ನೀರು ಕದ್ದರೆ ಕ್ರಮ ಎದುರಿಸಿ

ಎಚ್ಚರ ಇನ್ನು ಮುಂದೆ ನೀರು ಕದಿಯುವವರಿಗೆ ಗಂಡಾಂತರಕಾದಿದೆ. ಜಲಮಂಡಳಿಯಿಂದ ದಶಲಕ್ಷಗಟ್ಟಲೇ ನೀರು ಸೋರಿಕೆಯಾಗುತ್ತಿದ್ದು ಇದನ್ನು ತಪ್ಪಿಸಲು ಜಲಮಂಡಳಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ಬೆಂಗಳೂರು: ಎಚ್ಚರ ಇನ್ನು ಮುಂದೆ ನೀರು ಕದಿಯುವವರಿಗೆ ಗಂಡಾಂತರಕಾದಿದೆ. ಜಲಮಂಡಳಿಯಿಂದ ದಶಲಕ್ಷಗಟ್ಟಲೇ ನೀರು ಸೋರಿಕೆಯಾಗುತ್ತಿದ್ದು ಇದನ್ನು ತಪ್ಪಿಸಲು ಜಲಮಂಡಳಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿದೆ.

ಮಂಗಳವಾರ ಜಲಮಂಡಳಿಯಲ್ಲಿ ನಡೆದ ಬೇಡಿಕೆ, ಸಂಗ್ರಹಣೆ ಮತ್ತು ಬಾಕಿ ಪರಿಶೀಲನಾ ಸಭೆಯ ನೇತೃತ್ವವಹಿಸಿ ಮಾತನಾಡಿದ ಜಲಮಂಡಳಿ ಅಧ್ಯಕ್ಷ ಟಿ.ಎಂ.ವಿಜಯ್ ಭಾಸ್ಕರ್, ಲೆಕ್ಕಕ್ಕೆ ಸಿಗದ ನೀರಿನ ಪ್ರಮಾಣ ತಗ್ಗಿಸುವ ಸಲುವಾಗಿ ವಿವಿಧ ಹಂತಗಳಲ್ಲಿ ಸುಧಾರಣೆ ತರಲು ಕ್ರಮ ವಹಿಸಲಾಗಿದೆ ಎಂದರು.

2 ಇಂಚು ಮತ್ತು ಮೇಲ್ಪಟ್ಟು ಗಾತ್ರದ 577 ಗೃಹೇತರ ಸಂಪರ್ಕಗಳಿದ್ದು, ಈ ಎಲ್ಲ ಸಂಪರ್ಕಗಳಿಗೆ ಡಬ್ಬಲ್ ಮೀಟರ್ ಅಳವಡಿಸಬೇಕು. ಇದರಿಂದ ಪೂರೈಕೆಯಾಗುವ ನೀರಿನ ನಿಖರ ಮಾಹಿತಿ ಸಿಗುತ್ತದೆ. ನೀರಿನ ಹೊಸ ಸಂಪರ್ಕಗಳನ್ನು ನೀಡುವಾಗ ಕಡ್ಡಾಯವಾಗಿ ಸ್ಯಾಡಲ್ ಹಾಕಿ ಸಂಪರ್ಕ ನೀಡಬೇಕು. ಬೋರ್ ಪುಸ್ತಕದಲ್ಲಿ ದಾಖಲಿಸಬೇಕು. ಇದರಿಂದ ಬೋರ್ ಪಾಯಿಂಟ್ ಗಳಲ್ಲಿ ನೀರಿನ ಸೋರಿಕೆ ತಡೆಗಟ್ಟಬಹುದಾಗಿದೆ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಎಲ್ಲೆಲ್ಲಿ ಸಿಂಗಟ್ ಜೆಟ್ ನೀರಿನ ಮೀಟರ್ ಇವೆಯೋ ಅವುಗಳನ್ನು ಸಂಪೂರ್ಣವಾಗಿ ಬದಲಿಸಿ ಮಲ್ಟಿಜೆಟ್ ಮೀಟರುಗಳನ್ನು ಅಳವಡಿಸಬೇಕು. ಡಿಸೆಂಬರ್ ಅಂತ್ಯದೊಳಗೆ ಮೀಟರ್ ಬದಲಿಸುವ ಕಾರ್ಯದ ಮೂರನೇ ಒಂದು ಭಾಗದಷ್ಟಾದರೂ ಪ್ರಗತಿ ಆಗಬೇಕು. ಲೆಕ್ಕಕ್ಕೆ ಸಿಗದ ನೀರಿನ ನಿಯಂತ್ರಣ ಯೋಜನೆ ಜಾರಿಯಲ್ಲಿರುವ ಪ್ರದೇಶದಲ್ಲಿ ಸಿಂಗಲ್ ಜೆಟ್ ಮೀಟರುಗಳನ್ನು ಆದ್ಯತೆಯ ಮೇರೆಗೆ ಬದಲಿಸಬೇಕು. ಮಲ್ಟಿಜೆಟ್ ಮೀಟರ್ ಅಗತ್ಯ ಸಂಖ್ಯೆಯಲ್ಲಿ ಲಭ್ಯವಿರುವಂತೆ ಕ್ರಮ ಜರುಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾವೇರಿ ಸ್ಲಂ ಕಾಂಪೊನೆಂಟ್ ನಲ್ಲಿ ಇನ್ನೂ ಆಗಬೇಕಿರುವ ಸುಮಾರು 10,000 ನೀರಿನ ಸಂಪರ್ಕಗಳಿಗೆ ಆರ್.ಆರ್.ಸಂಖ್ಯೆ ನೀಡುವ ಕೆಲವನ್ನು ತ್ವರಿತವಾಗಿ ಪೂರೈಸಬೇಕು. ನವೆಂಬರ್ ನಲ್ಲಿ ಅತಿ ಹೆಚ್ಚು ಅಂದರೆ 22738 ದಶಲಕ್ಷ ಲೀಟರ್ ಬಿಲ್ಲಿನ ಮೂಲಕ ನೀರು ಪೂರೈಕೆಯಾಗಿದ್ದು, ಸರಾಸರಿಗಿಂತ 420 ದಶಲಕ್ಷ ಲೀಟರ್ ಲೆಕ್ಕಕ್ಕೆ ಸೇರಿಕೊಂಡಿರುವ ಬಗ್ಗೆ ಸಂಸತ ವ್ಯಕ್ತಪಡಿಸಿದ ಅವರು, ಸಿಬ್ಬಂದಿಯ ಪ್ರಯತ್ನವನ್ನು ಪ್ರಶಂಸಿಸಿದರು.

ಮೂರು ತಿಂಗಳಿಗಿಂತ ಹೆಚ್ಚು ಮೀಟರ್ ಸ್ಟಾಪ್ ಆಗಿದ್ದಲ್ಲಿ ಅಂತಹವುಗಳ ವಿವರವನ್ನು ಉಪ ವಿಭಾಗವಾರು ಸಿದ್ಧಪಡಿಸಲು ಸಭೆಯಲ್ಲಿ ಅಧಿಕಾರಿಗಳಿಗೆ ಆದೇಶಿಸಿದರು. ಪ್ರಧಾನ ಮುಖ್ಯ ಎಂಜಿನಿಯರ್ ಎಸ್.ಕೃಷ್ಣಪ್ಪ ಮುಖ್ಯ ಎಂಜಿನಿಯರ್ ಕೆಂಪರಾಮಯ್ಯ, ಮುಖ್ಯ ಆಡಳಿತಾಧಿಕಾರಿ ಜಗದೀಶ್, ಆರ್ಥಿಕ ಸಲಹೆಗಾರ ರಾಮಣ್ಣ ಹಾಗೂ ನಿರ್ವಹಣಾ ವಿಭಾಗದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com