ಜೀವ ರಕ್ಷಕ ಸಾಧನ ತೆಪ್ಪಕ್ಕೆ ಅಂತಾರಾಷ್ಟ್ರೀಯ ಮನ್ನಣೆ

ಯುಟಿಸಿ ಏರೋಸ್ಪೇಸ್ ಬೆಂಗಳೂರು ವಿಭಾಗ ಅಭಿವೃದ್ಧಿಪಡಿಸಿರುವ ಜೀವ ರಕ್ಷಕ ಸಾಧನ ತೆಪ್ಪಕ್ಕೆ...
ಜೀವ ರಕ್ಷಕ ಸಾಧನ ತೆಪ್ಪಕ್ಕೆ ಅಂತಾರಾಷ್ಟ್ರೀಯ ಮನ್ನಣೆ

ಬೆಂಗಳೂರು: ಯುಟಿಸಿ ಏರೋಸ್ಪೇಸ್ ಬೆಂಗಳೂರು ವಿಭಾಗ ಅಭಿವೃದ್ಧಿಪಡಿಸಿರುವ ಜೀವ ರಕ್ಷಕ ಸಾಧನ ತೆಪ್ಪಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರೆತಿದೆ.

ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಈ ಸಾಧನಕ್ಕೆ ಹಸಿರು ನಿಶಾನೆ ತೋರಿಸಿದ್ದು, ಅಲ್ಲಿಯ ವಿಮಾನಯಾನದ ರಕ್ಷಣಾ ಕಾರ್ಯಾಚರಣೆಗೆ ಇದನ್ನು ಬಳಸ ಲಾಗುತ್ತದೆ. ಭಾರತದಲ್ಲಿ ನಿರ್ಮಾಣಗೊಂಡಿರುವ ಸಾಧನವೊಂದು ಅಮೆರಿಕದ ವಿಮಾನಯಾನಕ್ಕೆ ಬಳಕೆಯಾಗುತ್ತಿರುವುದು ಇದೇ ಮೊದಲು. ಅನುಮೋದನೆ ಪಡೆದ ನಾಲ್ಕು- ವ್ಯಕ್ತಿಗಳ ಜೀವ ಉಳಿಸುವ ತೆಪ್ಪವು ಅಚ್ಚು ಕಟ್ಟಾದ ಹಗುರವಾದ ಸಾಧನ. ವಿಮಾನ ತುರ್ತಾಗಿ ನೀರಿನ ಮೇಲೆ ಇಳಿಯಬೇಕಾಗಿ ಬಂದರೆ ಈ ಸಾಧನದ ನೆರವಿನಿಂದ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ತಕ್ಷಣವೇ ರಕ್ಷಿಸಬಹುದಾಗಿದೆ.

ವಾಯುಯಾನಕ್ಕೆ ದೇಶೀಯವಾಗಿ ತಯಾರಿಸಿದ ಬಿಡಿಭಾಗ ಒದಗಿಸಲು ಯುಟಿಸಿ ಗಮನ ನೀಡಲಿದೆ. `ಮೇಕ್ ಇನ್ ಇಂಡಿಯಾ'ಗೆ  ಇಂಬು ದೊರೆಯುತ್ತದೆ ಎನ್ನುತ್ತಾರೆ  ಯುಟಿಸಿ ಏರೋಸ್ಪೇಸ್ ಸಿಸ್ಟಂಸ್ (ಇಂಡಿಯಾ) ಉಪಾಧ್ಯಕ್ಷ  ಕ್ರಿಸ್ ರಾವ್. ಪ್ರಧಾನಿಯ   ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಸಾಕಾರಗೊಳಿಸುವ ಕಾರ್ಯಕ್ಕೆ ಮುಂದಾಗಿದೆ ಎಂದಿದ್ದಾರೆ ನಾಗರಿಕ ವಿಮಾನಯಾನದ ಮಹಾ ನಿರ್ದೇಶಕಿ ಎಂ.ಸತ್ಯವತಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com