ಬಿಸಿಸಿಐನಿಂದ WPL 2027ರ ವೇಳಾಪಟ್ಟಿ ಪ್ರಕಟ: ಇದೇ ಅಕ್ಟೋಬರ್‌ನಲ್ಲಿ ಹರಾಜು ಪ್ರಕ್ರಿಯೆ

ಮುಂದಿನ ವರ್ಷ ಜನವರಿ 14 ರಿಂದ ಫೆಬ್ರವರಿ 7 ರವರೆಗೆ ನಡೆಯಲಿರುವ ಐದನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನ ದಿನಾಂಕಗಳನ್ನು ಇಂದು ಬಿಸಿಸಿಐ ಅಧಿಕೃತವಾಗಿ ಘೋಷಿಸಿದೆ.
WPL title won by RCB
ಡಬ್ಲ್ಯುಪಿಎಲ್ ಗೆದ್ದ ಆರ್ ಸಿಬಿ ಮಹಿಳಾ ತಂಡ
Updated on

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಬುಧವಾರ 2027ರಲ್ಲಿ ನಡೆಯುವ ಐದನೇ ಆವೃತ್ತಿಯ ಮಹಿಳಾ ಪ್ರೀಮಿಯರ್‌ ಲೀಗ್‌(Women’s Premier League) ವೇಳಾಪಟ್ಟಿ ಹಾಗೂ ಹರಾಜು ದಿನಾಂಕವನ್ನು ಪ್ರಕಟಿಸಿದೆ.

ಮುಂದಿನ ವರ್ಷ ಜನವರಿ 14 ರಿಂದ ಫೆಬ್ರವರಿ 7 ರವರೆಗೆ ನಡೆಯಲಿರುವ ಐದನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನ ದಿನಾಂಕಗಳನ್ನು ಇಂದು ಬಿಸಿಸಿಐ ಅಧಿಕೃತವಾಗಿ ಘೋಷಿಸಿದ್ದು, ಆಟಗಾರರ ಹರಾಜು ಪ್ರಕ್ರಿಯೆ ಅಕ್ಟೋಬರ್ 28 ರಂದು ಕೊಚ್ಚಿಯಲ್ಲಿ ನಡೆಯಲಿದೆ.

ಈ ಕುರಿತು WPL ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದು, ಐದನೇ ಸೀಸನ್‌ನ ದಿನಾಂಕ ಹಾಗೂ ಹರಾಜು ನಡೆಯುವ ದಿನಾಂಕದ ಬಗ್ಗೆ ಮಾಹಿತಿ ನೀಡಿದೆ.

WPL title won by RCB
ಸಚಿನ್ ತೆಂಡುಲ್ಕರ್‌ರ ದೀರ್ಘಕಾಲೀನ ODI ದಾಖಲೆ ಮುರಿದ ಬ್ರೆಂಡನ್ ಟೇಲರ್; ಆದ್ರೆ ಒಂದು ಟ್ವಿಸ್ಟ್ ಇದೆ!

ಮುಂದಿನ ಸೀಸನ್‌ಗೆ ತಂಡಗಳು ಸಿದ್ಧವಾಗುವಾಗ ಪಾಲಿಸಬೇಕಾದ ಪ್ರಮುಖ ದಿನಾಂಕಗಳನ್ನು ವೇಳಾಪಟ್ಟಿಯಲ್ಲಿ ನೀಡಲಾಗಿದ್ದು, ಹರಾಜಿಗೂ ಮುನ್ನ ಆಟಗಾರರನ್ನು ಉಳಿಸಿಕೊಳ್ಳಲು ಸೆಪ್ಟೆಂಬರ್ 28ರವರೆಗೆ ಗಡುವು ನೀಡಲಾಗಿದೆ. ಇದು ಐದು ಫ್ರಾಂಚೈಸಿಗಳು ತಮ್ಮ ಪ್ರಸ್ತುತ ಪಟ್ಟಿಯಲ್ಲಿರುವ ಆಟಗಾರರನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

2026ರ ಸೀಸನ್‌ನಲ್ಲಿ ಸ್ಮೃತಿ ಮಂಧಾನ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡವು ತಮ್ಮ ಎರಡನೇ WPL ಪ್ರಶಸ್ತಿಯನ್ನು ಗೆದ್ದು ಚಾಂಪಿಯನ್‌ ಆಗಿತ್ತು. ಕಳೆದ ನಾಲ್ಕು ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್‌ (MI) ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಗಳು ತಲಾ ಎರೆಡೆರಡು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com