ರಜನಿಕಾಂತ್ ನಟನೆಯ 'ಜೈಲರ್ 2' ಚಿತ್ರ ವೀಕ್ಷಿಸಲು ಇಡೀ ಚಿತ್ರಮಂದಿರವನ್ನೇ ಬುಕ್ ಮಾಡಿದ ಸಂಜು ಸ್ಯಾಮ್ಸನ್!

'ನನಗೆ ರಜನಿ ಸರ್ ಅವರ ಸಿನಿಮಾಗಳನ್ನು ನೋಡುವುದೆಂದರೆ ತುಂಬಾ ಇಷ್ಟ, ಅವರ ಮುಂದಿನ ಚಿತ್ರಕ್ಕಾಗಿ ನಾನು ಯಾವಾಗಲೂ ಕಾತುರದಿಂದ ಕಾಯುತ್ತಿರುತ್ತೇನೆ. ಹಾಗಾಗಿ, ನಾನು ಸಿನಿಮಾ ನೋಡಲು ಒಂದು ದಿನ ತಡ ಮಾಡಿದೆ ಅಷ್ಟೇ' ಎಂದರು.
Sanju Samson - Rajinikanth
ಸಂಜು ಸ್ಯಾಮ್ಸನ್ - ರಜನಿಕಾಂತ್
Updated on: 

ಭಾರತೀಯ ವಿಕೆಟ್‌ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್, ರಾಷ್ಟ್ರೀಯ ತಂಡದಲ್ಲಿ ತಮ್ಮ ಸ್ಥಾನದ ವಿಚಾರವಾಗಿ ಕ್ರಿಕೆಟ್ ವಲಯದಲ್ಲಿ ದೀರ್ಘಕಾಲದಿಂದ ಚರ್ಚೆಯ ವಿಷಯವಾಗಿದ್ದಾರೆ. ಆದಾಗ್ಯೂ, ಅನೇಕ ಕ್ರಿಕೆಟ್ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸುವಂತಹ ಅಸಾಧಾರಣ ಪ್ರತಿಭೆ ಸ್ಯಾಮ್ಸನ್ ಎಂಬುದನ್ನು ವಿಮರ್ಶಕರು ಹಾಗೂ ಅಭಿಮಾನಿಗಳು ಒಪ್ಪಿಕೊಳ್ಳುತ್ತಾರೆ. ಆದರೆ, ಸ್ಯಾಮ್ಸನ್ ಅವರನ್ನೇ ಮಂತ್ರಮುಗ್ಧರನ್ನಾಗಿಸಿದ ವ್ಯಕ್ತಿ ಬೇರಾರೂ ಅಲ್ಲ, ನಟ ರಜಿನಿಕಾಂತ್. ಸ್ಯಾಮ್ಸನ್ ಅವರು 'ತಲೈವಾ' ಅವರ ದೊಡ್ಡ ಅಭಿಮಾನಿ ಎಂಬುದು ಮೊದಲೇ ತಿಳಿದಿದ್ದ ವಿಷಯವಾದರೂ, ರಜನಿಕಾಂತ್ ಅವರ ಇತ್ತೀಚಿನ ಚಿತ್ರ 'ಜೈಲರ್ 2' ವೀಕ್ಷಿಸಲು ಇಡೀ ಚಿತ್ರಮಂದಿರವನ್ನೇ ಕಾಯ್ದಿರಿಸುವ ಮೂಲಕ ಅವರು ತಮ್ಮ ಅಭಿಮಾನದ ಆಳವನ್ನು ಪ್ರದರ್ಶಿಸಿದ್ದಾರೆ.

ಸ್ಯಾಮ್ಸನ್ ತನ್ನ ಕುಟುಂಬ, ಸ್ನೇಹಿತರು ಮತ್ತು ತಂಡದ ಸಹ ಆಟಗಾರರೊಂದಿಗೆ ಚಿತ್ರವನ್ನು ವೀಕ್ಷಿಸಲು ಯೋಜಿಸಿದ್ದಾರೆ; ಇದಕ್ಕಾಗಿ ಅವರು ಇಡೀ ಪರದೆಯನ್ನು (ಸ್ಕ್ರೀನ್) ಬಾಡಿಗೆಗೆ ಪಡೆದುಕೊಂಡಿದ್ದಾರೆ.

'ನನಗೆ ರಜನಿ ಸರ್ ಅವರ ಸಿನಿಮಾಗಳನ್ನು ನೋಡುವುದೆಂದರೆ ತುಂಬಾ ಇಷ್ಟ, ಅವರ ಮುಂದಿನ ಚಿತ್ರಕ್ಕಾಗಿ ನಾನು ಯಾವಾಗಲೂ ಕಾತುರದಿಂದ ಕಾಯುತ್ತಿರುತ್ತೇನೆ. ಹಾಗಾಗಿ, ನಾನು ಸಿನಿಮಾ ನೋಡಲು ಒಂದು ದಿನ ತಡ ಮಾಡಿದೆ ಅಷ್ಟೇ. ಅವರ ಸಾಧ್ಯವಾದಷ್ಟು ಹೆಚ್ಚಿನ ಸಿನಿಮಾಗಳನ್ನು ನೋಡಲು ನಾನು ಪ್ರಯತ್ನಿಸುತ್ತೇನೆ. ನಿನ್ನೆ ದೆಹಲಿಯಲ್ಲಿ ಒಂದು ಕಾರ್ಯಕ್ರಮವಿದ್ದಿದ್ದರಿಂದ, ನನಗೆ ಸಿನಿಮಾ ನೋಡಲು ಸಾಧ್ಯವಾಗಲಿಲ್ಲ' ಎಂದು ಸ್ಯಾಮ್ಸನ್ ಹೇಳಿದರು.

'ಆದರೆ ಅದೃಷ್ಟವಶಾತ್, ಇಂದು ಇಡೀ ಚಿತ್ರಮಂದಿರವನ್ನೇ ಬುಕ್ ಮಾಡುವ ಅವಕಾಶ ನನಗೆ ಸಿಕ್ಕಿತು. ನಾನು ನನ್ನ ಸ್ನೇಹಿತರನ್ನು ಆಹ್ವಾನಿಸಿದ್ದೇನೆ, ನನ್ನ ಪತ್ನಿಯೂ ಇಲ್ಲಿದ್ದಾರೆ. ದೊಡ್ಡ ಪರದೆ ಮೇಲೆ ರಜನಿ ಸರ್ ಅವರನ್ನು ನೋಡಲು ನಾನು ತುಂಬಾ ಉತ್ಸುಕನಾಗಿದ್ದೇನೆ' ಎಂದರು.

Sanju Samson - Rajinikanth
ಬಾಕ್ಸ್ ಆಫೀಸ್‌ನಲ್ಲಿ 'ಜೈಲರ್ 2' ಅಬ್ಬರ: ರಜಿನಿಕಾಂತ್ ನಟನೆಯ ಚಿತ್ರ ವಿಶ್ವದಾದ್ಯಂತ ಗಳಿಸಿದ್ದೆಷ್ಟು?

ತಮಿಳು ಭಾಷೆ ಬಲ್ಲ ಭಾರತೀಯ ತಂಡದ ಹಲವು ಸದಸ್ಯರು ಕೂಡ ಈ ಪ್ರದರ್ಶನಕ್ಕೆ ತಮ್ಮೊಂದಿಗೆ ಸೇರಿಕೊಳ್ಳಲಿದ್ದಾರೆ. 'ತಂಡದಲ್ಲಿರುವ ಹಾಗೂ ಸಹಾಯಕ ಸಿಬ್ಬಂದಿಯಲ್ಲಿರುವ, ತಮಿಳು ಭಾಷೆ ತಿಳಿದಿರುವ ಪ್ರತಿಯೊಬ್ಬರೂ ಬರುತ್ತಿದ್ದಾರೆ' ಎಂದು ಅವರು ತಿಳಿಸಿದರು.

ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ 'ಜೈಲರ್ 2', 2023ರ ಬ್ಲಾಕ್‌ಬಸ್ಟರ್ ಚಿತ್ರ 'ಜೈಲರ್'ನ ಮುಂದುವರಿದ ಭಾಗವಾಗಿದೆ. ಇದೊಂದು ಬಹುನಿರೀಕ್ಷಿತ ಆಕ್ಷನ್-ಥ್ರಿಲ್ಲರ್ ಚಿತ್ರವಾಗಿದ್ದು, ಇದರಲ್ಲಿ ರಜನಿಕಾಂತ್ ಅವರು 'ಟೈಗರ್ ಮುತ್ತುವೇಲ್ ಪಾಂಡಿಯನ್' ಎಂಬ ತಮ್ಮ ಐಕಾನಿಕ್ ಪಾತ್ರದಲ್ಲಿ ಮತ್ತೆ ಕಾಣಿಸಿಕೊಂಡಿದ್ದಾರೆ. 'ಜೈಲರ್ 2' ಈಗಾಗಲೇ ಬಾಕ್ಸ್ ಆಫೀಸ್ ದಾಖಲೆಗಳನ್ನು ಧ್ವಂಸಗೊಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com