ಬೆಂಗಳೂರಿನಲ್ಲಿ ಅಮೆರಿಕಾದ ಬಿಬಿಎಂ, ಎಂಬಿಎ ಕೋರ್ಸ್

ಇಂಡಿಯಾನ ಯೂನಿವರ್ಸಿಟಿ ಆಫ್ ಪೆನಿಸಿಲ್ವೇನಿಯಾ(ಐಯುಪಿ) ಮತ್ತು ಪಿಇಎಸ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಮೆರಿಕಾದ ಬಿಬಿಎ ಮತ್ತು...
ಪತ್ರಿಕಾಗೋಷ್ಠಿ ನಡೆಸಿದ ಐಯುಪಿ ಮತ್ತು ಪಿಇಎಸ್ ವಿಶ್ವವಿದ್ಯಾಲಯದ ನಿರ್ದೇಶಕ ಪ್ರಶಾಂತ್ ಭಾರದ್ವಾಜ್, ದಿವ್ಯಶ್ರೀ ರವಿಶಂಕರ್ ಮತ್ತಿತರರು
ಪತ್ರಿಕಾಗೋಷ್ಠಿ ನಡೆಸಿದ ಐಯುಪಿ ಮತ್ತು ಪಿಇಎಸ್ ವಿಶ್ವವಿದ್ಯಾಲಯದ ನಿರ್ದೇಶಕ ಪ್ರಶಾಂತ್ ಭಾರದ್ವಾಜ್, ದಿವ್ಯಶ್ರೀ ರವಿಶಂಕರ್ ಮತ್ತಿತರರು

ಬೆಂಗಳೂರು: ಇಂಡಿಯಾನ ಯೂನಿವರ್ಸಿಟಿ ಆಫ್ ಪೆನಿಸಿಲ್ವೇನಿಯಾ(ಐಯುಪಿ) ಮತ್ತು ಪಿಇಎಸ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಅಮೆರಿಕಾದ ಬಿಬಿಎ ಮತ್ತು ಎಂಬಿಎ ಕೋರ್ಸ್ ಗಳನ್ನು ಬೆಂಗಳೂರಿನಲ್ಲಿ ಆರಂಭಿಸಲಾಗುತ್ತಿದೆ.

ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಿಇಎಸ್-ಐಯುಪಿ ವಿಶ್ವವಿದ್ಯಾಲಯದ ನಿರ್ದೇಶಕ ಪ್ರಶಾಂತ್ ಭಾರದ್ವಜ್, ಅಮೆರಿಕಾದಲ್ಲಿರುವ ಬಿಬಿಎ ಮತ್ತು ಎಂಬಿಎ ಕೋರ್ಸ್ ಗಳನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಲಾಗುತ್ತಿದೆ. ಈ ಕೋರ್ಸ್ ಗಳು ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದ್ದು, ಇನ್ನು ಒಂದು ವರ್ಷ ಅಮೆರಿಕಾದಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಅಮೆರಿಕಾಗೆ ಹೋಗಲು ಇಚ್ಛಿಸದೇ ಇರುವ ವಿದ್ಯಾರ್ಥಿಗಳು ಬೆಂಗಳೂರಿನಲ್ಲೇ ಕೋರ್ಸ್ ನ್ನು ಪೂರ್ಣಗೊಳಿಸಬಹುದು. ಪದವಿ ಪಡೆದ ವಿದ್ಯಾರ್ಥಿಗಳು ಅಮೆರಿಕಾದ ಐಯುಪಿ ಬಿಬಿಎಂ ಪದವಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ: www.pesiup.com ವೆಬ್ ಸೈಟನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ: 8453536991

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com