ಕೆ.ಜಿ ಬಾಳೆಗೆ ರು.14, ಕಿತ್ತಳೆಗೆ ಬರೀ ರು.27!

ಚಳಿಗಾಲದಲ್ಲಿ ಮೊದಲ ಬಾರಿಗೆ ಹಾಪ್‍ಕಾಮ್ಸ್ ನಿಂದ ಹಣ್ಣುಗಳು ಮತ್ತು ತರಕಾರಿ ಮೇಳ ಪ್ರಾರಂಭವಾಗಿದೆ. ಬಾಳೆ, ದಾಳಿಂಬೆ, ಕಿತ್ತಳೆ, ಪೈನಾ ಪಲ್, ಅವರೆ, ತೊಗರಿ, ಬೆಂಡೆಕಾಯಿ, ಈರುಳ್ಳಿ ಸೇರಿದಂತೆ ಅನೇಕ ಪದಾರ್ಥಗಳು ಒಂದೆ ಕಡೆ ಸಿಗಲಿವೆ. ಮೇಳವು ಲಾಲ್‍ಬಾಗ್...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಚಳಿಗಾಲದಲ್ಲಿ ಮೊದಲ ಬಾರಿಗೆ ಹಾಪ್‍ಕಾಮ್ಸ್ ನಿಂದ ಹಣ್ಣುಗಳು ಮತ್ತು ತರಕಾರಿ ಮೇಳ ಪ್ರಾರಂಭವಾಗಿದೆ. ಬಾಳೆ, ದಾಳಿಂಬೆ, ಕಿತ್ತಳೆ, ಪೈನಾ ಪಲ್, ಅವರೆ, ತೊಗರಿ, ಬೆಂಡೆಕಾಯಿ, ಈರುಳ್ಳಿ ಸೇರಿದಂತೆ ಅನೇಕ ಪದಾರ್ಥಗಳು ಒಂದೆ ಕಡೆ ಸಿಗಲಿವೆ. ಮೇಳವು ಲಾಲ್‍ಬಾಗ್ ರಸ್ತೆಯಲ್ಲಿರುವ ಹಾಪ್‍ಕಾಮ್ಸ್ ನ ಪ್ರಮುಖ ಕಚೇರಿಯಲ್ಲಿ ನಡೆಯುತ್ತಿದೆ.

ಇನ್ನೂ 10 ದಿನಗಳ ಕಾಲ ನಡೆಯಲಿದೆ. ರೈತರಿಂ ದ ನೇರವಾಗಿ ಖರೀದಿಸಿ ತಂದು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಗ್ರಾಹಕರಿಗೆ ಮತ್ತು ರೈತರಿಗೆ ಇಬ್ಬರಿಗೂ ಸರಿ ಹೊಂದುವ ರೀತಿಯಲ್ಲಿ ಬೆಲೆ ನಿರ್ಧರಿಸಲಾಗಿದೆ. ಮಾರುಕಟ್ಟೆಗಳಲ್ಲಿ ಪ್ರತಿ ಕೆ.ಜಿಗೆ ರು.25-30 ಗಳಿಗೆ ಮಾರಾಟವಾಗುವ ಪಚ್ಚಬಾಳೆ ಇಲ್ಲಿ ರು.14ಕ್ಕೆ ಮಾರಾಟ ಮಾಡಲಾಗುತ್ತಿದೆ. ಹಾಗೆಯೇ, ಕಿತ್ತಳೆ ರು.27, ದಾಳಿಂಬೆ ರು.100, ತೊಗರಿ ರು.200, ಅವರೆ ರು.62, ಬೀನ್ಸ್ ರು.60, ಸಪೋಟ ರು.30 ಗೆ ಮಾರಾಟ ಮಾಡಲಾಗುತ್ತಿದೆ.

ಬಾಳೆಗೆ ಒಳ್ಳೆಯ ಬೆಲೆ ಸಿಗದೆ ರೈತರು ಕಂಗಾಲಾಗಿರುವ ಕಾರಣ ಹಾಪ್‍ಕಾಮ್ಸ್ ಈ ಮೇಳ ಆಯೋಜಿಸಿದೆ. ಜೊತೆಗೆ ರೈತರ ಬೆಳೆಗಳಿಗೆ ಒಳ್ಳೆಯ ಬೆಲೆ ನೀಡಿ ಖರೀದಿ ಮಾಡುತ್ತಿದೆ.
ಈ ಮೊದಲು ರೈತರಿಂದ 6-7ಟನ್ ಮಾತ್ರ ಖರೀದಿಸಲಾಗುತ್ತಿತ್ತು. ಆದರೆ, ಮೇಳದ ಅಂಗವಾಗಿ 18ಟನ್ ಬಾಳೆಹಣ್ಣು ಖರೀದಿಸ ಲಾಗಿದೆ. ಕೋಲಾರ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರದಿಂದ ಹಣ್ಣನ್ನು ತರಿಸಿಕೊಳ್ಳಲಾಗಿದೆ.

ಜತೆಗೆ ಶೇ.10 ರಿಯಾಯಿತಿ ದರದಲ್ಲಿ ಎಲ್ಲ ಹಣ್ಣು ಹಾಗೂ ತರಕಾರಿಗಳು ದೊರೆಯಲಿವೆ. ಪ್ರತಿ ಬಾರಿಕರ್ನಾಟಕದಿಂದಮಹಾರಾಷ್ಟ್ರಕ್ಕೆ ಬಾಳೆಹಣ್ಣು ಪೂರೈಕೆಯಾಗುತ್ತಿತ್ತು. ಆದರೆ ಈ ಬಾರಿ ಅಲ್ಲಿಯೂ ಉತ್ತಮ ಬಾಳೆ ಫಸಲು ಬಂದಿದೆ. ಇದರ ನಡುವೆ ಖರೀದಿಯಲ್ಲಿ ಮಧ್ಯವರ್ತಿಗಳ ಕೈವಾಡವೂ ಅಡಕವಾಗಿದೆ. ಇದರಿಂದಾಗಿ ಬಾಳೆ ಹಣ್ಣು ಬೆಳೆದ ರೈತರಿಗೆ ಹೆಚ್ಚು ನಷ್ಟವಾಗುತ್ತಿದೆ. ಹೀಗಾಗಿಯೇ ಹಣ್ಣು ಹಾಗೂ ತರಕಾರಿಗಳನ್ನು ಸೇರಿ ಒಟ್ಟು 18ಟನ್ ಮಾರಾಟವಾಗಿದೆ. ಮೇಳದಲ್ಲಿ ಒಟ್ಟು 150ಟನ್ ಮಾರಾಟ ಮಾಡುವ ಗುರಿಯನ್ನು ಹಾಪ್‍ಕಾಮ್ಸ್ ಹೊಂದಿದೆ. ಇದೇ ಶನಿವಾರ ಭಾನುವಾರ, ರಾಮನಗರದ ಜಾನಪದ ಲೋಕದ ಬಳಿ ಹಾಗೂ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್‍ನ ಹತ್ತಿರ ಮೇಳವನ್ನು ಮಾಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com