ಉನ್ನತ ಸಮಿತಿ ಸಭೆ

ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗೆ ಸಂಬಂಧಿಸಿದ ವಿವಿಧ ಯೋಜನಾ ಅನುಷ್ಠಾನದ ಬಗ್ಗೆ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿ ಸಭೆ ಬುಧವಾರ ನಡೆದಿದೆ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಗೆ ಸಂಬಂಧಿಸಿದ ವಿವಿಧ ಯೋಜನಾ ಅನುಷ್ಠಾನದ ಬಗ್ಗೆ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿ ಸಭೆ ಬುಧವಾರ ನಡೆದಿದೆ.

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮೈಸೂರಿನ ಪಾಂಡವಪುರದ ಬಳಿ ಏಷ್ಯನ್ ಪೇಂಯಿಂಟ್ ಘಟಕ ಸ್ಥಾಪನೆಯಾಗುತ್ತಿದೆ. ಸುಮಾರು ರು.2300 ಕೋಟಿ ವೆಚ್ಚದ ಈ ಘಟಕಕ್ಕೆ ತೆರಿಗೆ ವಿನಾಯಿತಿ ನೀಡುವುದು, ಉದ್ಯೋಗ ಸೃಷ್ಟಿ ಇತ್ಯಾದಿ ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೊಸ ಕೈಗಾರಿಕಾ ನೀತಿ ಪ್ರಕಾರವೇ ಸೌಲಭ್ಯ ನೀಡುತ್ತೇವೆ. ಇದರ ಜತೆಗೆ ಮಾಲೂರು ಬಳಿ ಇರುವ ವೋಲ್ವೋ ಘಟಕದ ಬಗ್ಗೆ ಚರ್ಚೆ ನಡೆದಿದೆ ಎಂದರು.

ಎಚ್‍ಡಿಕೆಗೆ ತಿರುಗೇಟು:
ಮಾಜಿಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ವಿರುದ್ಧ ನೀಡಿರುವ ಹೇಳಿಕೆ ಬಗ್ಗೆ ಇದೇ ಸಂದರ್ಭದಲ್ಲಿ ತಿರುಗೇಟು ನೀಡಿದ ಅವರು, `ನಾನು ಜಿ ಕೆಟಗರಿ ನಿವೇಶನ ತೆಗೆದುಕೊಂಡಿಲ್ಲ. ಡಾಲರ್ಸ್ ಕಾಲನಿಯಲ್ಲಿ ಬೇರೆ ಪ್ರಾಧಿಕಾರದಿಂದ ಪಡೆದ ನಿವೇಶನವನ್ನು ಬೇರೆಯವರ ಹೆಸರಿಗೆ ಕಾನೂನು ಪ್ರಕಾರವಾಗಿಯೇ ಸೇಲ್‍ಡೀಡ್ ಮಾಡಲಾಗಿತ್ತು. ಬಳಿಕ ಅದನ್ನು ಅವರು ಗಿಫ್ಟ್ ಡೀಡ್ ಮಾಡಿದ್ದಾರೆ. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಸನ್ ಆಫ್ ಸಿದ್ದರಾಮಯ್ಯ ಎಂದಾಗಿತ್ತು. ಬಳಿಕ ಅದನ್ನು ಸಿದ್ದರಾಮಯ್ಯ ಸನ್ ಆಫ್ ಸಿದ್ದರಾಮೇಗೌಡ ಎಂದು ಸರಿಮಾಡಿದ್ದೇವೆ. ಇದು ಅಪರಾಧವೇ? ಕುಮಾರಸ್ವಾಮಿ ಅವರು ಈ ರೀತಿಯ ಆಧಾರ ರಹಿತ ಹೇಳಿಕೆ ನೀಡಬಾರದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com