
ಬೆಂಗಳೂರು: ರಾಜ್ಯದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ಮಾಡಿದ್ದು, ಲಂಚಕೋರ ಸರ್ಕಾರಿ ಅಧಿಕಾರಿಗಳ ಕಚೇರಿ, ನಿವಾಸವನ್ನು ಜಾಲಾಡಿದ್ದಾರೆ.
ರಾಜ್ಯದ ಸುಮಾರು 13 ಜಿಲ್ಲೆಗಳ 36 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, 13 ಅಧಿಕಾರಿಗಳ ನಿವಾಸ ಮತ್ತು ಕಚೇರಿ ಮೇಲೆ ದಾಳಿ ಮಾಡಿ ಸುಮಾರು 14 ಕೋಟಿ ರುಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ. ಬೆಂಗಳೂರು, ಬಾಗಲಕೋಟೆ, ಬಳ್ಳಾರಿ, ಬೀದರ್, ಶಿವಮೊಗ್ಗ, ಚಿಕ್ಕಬಳ್ಳಾಪುರ, ತುಮಕೂರು, ದಕ್ಷಿಣ ಕನ್ನಡ, ಧಾರವಾಡ, ಕಲಬುರಗಿ, ಮಂಡ್ಯ ಸೇರಿದಂತೆ13 ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ನಿರ್ದೇಶಕರಾಗಿರುವ ಐಎಎಸ್ ಅಧಿಕಾರಿ ಬಿ.ಎನ್. ವಿಜಯ ಶಂಕರ್ ಸೇರಿ 13 ಮಂದಿ ಕಡು ಭ್ರಷ್ಟ ಅಧಿಕಾರಿಗಳ ಕಚೇರಿ, ಮನೆಗಳ ಮೇಲೆ ಏಕಕಾಲದ ದಾಳಿ ನಡೆಸಿರುವ ಲೋಕಾಯುಕ್ತರು ಕೋಟ್ಯಂತರ ಮೌಲ್ಯದ ಅಕ್ರಮ ಆಸ್ತಿ-ಪಾಸ್ತಿಯನ್ನು ಪತ್ತೆ ಹಚ್ಚಿದ್ದಾರೆ. ವಿಜಯಶಂಕರ್ ಅವರ ಬಹುಮಹಡಿ ಕಟ್ಟಡಗಳಲ್ಲಿರುವ (ಎಂಎಸ್ ಬಿಲ್ಡಿಂಗ್) ಕಚೇರಿ, ಜಯನಗರದಲ್ಲಿರುವ ನಿವಾಸ ಇನ್ನಿತರ ಕಡೆಗಳಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಸುಮಾರು 3.4 ಕೋಟಿ ಮೌಲ್ಯದ ನಗದು, ಚಿನ್ನಾಭರಣ, ಐಷಾರಾಮಿ ವಸ್ತುಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.
ಉಳಿದಂತೆ ಬಿಡಿಎದ ಉಪ ಕಾರ್ಯದರ್ಶಿಯಾಗಿರುವ ಪಿ.ಎನ್. ಮೂರ್ತಿ ಅವರ ಕಚೇರಿ, ದೊಮ್ಮಲೂರಿನ ಮನೆ ಸೇರಿ ಸಂಬಂಧಿಕರ ಹೆಸರಲ್ಲಿಟ್ಟುರುವ ಆಸ್ತಿ-ಪಾಸ್ತಿಗಳ ಮೇಲೂ ದಾಳಿ
ನಡೆಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರೂಪಣಾಧಿಕಾರಿಯಾಗಿರುವ ಎಸ್.ಪಿ. ಪದ್ಮರಾಜ್ ಅವರ ದೊಮ್ಮಲೂರಿನ ಮನೆ, ದೊಡ್ಡಬಳ್ಳಾಪುರದಲ್ಲಿರುವ ಲಾಡ್ಜ್ ಮೇಲೂ ದಾಳಿ ನಡೆಸಿ, ಅಕ್ರಮ ಆಸ್ತಿ-ಪಾಸ್ತಿಯನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ ಅಧಿಕಾರಿಗಳ ಪಟ್ಟಿ
ಬಿ.ಎನ್. ವಿಜಯಶಂಕರ್ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಬೆಂಗಳೂರು- ಆಸ್ತಿ ಮೌಲ್ಯ 3.4 ಕೋಟಿ
ಪಿ.ಎನ್. ಮೂರ್ತಿ ಉಪ ಕಾರ್ಯದರ್ಶಿ, ಬಿಡಿಎ ಬೆಂಗಳೂರು- ಆಸ್ತಿ ಮೌಲ್ಯ 1.55 ಕೋಟಿ ಆಸ್ತಿ
ಎಸ್.ಸಿ. ಪದ್ಮರಾಜ್ ನಿರೂಪಣಾಧಿಕಾರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಚಿಕ್ಕಬಳ್ಳಾಪುರ- ಆಸ್ತಿ ಮೌಲ್ಯ 2.13 ಕೋಟಿ
ಅಶೋಕ್ ಕುಮಾರ್ ಮಂಟಿಕಪ್ಪ ಅಕ್ಕಣ್ಣ ಎಫ್‌ಡಿಎ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಯಾದಗಿರಿ- ಆಸ್ತಿ ಮೌಲ್ಯ 89.15 ಲಕ್ಷ
ಮಾರ್ತಂಡಪ್ಪ ಶಿವಪ್ಪ ಬಡಿಗೇರ ಕಿರಿಯ ಸಹಾಯಕ ಕೆಐಎಡಿಬಿ ಧಾರವಾಡ- ಆಸ್ತಿ ಮೌಲ್ಯ 86.05 ಲಕ್ಷ
ಡಾ. ರಮೇಶ್ ಬಾಬು ಜಿಲ್ಲಾ ಆರೋಗ್ಯಾಧಿಕಾರಿ, ಬಳ್ಳಾರಿ- ಆಸ್ತಿ ಮೌಲ್ಯ 1.26 ಕೋಟಿ
ಕಾಶೀನಾಥ ಸಿದ್ದರಾಮಪ್ಪ ಬಿದರ್‌ಕರ್ ಎಇಇ ಕೆಐಎಡಿಬಿ ಕಲಬುರಗಿ- ಆಸ್ತಿ ಮೌಲ್ಯ 1.15 ಕೋಟಿ
ಲಕ್ಷ್ಮಣ ಭೀಮಪ್ಪ ನೆಲುಗಲ್ ಕಾರ್ಯನಿರ್ವಾಹಕ ನಿರ್ದೇಶಕ, ಕೆಎಸ್ಎಫ್‌ಸಿ ಬಾಗಲಕೋಟೆ- ಆಸ್ತಿ ಮೌಲ್ಯ 4.17 ಕೋಟಿ
ಸಿದ್ದೇಗೌಡ ಗ್ರಾಮಿಲೆಕ್ಕಿಗ, ಕಸಬ ಮಂಡ್ಯ- ಆಸ್ತಿ ಮೌಲ್ಯ 44 ಲಕ್ಷ
ಪದ್ಮನಾಭ ಮೂಲ್ಯ ಸಹಾಯಕ ಇಂಜಿನಿಯರ್, ಪಟ್ಟಣ ಪಂಚಾಯಿತಿ ಮೂಡಬಿದರೆ- ಆಸ್ತಿ ಮೌಲ್ಯ 38 ಲಕ್ಷ
ಚಂದ್ರಶೇಖರ್ ಎಇಇ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಶೃಂಗೇರಿ- ಆಸ್ತಿ ಮೌಲ್ಯ 48 ಲಕ್ಷ
ವಿಜಯ್ ಕುಮಾರ್ ರೆವಿನ್ಯೂ ಇನ್ಸ್‌ಪೆಕ್ಟರ್ ತಾಲ್ಲೂಕು ಕಚೇರಿ, ಶಿವಮೊಗ್ಗ- ಆಸ್ತಿ ಮೌಲ್ಯ 33.2
ತಮ್ಮಯ್ಯ ಕಿರಿಯ ಸಹಾಯಕ ರಾಗಿ ಖರೀದಿ ಕೇಂದ್ರ, ತಿಪಟೂರು- ಆಸ್ತಿ ಮೌಲ್ಯ 50 ಲಕ್ಷ
Advertisement