ಮಕ್ಳು ವ್ಹೀಲಿಂಗ್ ಮಾಡಿದ್ರೆ ಪೋಷಕರಿಗೆ ದಂಡ

ಹುಷಾರ್! ಹೊಸ ವರ್ಷದ ಮೋಜು ಮಸ್ತಿ ಮಿತಿ ಮೀರದಿರಲಿ. ನೀವು ಮಾಡುವ ತಪ್ಪಿಗೆ ಪಾಪ ನಿಮ್ಮ ಪಾಲಕರು ದಂಡ ತೆರಬೇಕಾದೀತು! ಹೌದು. ಹೊಸ ವರ್ಷಾಚರಣೆ ವೇಳೆ ಮೇಲ್ಸೇತುವೆಗಳಮೇಲೆ 18ವರ್ಷದೊಳಗಿನವರು ವ್ಹಿಲೀಂಗ್, ತ್ರಿಬ್ಬಲ್ ರೈಡಿಂಗ್ ಮಾಡಿ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on

ಬೆಂಗಳೂರು: ಹುಷಾರ್! ಹೊಸ ವರ್ಷದ ಮೋಜು ಮಸ್ತಿ ಮಿತಿ ಮೀರದಿರಲಿ. ನೀವು ಮಾಡುವ ತಪ್ಪಿಗೆ ಪಾಪ ನಿಮ್ಮ ಪಾಲಕರು ದಂಡ ತೆರಬೇಕಾದೀತು! ಹೌದು. ಹೊಸ ವರ್ಷಾಚರಣೆ ವೇಳೆ ಮೇಲ್ಸೇತುವೆಗಳಮೇಲೆ 18ವರ್ಷದೊಳಗಿನವರು ವ್ಹಿಲೀಂಗ್, ತ್ರಿಬ್ಬಲ್ ರೈಡಿಂಗ್ ಮಾಡಿ ಎಡವಟ್ಟುಗಳನ್ನು ಮಾಡಿಕೊಳ್ಳುವುದು ಸರ್ವೆ ಸಾಮಾನ್ಯ.

ಇಂಥ ಅಪ್ರಾಪ್ತರು, ಯುವಕರಿಗೆ ಕಡಿವಾಣ ಹಾಕಲೆಂದೇ ಪೊಲೀಸರು ಈ ಬಾರಿ ವಿನೂತನ ಕ್ರಮ ಜಾರಿಗೆ ತರುತ್ತಿದ್ದಾರೆ. ಮಕ್ಕಳು ಸಂಚಾರ ನಿಯಮ ಉಲ್ಲಂಘಿಸಿದರೆ, ಅವರ ಪಾಲಕರಿಗೆ ದಂಡ ಹಾಕುವುದೇ ಈ ಕ್ರಮ.ರಾತ್ರಿ ವೇಳೆ ಮೇಲ್ಸೇತುವೆಗಳನ್ನು ಬಂದ್ ಮಾಡಲಾಗುವುದು. ಇದರ ನಡುವೆಯೂ ವ್ಹಿಲೀಂಗ್ ಮಾಡಿದರೆ, ಆ ಯುವಕರ ಪೋಷಕರಿಗೆ ದಂಡ ಹಾಗೂ ಶಿಕತ್ಷ ವಿಧಿಸಲಾಗುವುದು ಎಂದು ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಂ.ಎ.ಸಲೀಂ ತಿಳಿಸಿದ್ದಾರೆ.

ವಿಶೇಷ ಕಾರ್ಯಾಚರಣೆ: ಝೂಂಕಾರ್, ಜನಾಗ್ರಹ ಸಂಸ್ಥೆ ಹಾಗೂ ಸಂಚಾರ ಪೊಲೀಸರ ಸಹಯೋಗದೊಂದಿಗೆ ಆಯೋಜಿಸಿದ್ದ `ಮೈಕ್ಲೀನ್ ಬೆಂಗಳೂರು' ಎಂಬ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹೊಸ ವರ್ಷಾಚರಣೆಯಲ್ಲಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಡಿ.26ರಿಂದಲೇ ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದೇವೆ. ಇದಕ್ಕಾಗಿ 325 ಸಾಧನಗಳನ್ನು ಬಳಸಿಕೊಳ್ಳುತ್ತಿದ್ದೇವೆ ಎಂದು ಅವರು ಹೇಳಿದರು.

ಝೂಂಕಾರ್ ಸಂಸ್ಥೆ ಸಿಇಒ ಗ್ರೆಗ್ ಮೊರನ್ ಮಾತನಾಡಿ, ಸ್ವಚ್ಛ ಹಾಗೂ ಹಸಿರು ಬೆಂಗಳೂರಿಗಾಗಿ ಪ್ರತಿಯೊಬ್ಬರು ಪ್ರತಿಜ್ಞೆ ಮಾಡುವ ಅಗತ್ಯ ವಾಗಿದೆ. ಅದಕ್ಕಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜನರ ಸಹಕಾರ ದಿಂದ ಮಾತ್ರ  ಇಂತಹ ಅಭಿಯಾನಗಳ ಯಶಸ್ವಿ ಯಾಗುತ್ತವೆ ಎಂದರು. ಕಾರ್ಯಕ್ರಮದಲ್ಲಿ ಜನಾಗ್ರಹ ಸಂಸ್ಥೆಯ ಸ್ವಪ್ನಾ ಮತ್ತಿತರರು ಇದ್ದರು. ಸ್ವಂತ ವಾಹನ ಬೇಡ: ಡಿ.31ರಂದು ಜನ ಸಂದಣಿ ಉಂಟಾಗುವುದರಿಂದ ಸಾರ್ವಜನಿಕರು ಸ್ವಂತ ವಾಹನಗಳಿಗಿಂತ ಆಟೋ, ಬಸ್‍ಗಳಲ್ಲಿ ಪ್ರಯಾಣ ಮಾಡಿದರೆ ಒಳಿತು. ಅದಕ್ಕಾಗಿ ಅಂದು ರಾತ್ರಿ ಆಟೋ, ಮೆಟ್ರೋ ಹಾಗೂ ಬಿಎಂಟಿಸಿ ಬಸ್ ಗಳನ್ನು ಹೆಚ್ಚುವರಿಯಾಗಿ ಒದಗಿಸುವಂತೆ ಮನವಿ ಮಾಡಿದ್ದೇವೆ ಎಂದು ಸಂಚಾರಿ ಪೊಲೀಸ್ ಆಯುಕ್ತ ಸಲೀಂ ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com