5 ಪಂದ್ಯ, 107 ರನ್, 'ಸಂಜು ಬಗ್ಗೆ ನಿನಗೇಕಿಷ್ಟು ತಲೆಬಿಸಿ?': ಟ್ರೋಲ್ ಮಾಡಿದವನಿಗೆ ಬಟ್ಟೆಸುತ್ತಿ ಹೊಡೆದ ಅಶ್ವಿನ್!

ಐದು ಪಂದ್ಯಗಳಲ್ಲಿ ಕೇವಲ 107 ರನ್ ಗಳಿಸಿದ ಸಂಜು, ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಅದರಲ್ಲೂ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಕೇವಲ 10 ಎಸೆತಗಳನ್ನು ಎದುರಿಸಿ 4 ರನ್ ಗಳಿಸಿ ಔಟಾಗಿದ್ದರು.
R Ashwin's Epic Reply To Fan Who Mocked Him For Making Sanju Samson "First Choice"
Updated on: 

ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 3-2 ಅಂತರದಲ್ಲಿ ಗೆಲುವು ಸಾಧಿಸದ್ದು, ಸರಣಿಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರ ಕಳಪೆ ಪ್ರದರ್ಶನ ಇದೀಗ ಕ್ರಿಕೆಟ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಐದು ಪಂದ್ಯಗಳಲ್ಲಿ ಕೇವಲ 107 ರನ್ ಗಳಿಸಿದ ಸಂಜು, ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಅದರಲ್ಲೂ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಕೇವಲ 10 ಎಸೆತಗಳನ್ನು ಎದುರಿಸಿ 4 ರನ್ ಗಳಿಸಿ ಔಟಾಗಿದ್ದರು. ಸಂಜು ಅವರ ಈ ಕಳಪೆ ಪ್ರದರ್ಶನದ ಬೆನ್ನಲ್ಲೇ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಬೇಕೆಂಬ ಚರ್ಚೆಯೂ ಆರಂಭವಾಗಿದೆ.

ಈ ನಡುವೆ ಸಂಜು ಸ್ಯಾಮ್ಸನ್ ಅವರನ್ನು ಹಲವು ಬಾರಿ ಬಹಿರಂಗವಾಗಿ ಬೆಂಬಲಿಸಿದ್ದ ಭಾರತದ ಮಾಜಿ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಅವರನ್ನೂ ಅಭಿಮಾನಿಯೊಬ್ಬರು ಟ್ರೋಲ್ ಮಾಡಿದ್ದಾರೆ. ಆದರೆ, ಇದಕ್ಕೆ ಅಶ್ವಿನ್ ನೀಡಿದ ತಿರುಗೇಟು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.

R Ashwin's Epic Reply To Fan Who Mocked Him For Making Sanju Samson "First Choice"
'ಮಾನಸಿಕವಾಗಿ ಬಳಲಿದ್ದೇನೆ, ಆದರೆ ಒತ್ತಡ ನಿಭಾಯಿಸುವ ಶಕ್ತಿ ನನಗಿದೆ': ಕೊನೆಗೂ ಮೌನ ಮುರಿದ ಗೌತಮ್ ಗಂಭೀರ್!

ಫಸ್ಟ್ ಚಾಯ್ಸ್ ಆಗಿ ಹೇಗೆ ಪರಿಗಣಿಸುತ್ತೀರಿ?

ಸಂಜು ಸ್ಯಾಮ್ಸನ್ ಅವರನ್ನು ತಮ್ಮ ಮೊದಲ ಆಯ್ಕೆಯ ಆಟಗಾರ ಎಂದು ಬೆಂಬಲಿಸುತ್ತಿರುವ ಅಶ್ವಿನ್ ಅವರನ್ನು ಪ್ರಶ್ನಿಸಿದ ಅಭಿಮಾನಿಯೊಬ್ಬರು, ಐದು ಪಂದ್ಯಗಳಲ್ಲಿ ಕೇವಲ 107 ರನ್ ಗಳಿಸಿದ ಆಟಗಾರನನ್ನು ಹೇಗೆ ಫಸ್ಟ್ ಚಾಯ್ಸ್ ಆಗಿ ಪರಿಗಣಿಸುತ್ತೀರಿ ಎಂದು ವ್ಯಂಗ್ಯವಾಡಿದ್ದಾರೆ.

ಬಟ್ಟೆ ಸುತ್ತಿ ಹೊಡೆದ ಅಶ್ವಿನ್

ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ಅಶ್ವಿನ್, "ಸಂಜು ನನ್ನ ಮೊದಲ ಆಯ್ಕೆ. ಆದರೆ, ಆತನೇ ನಿನ್ನ ಫುಲ್ ಟೈಮ್ ಅಬ್ಸೆಷನ್ (ಸದಾ ನಿನ್ನ ತಲೆಯಲ್ಲಿ ಇರುವ ವ್ಯಕ್ತಿ)" ಎಂದು ಖಡಕ್ ಉತ್ತರ ನೀಡಿದ್ದಾರೆ. ಈ ಮೂಲಕ ಸಂಜು ಅವರನ್ನು ಟೀಕಿಸುವ ಅಭಿಮಾನಿಗೆ ತಿರುಗೇಟು ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X