ಆನೆ ದಂತ ಮಾರುತ್ತಿದ್ದ ವ್ಯಕ್ತಿ ಸೆರೆ

ಆನೆ ದಂತ ಮಾರಾಟಕ್ಕೆ ಯತ್ನಿಸುತ್ತಿದ್ದ ಪಿ.ಶೇಖರ್ ಎಂಬಾತನನ್ನು ಬಂಧಿಸಿರುವ ಬಸವನಗುಡಿ ಪೊಲೀಸರು 15 ಕೆ.ಜಿ ತೂಕದ ಎರಡು ದೊಡ್ಡ ಗಾತ್ರದ ಆನೆ ದಂತಗಳನ್ನು ವಶಪಡಿಸಿಕೊಂಡಿದ್ದಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಆನೆ ದಂತ ಮಾರಾಟಕ್ಕೆ ಯತ್ನಿಸುತ್ತಿದ್ದ ಪಿ.ಶೇಖರ್ ಎಂಬಾತನನ್ನು ಬಂಧಿಸಿರುವ ಬಸವನಗುಡಿ ಪೊಲೀಸರು 15 ಕೆ.ಜಿ ತೂಕದ ಎರಡು ದೊಡ್ಡ ಗಾತ್ರದ ಆನೆ ದಂತಗಳನ್ನು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡಿನ ಧರ್ಮಪುರಿ ಮೂಲದ ಶೇಖರ್ ಹಾಗೂ ಸಹಚರ ಮಂಜುನಾಥ ಎಂಬುವರು ಹಳೇ ಕನಕಪುರ ರಸ್ತೆ ಕೃಷ್ಣರಾವ್  ಪಾರ್ಕ್ ಪೂರ್ವ ಗೇಟ್ ಬಳಿ ಆನೆ ದಂತ ಮಾರಾಟಕ್ಕೆ ಗ್ರಾಹಕರಿಗಾಗಿ ಹುಡುಕಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಬಸವನಗುಡಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಮಂಜುನಾಥ ಎಂಬಾತ ಪರಾರಿಯಾಗಿದ್ದಾನೆ.

ಯಾವ ಅರಣ್ಯದಲ್ಲಿ ಆನೆಗಳನ್ನು ಹತ್ಯೆಗೈದು ದಂತ ಕದಿಯಲಾಗಿತ್ತು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com