ಅವಳಿ ಮಕ್ಕಳ ಸಾವಿಗೆ ಲಸಿಕೆ ಕಾರಣವಲ್ಲ

ಬಾಪೂಜಿನಗರ ಬಿಬಿಎಂಪಿ ಆರೋಗ್ಯ ಕೇಂದ್ರದಲ್ಲಿ ಪೆಂಟಾವಲೆಂಟ್ ಲಸಿಕೆ ಸೇವಿಸಿ 4 ತಿಂಗಳ ಹೆಣ್ಣು ಅವಳಿ ಮಕ್ಕಳು ಮೃತಪಟ್ಟಿದ್ದಾರೆನ್ನಲಾದ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಬಿಬಿಎಂಪಿ ಹಿರಿಯ ಆರೋಗ್ಯಾಧಿಕಾರಿಗಳು ಲಸಿಕೆಯಿಂದ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಬಾಪೂಜಿನಗರ ಬಿಬಿಎಂಪಿ ಆರೋಗ್ಯ ಕೇಂದ್ರದಲ್ಲಿ ಪೆಂಟಾವಲೆಂಟ್ ಲಸಿಕೆ ಸೇವಿಸಿ 4 ತಿಂಗಳ ಹೆಣ್ಣು ಅವಳಿ ಮಕ್ಕಳು ಮೃತಪಟ್ಟಿದ್ದಾರೆನ್ನಲಾದ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಬಿಬಿಎಂಪಿ ಹಿರಿಯ ಆರೋಗ್ಯಾಧಿಕಾರಿಗಳು ಲಸಿಕೆಯಿಂದ ಯಾವುದೇ ಲೋಪವಾಗಿಲ್ಲ ಎಂದಿದ್ದಾರೆ.

ಇದೇ ವೇಳೆ ಶವಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ಕಾರಣ ತಿಳಿಯಲಿದೆ ಎಂದು ಪೆÇಲೀಸರು ಹೇಳಿದ್ದಾರೆ. ಶವಪರೀಕ್ಷೆಯ ಕೆಲ ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೂ ಕಳುಹಿಸಲಾಗಿದೆ. ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ. ಮಕ್ಕಳ ಶವಗಳನ್ನು ಗಮನಿಸಲಾ ಗಿದ್ದು ಮೇಲ್ನೋಟಕ್ಕೆ ಏನನ್ನು ಹೇಳಲಾಗದು ಎಂದು ಬಿಬಿಎಂಪಿ ಹಿರಿಯ ವೈದ್ಯಾಧಿಕಾರಿ ಹೇಳಿದರು.

ಕೇಂದ್ರ ಸರ್ಕಾರದ ಯೋಜನೆ ಯಾದ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಅನ್ವಯ ಮಕ್ಕಳಿಗೆ ಪೊಲಿಯೋ ಹನಿ ಜತೆಗೆ ಪೆಂಟಾವಲೆಂಟ್ ಲಸಿಕೆಯನ್ನು ಡಿ.3ರಂದು ಬಾಪೂಜಿ ನಗರದಲ್ಲಿ ಒಟ್ಟು 32 ಮಕ್ಕಳಿಗೆ ಹಾಕಲಾಯಿತು. ಅದರಲ್ಲಿ 30 ಮಕ್ಕಳು ಆರೋಗ್ಯವಾಗಿವೆ. ಆದರೆ, ಒಂದೇ ಕುಟುಂಬದ ಇಬ್ಬರು ಮಕ್ಕಳು ಮೃತಪಟ್ಟಿದ್ದು ಆಶ್ಚರ್ಯ, ಆಘಾತ ತಂದಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com