(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ರೌಡಿಗಳ ಹಲ್ಲೆ ಖಂಡಿಸಿ ಪ್ರತಿಭಟನೆ

ತಾಲೂಕಿನ ಹುಸ್ಕೂರು ಬಳಿಯ ಹಣ್ಣು ಮತ್ತು ತರಕಾರಿ ಮಾರು ಕಟ್ಟೆಯಲ್ಲಿ ದಿನ ನಿತ್ಯ ಕೋಟ್ಯಾಂತರ ರುಗಳ ವ್ಯವಹಾರವಿದ್ದು ಸಿಬ್ಬಂದಿ ಹಾಗೂ ಅಂಗಡಿ ಮಾಲೀಕರ ಮೇಲೆ ಸ್ಥಳೀಯ ಗೂಂಡಾಗಳು ಹಲ್ಲೆ, ದೌರ್ಜನ್ಯ ನಡೆಸುತ್ತಾರೆ...

ಆನೇಕಲ್: ತಾಲೂಕಿನ ಹುಸ್ಕೂರು ಬಳಿಯ ಹಣ್ಣು ಮತ್ತು ತರಕಾರಿ ಮಾರು ಕಟ್ಟೆಯಲ್ಲಿ ದಿನ ನಿತ್ಯ ಕೋಟ್ಯಾಂತರ ರುಗಳ ವ್ಯವಹಾರವಿದ್ದು ಸಿಬ್ಬಂದಿ ಹಾಗೂ ಅಂಗಡಿ ಮಾಲೀಕರ ಮೇಲೆ ಸ್ಥಳೀಯ ಗೂಂಡಾಗಳು ಹಲ್ಲೆ, ದೌರ್ಜನ್ಯ ನಡೆಸುತ್ತಾರೆ.

ಹಫ್ತಾ ವಸೂಲಿಗಾಗಿ ಪೀಡಿಸುವ ಇವರ ಮೇಲೆ ಕಾನೂನು ಕ್ರಮ ಜರುಗಿಸಿ ನಿರ್ಭಯವಾಗಿ ವ್ಯಾಪಾರ ವಹಿವಾಟು ಮಾಡಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿ ಅಂಗಡಿ ಮಾಲೀಕರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಈ ಬಗ್ಗೆ ಮಾಲೀಕರ ಸಂಘದ ಪದಾಧಿಕಾರಿಗಳು ಮಾತನಾಡಿ ಗೂಂಡಾಗರಿ ನಡೆಯುತ್ತಿದ್ದರೂ ಎಪಿಎಂಸಿ ಅಧಿಕಾರಿಗಳಾಗಲೀ ಅಥವಾ ಸ್ಥಳಿಯ ಪೊಲೀಸರಾಗಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ವೆಂದು ಆರೋಪಿಸಿದರು. ಶುಕ್ರವಾರ ಸಂಜೆ ಐವರು ಗೂಂಡಾಗಳು ಕುಡಿದ ಮತ್ತಿನಲ್ಲಿ ಹಣ್ಣಿನ ಮಂಡಿಗೆ ದಾಳಿ ನಡೆಸಿ ಹಣ್ಣುಗಳ ಬಾಕ್ಸ್ ಉಚಿತವಾಗಿ ನೀಡಬೇಕೆಂದು ಆಗ್ರಹಿಸಿದರು.

ನಾವೇನೂ ಬೆಳೆಯುವುದಿಲ್ಲ. ನಾವು ಕೊಂಡು ಮಾರುವುದು. ಈ ರೀತಿ ದೌರ್ಜನ್ಯ ಮಾಡುವುದು ಸರಿಯಲ್ಲ ಎಂದು ಕೇಳಿದ್ದಕ್ಕೆ ಮಚ್ಚು ಲಾಂಗುಗಳನ್ನು ತೋರಿಸಿ ಬೆದರಿಸಿದ್ದಾರೆ.
ಇದನ್ನು ಪ್ರಶ್ನಿಸಿದ ಎಪಿಎಂಸಿ ಮಾರುಕಟ್ಟೆಯ ಐವರು ಸಿಬ್ಬಂದಿಗಳಾದ ಏಳುಮಲೈ, ರಾಜಿ, ರಾಜದೊರೆ, ತುಳು ಅರಸನ್ ಮತ್ತು ಪಾಂಡ್ಯ ಹಲ್ಲೆಗೊಳಗಾಗಿದ್ದಾರೆ. ಈ ಹಿಂದೆಯೂ ಇಂತಹ ಹಲ್ಲೆ ಪ್ರಕರಣಗಳು ನಡೆದು ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲದ ಕಾರಣ ಬೀದಿಗಿಳಿಯಬೇಕಾಯಿತೆಂದು ಸಮಿತಿಯ ಅಧ್ಯಕ್ಷ ಸಯ್ಯದ್, ಮುಬಾರಕ್, ಪಾಲಾಕ್ಷ, ಅಯ್ಯಪ್ಪ ಶಿವಶಂಕರ್ ತಿಳಿಸಿದರು.

ಎಪಿಎಂಸಿ ಅಧಿಕಾರಿಗಳು ಮತ್ತು ಪೊಲೀಸರು ಇಲ್ಲಿನ ಕೂಲಿಗಳು, ಸಿಬ್ಬಂದಿ ಮತ್ತು ವರ್ತಕರಿಗೆ ಸೂಕ್ತ ಭದ್ರತೆ ಒದಗಿಸಬೇಕು. ಹಲ್ಲೆ ಕೋರರನ್ನು ಕೂಡಲೇ ಬಂಧಿಸಿ
ಕಾನೂನು ಕ್ರಮ ವಹಿಸಬೇಕು. ಮಾರುಕಟ್ಟೆಯಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಸೇರಿದಂತೆ ಸೂಕ್ತ ಭದ್ರತಾ ಕ್ರಮ ಒದಗಿಸಬೇಕು. ಪೊಲೀಸ್ ಔಟ್ ಪೊೀಸ್ಟ್ ನಿರ್ಮಿಸಿ ಸಿಬ್ಬಂದಿಯನ್ನು ನೇಮಿಸಬೇಕು. ನೂತನ ಚುನಾಯಿತ ಪ್ರತಿನಿಧಿಗಳ ಖಾಸಗಿ ಸೆಕ್ಯುರಿಟಿ ಏಜೆನ್ಸಿಯನ್ನು ನೇಮಿಸಿ ತಿಂಗಳಿಗೊಮ್ಮೆ ಸಭೆ ನಡೆಸಬೇಕೆಂದು ವ್ಯಾಪಾರಿಗಳ ಪದಾಧಿಕಾರಿಗಳು ಒತ್ತಾಯಿಸಿದರು.

Related Stories

No stories found.

Advertisement

X
Kannada Prabha
www.kannadaprabha.com