಲ್ಕತ್ತಾ ತಂಡವನ್ನು ಅದರ ತವರಿನಲ್ಲೇ ಮಣಿಸಿ ಟೂರ್ನಿಗೆ ವಿದಾಯ ಹೇಳಿದೆ.

ಇನ್ನು ಡೆಲ್ಲಿ ತಂಡದ ವಿರುದ್ಧ ಸೋತ ಕೆಕೆಆರ್ ಸಹ ಟೂರ್ನಿಯಿಂದ ಹೊರಬಿದ್ದಿದೆ. ಕೆಕೆಆರ್ ತಂಡದ ವಿರುದ್ಧ ಡೆಲ್ಲಿ ತಂಡ 40 ರನ್ ಗಳ ಜಯ ಗಳಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 203 ರನ್‌ ಕಲೆಹಾಕಿತು. ಸಾಧಾರಣ ಮೊತ್ತದ ಗುರಿ ಬೆನ್ನಟ್ಟಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 18.4 ಓವರ್‌ಗಳಲ್ಲಿ 163 ರನ್‌ ಗಳಿಸಿ ಸರ್ವಪತನ ಕಂಡಿತು.

Delhi- KKR team
IPL 2026: ಶಾರ್ದೂಲ್ ಠಾಕೂರ್‌ ವಿರುದ್ಧ 'ಸ್ವೀಟ್ ರಿವೆಂಜ್' ತೀರಿಸಿಕೊಂಡ ರವೀಂದ್ರ ಜಡೇಜಾ! Video ವೈರಲ್

ಅಬ್ಬರದ ಬ್ಯಾಟಿಂಗ್ ಮಾಡಿದ ಡೆಲ್ಲಿ ತಂಡದ ಆಟಗಾರ ಕೆ.ಎಲ್. ರಾಹುಲ್ 30 ಎಸೆತಗಳಲ್ಲಿ 4 ಸಿಕ್ಸರ್‌ 5 ಬೌಂಡರಿ ನೆರವಿನಿಂದ 60 ರನ್ ಗಳಿಸಿದರು. ನಾಯಕ ಅಕ್ಷರ್ ಪಟೇಲ್ 39 ರನ್, ಡೇವಿಡ್ ಮಿಲ್ಲರ್ 28 ರನ್ ಗಳಿಸಿದರು. ಇದು ತಂಡದ ಮೊತ್ತ 200ರ ಗಡಿ ದಾಟಲು ನೆರವಾಯಿತು.

ಕೆಕೆಆರ್ ಪರ ಸೌರಭ್ ದುಬೇ 2 ವಿಕೆಟ್ ಪಡೆದರೆ, ಅನುಕೂಲ್ ರಾಯ್, ಸುನಿಲ್ ನಾರಾಯಣ್ ಮತ್ತು ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಗಳಿಸಿದರು.

ಕೋಲ್ಕತ್ತಾ ಪರ ಅಜಿಂಕ್ಯ ರಹಾನೆ 39 ಎಸೆತಗಳಲ್ಲಿ 63 ರನ್‌, ಮನಿಷ್‌ ಪಾಂಡ್ಯ 16 ಎಸೆತಗಳಲ್ಲಿ 25 ರನ್‌ ಗಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com