ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯ: ವೇಗಿ ನಾಥನ್ ಸ್ಮಿತ್ 'ಬೀಮರ್' ಎಸೆತದಿಂದ ನೋವಿನಲ್ಲಿ ನರಳಾಡಿದ ಶ್ರೇಯಸ್ ಅಯ್ಯರ್! Video

ಈ ಚೆಂಡು ನೇರವಾಗಿ ಶ್ರೇಯಸ್ ಅಯ್ಯರ್ ಅವರ ಗ್ಲೌಸ್ ಮತ್ತು ಮಣಿಕಟ್ಟಿಗೆ ಬಡಿಯಿತು. ತೀವ್ರ ನೋವಿನಿಂದಾಗಿ ಅವರು ಬ್ಯಾಟ್ ಬಿಟ್ಟು ದೂರ ನಡೆದರು.
Shreyas Iyer
ಶ್ರೇಯಸ್ ಅಯ್ಯರ್
Updated on: 

ಕ್ರೈಸ್ಟ್‌ಚರ್ಚ್‌: ನ್ಯೂಜಿಲೆಂಡ್ ವೇಗಿ ನಾಥನ್ ಸ್ಮಿತ್ ಎಸೆದ ಅಪಾಯಕಾರಿ 'ಬೀಮರ್' ಎಸೆತದಿಂದ ಭಾರತ ತಂಡದ ಟಿ-20 ನಾಯಕ ಶ್ರೇಯಸ್ ಅಯ್ಯರ್ ಗಾಯದ ಆತಂಕಕ್ಕೆ ಒಳಗಾದ ಘಟನೆ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ನಡೆದಿದೆ.

ಭಾರತದ ಬ್ಯಾಟಿಂಗ್ ಇನ್ನಿಂಗ್ಸ್‌ನ 16ನೋ ಓವರ್‌ನಲ್ಲಿ ನ್ಯೂಜಿಲೆಂಡ್‌ನ ಬೌಲರ್ ನಾಥನ್ ಸ್ಮಿತ್ ನಿಯಂತ್ರಣ ತಪ್ಪಿ ಸೊಂಟದ ಎತ್ತರಕ್ಕೆ ಫುಲ್ ಟಾಸ್ (ಬೀಮರ್) ಎಸೆದರು.

ಈ ಚೆಂಡು ನೇರವಾಗಿ ಶ್ರೇಯಸ್ ಅಯ್ಯರ್ ಅವರ ಗ್ಲೌಸ್ ಮತ್ತು ಮಣಿಕಟ್ಟಿಗೆ ಬಡಿಯಿತು. ತೀವ್ರ ನೋವಿನಿಂದಾಗಿ ಅವರು ಬ್ಯಾಟ್ ಬಿಟ್ಟು ದೂರ ನಡೆದರು.

Shreyas Iyer
India vs New Zealand: ಭುವಿ ಭರ್ಜರಿ ಕಂಬ್ಯಾಕ್; ವಿಶ್ವ ದಾಖಲೆ ಬರೆದ 'ಸ್ವಿಂಗ್ ಸುಲ್ತಾನ್'!

ಈ ಘಟನೆಯು ಭಾರತದ ಚೇಸಿಂಗ್‌ಗೆ ಸ್ವಲ್ಪ ಸಮಯ ಅಡ್ಡಿಪಡಿಸಿತು. ಸ್ಮಿತ್ ತಕ್ಷಣವೇ ಅಯ್ಯರ್ ಬಳಿ ಬಂದು ಕ್ಷಮೆಯಾಚಿಸಿದರು. ಅಂಪೈರ್ ಇದನ್ನು 'ನೋ-ಬಾಲ್' ಎಂದು ಘೋಷಿಸಿದರು.

ಅದೃಷ್ಟವಶಾತ್, ಗಾಯದ ಆತಂಕದ ನಡುವೆಯೂ ಶ್ರೇಯಸ್ ಅಯ್ಯರ್ ಪ್ರಥಮ ಚಿಕಿತ್ಸೆ ಪಡೆದು ಬ್ಯಾಟಿಂಗ್ ಮುಂದುವರಿಸಿದರು. ಅವರು 28 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 42 ರನ್ ಗಳಿಸಿ ಔಟಾದರು.

ಕ್ರೈಸ್ಟ್ ಚರ್ಚ್ ನ ಹ್ಯಾಗ್ಲೇ ಓವಲ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 226 ರನ್ ಗಳ ಬೃಹತ್ ಮೊತವನ್ನು ಭಾರತ ತಂಡ 19.4 ಓವರ್ ನಲ್ಲೇ ಬೆನ್ನಟ್ಟಿ 4 ವಿಕೆಟ್ ಗಳ ರೋಚಕ ಜಯ ದಾಖಲಿಸಿತು. ಆ ಮೂಲಕ ಟಿ20 ಇತಿಹಾಸದ ಅತೀ ದೊಡ್ಡ ಗೆಲುವು ಸಾಧಿಸಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com