

ಆಕ್ಲೆಂಡ್: ವಿರಾಟ್ ಕೊಹ್ಲಿ ಮತ್ತು ಅನ್ಶುಲ್ ಕಾಂಬೋಕ್ ಅವರ ಅಮೋಘ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಬುಧವಾರ ನ್ಯೂಜಿಲೆಂಡ್ ವಿರುದ್ಧ ಐದು ವಿಕೆಟ್‌ಗಳ ಭರಜ್ರಿ ಜಯ ಸಾಧಿಸಿದೆ. ಈ ಮೂಲಕ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.
ಇಂದು ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 40.2 ಓವರ್‌ಗಳಲ್ಲಿ 185 ರನ್‌ಗಳಿಗೆ ಆಲೌಟ್ ಆಯಿತು. ಬಳಿಕ ಪಂದ್ಯಕ್ಕೆ ಮಳೆ ಅಡ್ಡಿಯಾದ ಹಿನ್ನೆಲೆಯಲ್ಲಿ ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ ಭಾರತಕ್ಕೆ 32 ಓವರ್‌ಗಳಲ್ಲಿ 143 ರನ್‌ಗಳ ಗುರಿ ನೀಡಲಾಯಿತು.
ಗೆಲುವಿಗೆ 32 ಓವರ್‌ಗಳಲ್ಲಿ 143 ರನ್‌ಗಳ ಗುರಿ ಬೆನ್ನಟ್ಟಿದ ಭಾರತ, ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ 80ನೇ ಏಕದಿನ ಅರ್ಧಶತಕದ ನೆರವಿನಿಂದ ಕೇವಲ 22.4 ಓವರ್‌ಗಳಲ್ಲೇ ಗೆಲುವು ಸಾಧಿಸಿತು. ಅನ್ಶುಲ್ ಕಾಂಬೋಕ್ ಅವರು ತಮ್ಮ 10 ಓವರ್‌ಗಳ ಕೋಟಾದಲ್ಲಿ ಕೇವಲ 22 ರನ್ ನೀಡಿ 2 ವಿಕೆಟ್‌ಗಳನ್ನು ಕಬಳಿಸಿ ಭಾರತದ ಗೆಲುವಿಗೆ ಕಾರಣರಾದರು.
ವಿರಾಟ್ ಕೊಹ್ಲಿ ಅವರು 51 ಎಸೆತಗಳಲ್ಲಿ 74 ರನ್‌ಗಳನ್ನು ಗಳಿಸಿದರು. ಇದೇ ವೇಳೆ, ಏಕದಿನ ಕ್ರಿಕೆಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 13,000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಐತಿಹಾಸಿಕ ಮೈಲಿಗಲ್ಲನ್ನು ಕೊಹ್ಲಿ ತಲುಪಿದರು.
ಭಾರತದ ಪರ ವಿರಾಟ್ ಕೊಹ್ಲಿ 74 ರನ್ (1 ಸಿಕ್ಸರ್, 13 ಬೌಂಡರಿ) ಚಚ್ಚಿದ್ರೆ, ಶುಭಮನ್ ಗಿಲ್ 37 ರನ್, ಶ್ರೇಯಸ್ ಅಯ್ಯರ್ 17 ರನ್ ಗಳಿಸಿ ಔಟಾರೇ, ಮಾಜಿ ನಾಯಕ ರೋಹಿತ್ ಶರ್ಮಾ ಅಕ್ಷರ್ ಪಟೇಲ್ ಸೊನ್ನೆ ಸುತ್ತಿದರು. ಕೊನೆಯಲ್ಲಿ ಕೆ.ಎಲ್ ರಾಹುಲ್ 3 ರನ್, ನಮನ್ ಧೀರ್ 5 ರನ್ ಗಳಿಸಿ ಕ್ರೀಸ್‌ನಲ್ಲಿ ಉಳಿದರು.