ನಗರ ಸಮಸ್ಯೆ ಇತ್ಯರ್ಥಕ್ಕೆ 12 ಯೋಜನೆಗಳು ಅಗತ್ಯ

`ಸಿಟಿಜನ್ ಫಾರ್ ದಿ ಕ್ಯಾಂಪೇನ್' ಹೆಸರಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಗರದ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಯುನೈಟೇಡ್ ಟೆಕ್ನಾಲಜೀಸ್ ಮುಂದಾಗಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: `ಸಿಟಿಜನ್ ಫಾರ್ ದಿ ಕ್ಯಾಂಪೇನ್' ಹೆಸರಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಗರದ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಯುನೈಟೇಡ್ ಟೆಕ್ನಾಲಜೀಸ್ ಮುಂದಾಗಿದೆ.

ಮೊಬಿಲಿಟಿ, ತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಸುರಕ್ಷತೆ, ಸ್ವಂತ ಕಟ್ಟಡ, ಗುಣಮಟ್ಟದ ನೀರು ಮತ್ತು ಸಾರ್ವಜನಿಕ ಸುರಕ್ಷತೆ, ಸ್ವಂತ ಕಟ್ಟಡ, ಗುಣಮಟ್ಟದ ನೀರು ಮತ್ತು ಸಾರ್ವಜನಿಕ ಸ್ಥಳಗಳ  ಉನ್ನತೀಕರಣಕ್ಕಾಗಿ 12 ಯೋಜನೆಗಳನ್ನು ಯುನೈಟೇಡ್ ಟೆಕ್ನಾಲಜೀಸ್ ಸಿದ್ಧಪಡಿಸುತ್ತಿದೆ. ನೂತ ನ ಆಲೋಚನೆಗಳೊಂದಿಗೆ ಹೊಸ ಯೋಜನೆಗಳನ್ನು ರೂಪಿಸಿರುವ 12 ತಂಡಗಳನ್ನು ಶನಿವಾರ ನಗರದ ಹೋಟೆಲೊಂದರಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಪ್ರೋತ್ಸಾಹಿಸಲಾಯಿತು.

ಸಿಪಿಪಿಎಸ್ ಸಹ ಸಂಸ್ಥಾಪಕಿ ಸ್ಮಿತಾ ಶ್ರೀನಿವಾಸನ್ ಮಾತನಾಡಿ, ``ನೆರೆಹೊರೆ ಯವರ ಸಹಯೋಗದಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಸುಂದರ ನಗರ ರೂಪಿಸುವುದು ಸಂಸ್ಥೆಯ ಉದ್ದೇಶ. ಈಗಾಗಲೇ ಸಿದ್ಧಗೊಂಡಿರುವ 12 ಯೋಜನೆಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಅನುಮತಿಗೆ ಕಳುಹಿಸಲಾಗಿದೆ. ಬಿಬಿಎಂಪಿ ಅನುಮತಿ ನೀಡಿದರೆ ಮುಂದಿನ ಆರು ತಿಂಗಳೊಳಗೆ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುವುದು,'' ಎಂದು ಹೇಳಿದರು.

``ಸದ್ಯದ ಸಮಾಜಕ್ಕೆ ನೆರೆ ಸುಧಾರಣೆ ಪಾಲುದಾರಿಕೆ ಕಲ್ಪನೆ ಪ್ರಸ್ತುತವಾಗಿದೆ. ನೆರೆಹೊರೆಯವರ ಸಮಸ್ಯೆಗಳನ್ನು ಇತ್ಯರ್ಥ- ಗೊಳಿಸು-ವುದು ಪ್ರಮುಖ ಆದ್ಯತೆಯಾಗಿದೆ. ಬಿಪಿಎಸ್‍ಸಿ, ಸಿಪಿಪಿಎಸ್, ಡಬ್ಲ್ಯೂಆರ್ಐ ಇಂಡಿಯಾ ದಿ ಪ್ರ್ಯಾಕ್ಟೀಸ್ ಆ್ಯಂಡ್ ಯುನೈಟೇಡ್ ವೇ ಆಫ್ ಬೆಂಗಳೂರು ಪಾಲುದಾರಿಕೆ ಹೊಂದಿವೆ,'' ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com