
ಬೆಂಗಳೂರು: ದಾಖಲೆ ಇಲ್ಲದೇ ಸಾಗಿಸುತ್ತಿದ್ದ ರು.32.5 ಲಕ್ಷ ಹವಾಲಾ ಹಣ ವಶಪಡಿಸಿ ಕೊಂಡಿರುವ ಎಸ್.ಜೆ ಪಾರ್ಕ್ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ತಮಿಳುನಾಡಿನ ಕೃಷ್ಣಗಿರಿಯ ಶೇಖರ್, ಗೋವಿಂದರಾಜು, ಲೋಕೇಶ್, ಶಿವಗುರು ಹಾಗೂ ಚಂದ್ರು ಬಂಧಿತರು. ಆರೋಪಿಗಳು ಸೋಮವಾರ ರಾತ್ರಿ ತಮಿಳುನಾಡು ನೋಂದಣಿ ಸಂಖ್ಯೆಯ ಇಂಡಿಕಾ ಕಾರಿನಲ್ಲಿ ಸೊಂಟದಲ್ಲಿ ಹಾಗೂ ನಿಕ್ಕರ್‍ಗಳಲ್ಲಿ ಹಣ ತುಂಬಿಕೊಂಡು ಎನ್.ಆರ್ ರಸ್ತೆಯಲ್ಲಿ ತೆರಳುತ್ತಿದ್ದರು.
ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು, ವಾಹನ ತಡೆದು ಪರಿಶೀಲಿಸಿದಾಗ ಹಣ ಪತ್ತೆಯಾಗಿದೆ. ವಿಚಾರಣೆ ವೇಳೆ ಆರೋಪಿಗಳ ಬಳಿ ಯಾವುದೇ ದಾಖಲೆಗಳು ಪತ್ತೆಯಾಗಿಲ್ಲ. ಒಮ್ಮೆ ತಾವು ಚಿನ್ನಾಭರಣ, ಖರೀದಿಗೆ ಬಂದಿದ್ದಾಗಿ ಹೇಳಿದರೆ, ಮತ್ತೊಮ್ಮೆ ಚಿನ್ನಾಭರಣ ಮಾರಿದ ಹಣವಿದು ಎಂದು ಹೇಳುತ್ತಿದ್ದಾರೆ. ಹೇಳಿಕೆಯಲ್ಲಿ ವ್ಯತ್ಯಾಸವಿದೆ. ಅಲ್ಲದೇ ಸೂಕ್ತ ದಾಖಲೆಗಲಿಲ್ಲದ ಕಾರಣ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದರು.
Advertisement