ವರದಕ್ಷಿಣೆ ಕಿರುಕುಳ: ಡಿಸ್ಚಾರ್ಜ್ ಆದ ತಕ್ಷಣ ವೇಣುಗೋಪಾಲ್ ಆರೆಸ್ಟ್

ವರದಕ್ಷಿಣೆಗಾಗಿ ಪತ್ನಿಗೆ ಚಿತ್ರಹಿಂಸೆ ನೀಡಿ, ಗೃಹಬಂಧನದಲ್ಲಿರಿಸಿದ್ದ ಪತ್ನಿ ಪೀಡಕ ಮೂಡಲಪಾಳ್ಯದ ವೇಣುಗೋಪಾಲ್‍ನನ್ನು ಆಸ್ಪತ್ರೆಯಿಂದ....
ವೇಣುಗೋಪಾಲ್-ಶೋಭಾ
ವೇಣುಗೋಪಾಲ್-ಶೋಭಾ
Updated on: 

ಬೆಂಗಳೂರು: ವರದಕ್ಷಿಣೆಗಾಗಿ ಪತ್ನಿಗೆ ಚಿತ್ರಹಿಂಸೆ ನೀಡಿ, ಗೃಹಬಂಧನದಲ್ಲಿರಿಸಿದ್ದ ಪತ್ನಿ ಪೀಡಕ ಮೂಡಲಪಾಳ್ಯದ ವೇಣುಗೋಪಾಲ್‍ನನ್ನು ಆಸ್ಪತ್ರೆಯಿಂದ ಬಿಡುಗಡೆಯಾದ ತಕ್ಷಣವೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪತ್ನಿ ಮಂಡ್ಯ ಮೂಲದ ಶೋಭಾಳಿಗೆ ತೀವ್ರ ಚಿತ್ರಹಿಂಸೆ ನೀಡಿದ್ದ ವೇಣುಗೋಪಾಲ್, ಸಂಬಂಧಿಕರಿಂದ ಒದೆ ತಿಂದ ಹಿನ್ನೆಲೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಕಿರುಕುಳಕ್ಕೆ ಒಳಗಾಗಿ ಅಸ್ವಸ್ಥಗೊಂಡಿದ್ದ ಶೋಭಾಳನ್ನು ಆಕೆಯ ಪೋಷಕರು ನಗರದ ಖಾಸಗಿ ಆಸ್ಪತ್ರೆಗ ಸೇರಿಸಿದ್ದ ಬೆನ್ನಲೇ ವೇಣು ಗೋಪಾಲ್ ಕೂಡ ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆದಿರಲಿಲ್ಲ.

ಸೋಮವಾರ ಕೂಡ ಆತ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದ. ಇಂದು ಬೆಳಗ್ಗೆ ವೇಣುಗೋಪಾಲ್ ಆಸ್ಪತ್ರೆಯಿಂದ ಬಿಡುಗಡೆಯಾಗುತ್ತಿದ್ದಂತೆಯೇ ವಿಜಯನಗರ ಪೊಲೀಸರು ಆತನನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com