ಮೈದಾನದಲ್ಲೇ ಬ್ರಾರ್ - ಟಿಮ್ ನಡುವೆ ಮತ್ತೆ ಜಗಳ: ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ ವಿರಾಟ್ ಕೊಹ್ಲಿ; Video

ಈ ಪಂದ್ಯದಲ್ಲಿ ಬ್ರಾರ್ ಮತ್ತು ಸೀಫರ್ಟ್ ನಡುವೆ ಎರಡು ಬಾರಿ ಇಂತಹ ಜಟಾಪಟಿಗಳು ನಡೆದಿದ್ದವು. ಮೊದಲ ಘಟನೆಯು, ಕಿವೀಸ್ ತಂಡದ ಬ್ಯಾಟರ್ ಟಿಮ್, ಯುವ ವೇಗದ ಬೌಲರ್ ಬ್ರಾರ್ ಅವರ ಎಸೆತವೊಂದನ್ನು ಬೌಂಡರಿಗೆ ಅಟ್ಟಿದಾಗ ಸಂಭವಿಸಿತು.
Virat Kohli Intervenes As Gurnoor Brar Clashes With Tim Seifert On The Field
ಬ್ರಾರ್ ತಡೆದ ವಿರಾಟ್ ಕೊಹ್ಲಿ
Updated on: 

'ಬೇ ಓವಲ್' (Bay Oval) ಮೈದಾನದಲ್ಲಿ ಶುಕ್ರವಾರ ನಡೆದ ನಾಲ್ಕನೇ ಏಕದಿನ ಪಂದ್ಯದ ಆರಂಭಿಕ ಹಂತದಲ್ಲಿ, ಭಾರತದ ಯುವ ವೇಗಿ ಗುರ್ನೂರ್ ಬ್ರಾರ್ ಮತ್ತು ನ್ಯೂಜಿಲೆಂಡ್‌ನ ಆರಂಭಿಕ ಬ್ಯಾಟರ್ ಟಿಮ್ ಸೀಫರ್ಟ್ ನಡುವೆ ಮಾತಿನ ಚಕಮಕಿ ನಡೆಯಿತು.

ಈ ಪಂದ್ಯದಲ್ಲಿ ಬ್ರಾರ್ ಮತ್ತು ಸೀಫರ್ಟ್ ನಡುವೆ ಎರಡು ಬಾರಿ ಇಂತಹ ಜಟಾಪಟಿಗಳು ನಡೆದಿದ್ದವು. ಮೊದಲ ಘಟನೆಯು, ಕಿವೀಸ್ ತಂಡದ ಬ್ಯಾಟರ್ ಟಿಮ್, ಯುವ ವೇಗದ ಬೌಲರ್ ಬ್ರಾರ್ ಅವರ ಎಸೆತವೊಂದನ್ನು ಬೌಂಡರಿಗೆ ಅಟ್ಟಿದಾಗ ಸಂಭವಿಸಿತು. ಆದಾಗ್ಯೂ, ಈ ಘಟನೆಯ ನಡುವೆಯೂ ಸೀಫರ್ಟ್ ಕೇವಲ 39 ಎಸೆತಗಳಲ್ಲಿ 50 ರನ್‌ಗಳ ಗಡಿಯನ್ನು ದಾಟುವಲ್ಲಿ ಯಶಸ್ವಿಯಾದರು. ಅರ್ಧಶತಕ ಪೂರೈಸಿದ ಕೆಲವೇ ಕ್ಷಣಗಳಲ್ಲಿ, ಬ್ರಾರ್ ಅವರ ಬೌಲಿಂಗ್‌ನಲ್ಲಿ ಸೀಫರ್ಟ್ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದರು.

ಟಿಮ್ ಸೀಫರ್ಟ್ ಸಿಕ್ಸರ್ ಬಾರಿಸಿದ ನಂತರ ಗುರ್ನೂರ್ ಬ್ರಾರ್ ಸೀಫರ್ಟ್ ಬಳಿ ಹೋಗಿ ಏನೋ ಹೇಳಿದರು. ಈ ವೇಳೆ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದೆ. ನಂತರ, ಬ್ರಾರ್ ಸೀಫರ್ಟ್ ವಿಕೆಟ್ ಪಡೆದಾಗ, ಮೈದಾನದಲ್ಲಿನ ವಾತಾವರಣ ಇನ್ನಷ್ಟು ಕಾವೇರಿತು.

Virat Kohli Intervenes As Gurnoor Brar Clashes With Tim Seifert On The Field
ನಟಿ-ಮಾಡೆಲ್ ಸಮ್ರೀನ್ ಜತೆ ಸ್ಟಾರ್‌ ಕ್ರಿಕೆಟರ್‌ ಅರ್ಷ್‌ದೀಪ್ ಸಿಂಗ್ ಎಂಗೇಜ್‌ಮೆಂಟ್; ಫೋಟೋ ಹಂಚಿಕೊಂಡ ಗರ್ಲ್​ಫ್ರೆಂಡ್!

ವಿಕೆಟ್ ಪಡೆದ ನಂತರ, ಗುರ್ನೂರ್ ಬ್ರಾರ್ ಮತ್ತೆ ಸೀಫರ್ಟ್‌ಗೆ ಏನೋ ಹೇಳಿದರು, ನಂತರ ಸೀಫರ್ಟ್ ಕೂಡ ಉತ್ತರಿಸಿದರು, ಗುರ್ನೂರ್ ಬ್ರಾರ್ ಅವರತ್ತ ಧಾವಿಸಿದರು. ಗುರ್ನೂರ್ ಬ್ರಾರ್ ಮತ್ತು ಟಿಮ್ ಸೀಫರ್ಟ್ ನಡುವಿನ ಜಗಳವನ್ನು ವಿರಾಟ್ ಕೊಹ್ಲಿ ಮತ್ತು ಅಂಪೈರ್ ಪರಿಹರಿಸಿದರು.

ವಿರಾಟ್ ಕೊಹ್ಲಿ ಗುರ್ನೂರ್ ಬ್ರಾರ್, ಸೀಫರ್ಟ್‌ ಬಳಿ ಹೋಗುವುದನ್ನು ತಡೆದರು, ಆದರೆ ಈ ಘಟನೆಯಿಂದಾಗಿ ಮೈದಾನದಲ್ಲಿ ಸ್ವಲ್ಪ ಸಮಯದವರೆಗೆ ಸಂಘರ್ಷ ಇತ್ತು. ಈ ಇಡೀ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X