ಕಾನ್ಸುಲೇಟ್ ಕಚೇರಿ ತೆರೆಯಲು ಅಮೆರಿಕಕ್ಕೆ ಮನವಿ

ರಾಜ್ಯದ ಎರಡನೇ ಅತಿ ದೊಡ್ಡ ಹೂಡಿಕೆ ದೇಶವಾಗಿರುವ ಅಮೆರಿಕ, ಬೆಂಗಳೂರಿನಲ್ಲಿ ಕಾನ್ಸುಲೇಟ್ ಕಚೇರಿ ತೆರೆಯಲು ಮುಂದಾಗಬೇಕು ಎಂದು...
ಅಮೆರಿಕ ರಾಯಭಾರ ಕಚೇರಿ ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಅಮೆರಿಕ ರಾಯಭಾರ ಕಚೇರಿ ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಬೆಂಗಳೂರು: ರಾಜ್ಯದ ಎರಡನೇ ಅತಿ ದೊಡ್ಡ ಹೂಡಿಕೆ ದೇಶವಾಗಿರುವ ಅಮೆರಿಕ, ಬೆಂಗಳೂರಿನಲ್ಲಿ ಕಾನ್ಸುಲೇಟ್ ಕಚೇರಿ ತೆರೆಯಲು ಮುಂದಾಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಮೆರಿಕದ ರಾಯಭಾರಿ ರಿಚರ್ಡ್ ರಾಹುಲ್ ವರ್ಮಾ ಅವರಿಗೆ ಮನವಿ ಮಾಡಿದ್ದಾರೆ.

`ಇನ್ವೆಸ್ಟ್ ಕರ್ನಾಟಕ-2016' ಹಿನ್ನೆಲೆಯಲ್ಲಿ ಮಂಗಳವಾರ ತಮ್ಮನ್ನು ಭೇಟಿ ಮಾಡಿದ ರಿಚರ್ಡ್ ರಾಹುಲ್ ವರ್ಮಾಅವರೊಂದಿಗೆ ಈ ವಿಷಯ ಚರ್ಚಿಸಿದ ಸಿಎಂ, ಕಾರ್ಯಕ್ರಮಕ್ಕೆ ಅಮೆರಿಕದಿಂದ ಹೂಡಿಕೆದಾರರನ್ನು ಕರೆತರಬೇಕೆಂದು ಮನವಿ ಮಾಡಿದರು. ``ರಾಜ್ಯದ ವಾಣಿಜ್ಯ ಸಾಧ್ಯತೆಗಳು ಅಪಾರವಾಗಿ ದೆ. ಶೇ.12ರಷ್ಟು ಒಟ್ಟು ಹೂಡಿಕೆ ಮಾಡುವ ಮೂಲಕ ಎರಡನೇ ಅತಿದೊಡ್ಡ ಹೂಡಿಕೆದೇಶವಾಗಿರುವ ಅಮೆರಿಕ ಸಹಭಾಗಿತ್ವ ದೇಶವಾಗಲು ಮುಂದಾಗಬೇಕು. ಬೆಂಗಳೂರಿ ನಲ್ಲಿ ಅಮೆರಿಕದ 300 ಕಂಪನಿಗಳಿವೆ,'' ಎಂದು ಮುಖ್ಯಮಂತ್ರಿ ವಿವರಿಸಿದರು.

ಸರ್ಕಾರದ ಪರವಾಗಿ ಮಾತನಾಡಿದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ, ``ವೀಸಾ ಸಮಸ್ಯೆ ತುರ್ತು ಇತ್ಯರ್ಥಕ್ಕೆ ನೆರವಾಗಲು ಬೆಂಗಳೂರಿನಲ್ಲಿ ಅಮೆರಿಕದ ಕಾನ್ಸುಲೇಟ್ ಕಚೇರಿಯೊಂದನ್ನು ತೆರೆಯ ಬೇಕು,'' ಎಂದು ರಾಯಭಾರಿ ರಿಚರ್ಡ್ ರಾಹುಲ್ ವರ್ಮಾ ಅವರಿಗೆ ಮನವಿ ಮಾಡಿದರು. ಉಭಯ ದೇಶಗಳ ವಾಣಿಜ್ಯ ಸಂಬಂಧಗಳನ್ನು ಬಲಗೊಳಿಸುವ ಉದ್ದೇಶದಿಂದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಹಾಗೂ ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಶೀಘ್ರದಲ್ಲೇ ಅಮೆರಿಕ ರಾಯಭಾರಿಯನ್ನು ನವದೆಹಲಿಯಲ್ಲಿ ಭೇಟಿ ಮಾಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com